You are here
Home > Koppal News > ಮೋಟಾರ್ ರಿವೈಂಡಿಂಗ್ & ಪಂಪ್‌ಸೆಟ್ ರಿಪೇರಿ ಉಚಿತ ತರಬೇತಿ ಅರ್ಜಿ ಆಹ್ವಾನ.

ಮೋಟಾರ್ ರಿವೈಂಡಿಂಗ್ & ಪಂಪ್‌ಸೆಟ್ ರಿಪೇರಿ ಉಚಿತ ತರಬೇತಿ ಅರ್ಜಿ ಆಹ್ವಾನ.

ಕೊಪ್ಪಳ ಅ. ೧೪ (ಕ ವಾ) ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ (ಸಿಡಾಕ್), ಧಾರವಾಡ, ಎಂ.ಎಸ್.ಎಂ.ಇ ಮಂತ್ರಾಲಯ, ನವದೆಹಲಿ, ನಿಮ್ಸ್‌ಮೆ, ಹೈದರಾಬಾದ್ ಹಾಗೂ ಜಿಲ್ಲಾ ಕೈಗಾರಿಕಾ ಕೇಂದ್ರ, ಕೊಪ್ಪಳ ಇವರ ಸಂಯುಕ್ತಾಶ್ರಯದಲ್ಲಿ ಕೊಪ್ಪಳದಲ್ಲಿ ಹಮ್ಮಿಕೊಳ್ಳುವ ಮೋಟಾರ್ ರಿವೈಂಡಿಂಗ್ ಮತ್ತು ಪಂಪ್‌ಸೆಟ್ ರಿಪೇರಿ ಬಗ್ಗೆ ೩೬ ದಿನಗಳ ಕೌಶಲ್ಯ ತರಬೇತಿಗಾಗಿ ಕೊಪ್ಪಳ ಜಿಲ್ಲೆಯ ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.
 ತರಬೇತಿ ಅವಧಿಯಲ್ಲಿ ಮೋಟಾರ್ ರಿವೈಂಡಿಂಗ್ ಮತ್ತು ಪಂಪ್‌ಸೆಟ್ ರಿಪೇರಿ ಬಗ್ಗೆ ಥೀಯರಿ, ಪ್ರ್ಯಾಕ್ಟಿಕಲ್ ಮತ್ತು ಪ್ರ್ಯಾಕ್ಟೀಸ್ ಮಾಡಿಸುವದು, ಉದ್ಯಮ, ಉದ್ಯಶೀಲತೆ, ಉದ್ಯಮಶೀಲತೆಯ ಗುಣ ಲಕ್ಷಣಗಳ ಬಗ್ಗೆ ಮಾಹಿತಿ, ಯೋಜನಾ ವರದಿ ತಯಾರಿಕೆ ಮತ್ತು ಸಾಲ ಸೌಲಭ್ಯ ಹಾಗೂ ಮುಂತಾದ ಸಂಬಂಧಪಟ್ಟ ವಿಷಯಗಳ ಬಗ್ಗೆ ಮಾಹಿತಿ ನೀಡಿ, ತರಬೇತಿ ಪಡೆದ ಅಬ್ಯರ್ಥಿಗಳಿಗೆ ಸರ್ಕಾರದ ಪ್ರಮಾಣ ಪತ್ರ ನೀಡಲಾಗುವದು.  ತರಬೇತಿ ಪಡೆಯಲು ಆಸಕ್ತರಿರುವ ೧೮-೩೫ ವರ್ಷ ವಯೋಮಿತಿಯುಳ್ಳ, ಕನಿಷ್ಠ ೧೦ ನೇ ತರಗತಿ ಪಾಸಾದ ಅಥವಾ ಹೆಚ್ಚಿನ ವಿದ್ಯಾಭ್ಯಾಸ ಮಾಡಿದವರೂ ಕೂಡ ಅರ್ಜಿ ಸಲ್ಲಿಸಬಹುದಾಗಿದೆ. ಆಸಕ್ತರು, ಜಂಟಿ ನಿರ್ದೇಶಕರವರ ಕಚೇರಿ, ಜಿಲ್ಲಾ ಕೈಗಾರಿಕಾ ಕೇಂದ್ರ, ಕೊಪ್ಪಳ ಇಲ್ಲಿ ನಿಗದಿತ ಅರ್ಜಿ ನಮೂನೆ ಪಡೆದು ಅಥವಾ ಬಿಳಿ ಹಾಳೆಯಲ್ಲಿ ಸ್ವ ವಿವರವನ್ನು ಭರ್ತಿ ಮಾಡಿ, ಅರ್ಜಿ ಜೊತೆಗೆ ವಯಸ್ಸಿನ ದಾಖಲೆ (ಎಸ್.ಎಸ್.ಎಲ್.ಸಿ ಮಾರ್ಕ್ಸ್ ಕಾರ್ಡ್), ಆಧಾರ ಕಾರ್ಡ್, ಜ್ಯಾತಿ ಪ್ರಮಾಣ ಪತ್ರ (ಈಗ ಇದ್ದಲ್ಲಿ) ದ ಪ್ರತಿಗಳೊಂದಿಗೆ ಮತ್ತೆ ಸದರಿ ವಿಳಾಸದಲ್ಲಿಯೇ ದಿನಾಂಕ ೨೧-೧೦-೨೦೧೫ ಬುಧವಾರದಂದು ಸಾಯಂಕಾಲ ೪.೦೦ ಗಂಟೆಯೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ೯೯೮೦೬೧೮೨೮೩ / ೯೯೮೬೩೩೨೭೩೬  ಸಂಖ್ಯೆಗೆ ಸಂಪರ್ಕಿಸಬಹುದು.

Leave a Reply

Top