You are here
Home > Koppal News > ಸಹಕಾರ ಸಂಘಗಳ ಕಾರ್ಯದರ್ಶಿ ಹಾಗೂ ಚುನಾವಣಾಧಿಕಾರಿಗಳಿಗೆ ತರಬೇತಿ

ಸಹಕಾರ ಸಂಘಗಳ ಕಾರ್ಯದರ್ಶಿ ಹಾಗೂ ಚುನಾವಣಾಧಿಕಾರಿಗಳಿಗೆ ತರಬೇತಿ

  ಜಿಲ್ಲಾಡಳಿತ ಭವನದ ಸಹಕಾರ ಸಂಘಗಳ ಉಪನಿಬಂಧಕರ ಕಛೇರಿಯಲ್ಲಿ ಸಹಕಾರ ಸಂಘಗಳ ಕಾರ್ಯದರ್ಶಿ ಹಾಗೂ ಚುನಾವಣಾಧಿಕಾರಿಗಳಿಗೆ ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
  ಕಾರ್ಯಕ್ರಮದ ಉದ್ಘಾಟನೆಯನ್ನು ಸಹಕಾರ ಸಂಘಗಳ ಉಪನಿಬಂಧಕ ಕೆ.ಮುನಿಯಪ್ಪ ಅವರು ನೆರವೇರಿಸಿ ಮಾತನಾಡಿ, ೯೭ನೇ ಸಂವಿಧಾನ ತಿದ್ದುಪಡಿ ಹಿನ್ನಲೆಯಲ್ಲಿ ಸಹಕಾರ ಕಾಯ್ದೆಗೆ ತಿದ್ದುಪಡಿಯಾಗಿದ್ದು, ಬದಲಾದ ಕಾಯ್ದೆಗೆ ಅನುಗುಣವಾಗಿ ಸಹಕಾರ ಸಂಘಗಳ ಚುನಾವಣಾ ಪ್ರಕ್ರಿಯೆಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಪ್ರತ್ಯೇಕವಾಗಿ ಸಹಕಾರ ಸಂಘಗಳ ಚುನಾವಣಾ ಆಯೋಗ ರಚನೆಯಾಗಿದ್ದು ಸಹಕಾರ ಸಂಘಗಳ ಚುನಾವಣಾ ಆಯೋಗದ ಮೂಲ ಪ್ರತಿ ಸಹಕಾರ ಸಂಘಗಳಿಗೆ ಚುನಾವಣೆ ಜರುಗಿಸಬೇಕಾಗಿದೆ. ಈಗಾಗಲೇ ಚುನಾವಣೆ ಇರುವ ಸಹಕಾರ ಸಂಘಗಳಿಗೆ ಚುನಾವಣಾಧಿಕಾರಿಗಳನ್ನು ನೇಮಿಸಲಾಗಿದ್ದು, ಚುನಾವಣಾಧಿಕಾರಿಗಳು ಹಾಗೂ ಕಾರ್ಯದರ್ಶಿಗಳು ಬದಲಾದ ಕಾಯ್ದೆಗೆ ಅನುಗುಣವಾಗಿ ಸಂಘಗಳ ಚುನಾವಣೆಯನ್ನು ಯಶಸ್ವಿಯಾಗಿ ಜರುಗಿಸಲು ಸಭೆಯಲ್ಲಿ ತಿಳಿಸಿದರು. 
  ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ರಾಜ್ಯ ಸಹಕಾರ ಮಹಾಮಂಡಳ ನಿಯಮಿತ ನಿರ್ದೇಶಕ ಹಾಗೂ ಜಿಲ್ಲಾ ಸಹಕಾರ ಯೂನಿಯನ್ ನಿಯಮಿತ ಅಧ್ಯಕ್ಷ ಶೇಖರಗೌಡ ಮಾಲಿಪಾಟೀಲ್ ಮಾತನಾಡಿ, ಸಹಕಾರ ಸಂಘಗಳ ಕಾನೂನು ೧೯೫೯ ಕ್ಕೆ ಸಂವಿಧಾನ ೯೭ನೇ ತಿದ್ದುಪಡಿ ಹಿನ್ನಲೆಯಲ್ಲಿ ಸಾಕಷ್ಟು ಬದಲಾವಣೆಯಾಗಿದ್ದು, ಬದಲಾದ ಕಾಯ್ದೆಗೆ ಅನುಗುಣವಾಗಿ ಚುನಾವಣಾಧಿಕಾರಿಗಳು ಹಾಗೂ ಕಾರ್ಯದರ್ಶಿಗಳು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿ, ಚುನಾವಣೆಯನ್ನು ಯಶಸ್ವಿಯಾಗಿ ಜರುಗಿಸಬೇಕೆಂದೆ ಅವರು ಕರೆ ನೀಡಿದರು.
  ಕಾರ್ಯಕ್ರಮದಲ್ಲಿ ಜಿಲ್ಲಾ ಸಹಕಾರ ಯೂನಿಯನ್ ನಿಯಮಿತದ ಉಪಾಧ್ಯಕ್ಷೆ ಶಕುಂತಲಾ ಹುಡೇಜಾಲಿ, ಸಹಕಾರ ಸಂಘಗಳ ಸಹಾಯಕ ನಿಬಂಧಕ ಇಕ್ಬಾಲ್ ಅಹ್ಮದ್, ಸಹಕಾರ ಸಂಘಗಳ ಲೆಕ್ಕ-ಪರಿಶೋಧನಾ ಇಲಾಖೆಯ ಉಪನಿರ್ದೇಶಕ ಬಸವರಾಜ ಪಾಟೀಲ್ ಕೊಂಕಲ್, ಧಾರವಾಡದ ನಿವೃತ್ತ ಸಹಾಯಕ ಸಹಕಾರ ಶಿಕ್ಷಣಾಧಿಕಾರಿ ಎಸ್.ಎನ್.ಹಾದಿಮನಿ, ಸಹಕಾರ ಅಭಿವೃದ್ದಿ ಅಧಿಕಾರಿಗಳಾದ ಎಲ್.ತಿಪ್ಪೇಸ್ವಾಮಿ ಕುಷ್ಟಗಿ, ಶ್ರೀನಿವಾಸರಾವ್ ಕುಲಕರ್ಣಿ ಗಂಗಾವತಿ, ಬಸವರಾಜ ಶಿಗೇನಹಳ್ಳಿ ಯಲಬುರ್ಗಾ, ಬಿ.ಎ.ಕೇಸರಿಮಠ, ಹಿರಿಯ ನಿರೀಕ್ಷಕ ದಸ್ತಗಿರಿ ಅಲಿ, ಜಿಲ್ಲಾ ಸಹಕಾರ ಯೂನಿಯನ್‌ನ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಶರಣಬಸಪ್ಪ ಕಾಟ್ರಳ್ಳಿ ಉಪಸ್ಥಿತರಿದ್ದರು. 
  ಚುನಾವಣೆ ಪ್ರಕ್ರಿಯೆ ಕುರಿತು ನಿವೃತ್ತ ಸಹಾಯಕ ಸಹಕಾರ ಶಿಕ್ಷಣಾಧಿಕಾರಿ ಎಸ್.ಎಸ್.ಹಾದಿಮನಿ ಹಾಗೂ ಸಹಕಾರ ಸಂಘಗಳ ಉಪನಿಬಂಧಕ ಕೆ.ಮುನಿಯಪ್ಪ ಅವರು ಉಪನ್ಯಾಸ ನೀಡಿದರು. ಪ್ರಾರಂಭದಲ್ಲಿ ಎಸ್.ಆರ್.ಗಾಯತ್ರಿ ಅವರು ಪ್ರಾರ್ಥಿಸಿದರು. ಕುಷ್ಟಗಿಯ ಸಹಕಾರ ಅಭಿವೃದ್ದಿ ಅಧಿಕಾರಿ ಎಲ್.ತಿಪ್ಪೇಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಸಹಕಾರ ಯೂನಿಯನ್‌ನ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಶರಣಬಸಪ್ಪ ಕಾಟ್ರಳ್ಳಿ ಅವರು ಸ್ವಾಗತಿಸಿ ನಿರೂಪಿದರು. ಕೊನೆಯಲ್ಲಿ ಮಹಾಂತೇಶ ಈಳಿಗೇರ ವಂದಿಸಿದರು.

Leave a Reply

Top