You are here
Home > Koppal News > ಡಾ. ಅಬ್ದುಲ್ ಕಲಾಂ ನಿಧನ ಸಂಸದ ಸಂಗಣ್ಣ ಕರಡಿ ಸಂತಾಪ.

ಡಾ. ಅಬ್ದುಲ್ ಕಲಾಂ ನಿಧನ ಸಂಸದ ಸಂಗಣ್ಣ ಕರಡಿ ಸಂತಾಪ.

ಕೊಪ್ಪಳ, ಜು.೨೮ ಹೃದಯಾಘಾತದಿಂದ ಸೋಮವಾರ ನಿಧನರಾದ ಭಾರತ ರತ್ನ, ಮಾಜಿ ರಾಷ್ಟ್ರಪತಿ ಡಾ|| ಎ.ಪಿ.ಜೆ ಅಬ್ದುಲ್ ಕಲಾಂ ಅವರ ಅಗಲುವಿಕೆಗೆ ಕೊಪ್ಪಳ ಸಂಸದ ಸಂಗಣ್ಣ ಕರಡಿ ತೀವ್ರ ಸಂತಾಪ ಸೂಚಿಸಿದ್ದಾರೆ.
     ಅಬ್ದುಲ್ ಕಲಾಂ ಅವರು ವಿಶ್ವಮಟ್ಟದಲ್ಲಿ ಭಾರತದ ಘನತೆ ಗೌರವಗಳನ್ನು ಬೆಳಗಿಸಿದ ಮಹಾನ್ ವ್ಯಕ್ತಿಯಾಗಿದ್ದಾರೆ. ಕೊನೆ ಉಸಿರಿರುವವರೆಗೂ ಮಕ್ಕಳು ಹಾಗೂ ಯುವಕರೊಂದಿಗೆ ಸಂವಾದ ಕಾರ್ಯಕ್ರಮಗಳ ಮೂಲಕ ಉತ್ಸಾಹ ತುಂಬಿ ಅವರ ಬದುಕಿಗೆ ಬೆಳಕನ್ನು ತುಂಬುವ ಕೆಲಸ ಮಾಡಿರುವ ಅವರು ಮಹಾನ್ ಮಾನವತಾವಾದಿಯಾಗಿದ್ದಾರೆ. ಅಲ್ಲದೇ, ಇವರು ದೇಶದ ರಾಷ್ಟ್ರಪತಿಗಳಾಗಿ ಕೆಲಸ ಮಾಡಿರುವ ದಿನಗಳು ನಮ್ಮೆಲ್ಲರಿಗೂ ಅವಿಸ್ಮರಣೀಯವಾಗಿವೆ. ಅಂತಹ ಮಹಾನ್ ಚೇತನ, ಅಪ್ರತಿಮ ವಿಜ್ಞಾನಿ ಹಾಗೂ ದೇಶಭಕ್ತನನ್ನು ಕಳೆದುಕೊಂಡಿರುವ ಭಾರತ ದೇಶ ಬಡವಾದಂತಾಗಿದೆ ಎಂದು ಸಂಗಣ್ಣ ಕರಡಿ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.

Leave a Reply

Top