ದಾಸೋಹಕ್ಕೆ ಹರಿದು ಬಂದ ದವಸ, ಧಾನ್ಯ.

ಕೊಪ್ಪಳ-23- ಶ್ರೀಗವಿಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಜರುಗುವ ಮಹಾ ದಾಸೋಹಕ್ಕೆ ವಿವಿಧ ಗ್ರಾಮಗಳಿಂದ ಸದ್ಭಕ್ತರು ದವಸ, ದಾನ್ಯ, ರೊಟ್ಟಿ ಹಾಗೂ ತರಕಾರಿಗಳನ್ನು ಸಮರ್ಪಣೆ ಮಾಡಿದರು. ಯಲಬುರ್ಗಾ ತಾಲೂಕಿನ ಬೆದವಟ್ಟಿ, ಸಿಂಧನೂರು ತಾಲೂಕಿನ ಹಂಚಿನಾಳ, ಉಮಲೂಟಿ, ಕುಷ್ಟಗಿ ತಾಲೂಕಿನ ತಾವರಗೇರಾ, ಹಿರೇಮನ್ನಾಪೂರ, ಸಿದ್ದಾಪೂರ, ಕೊಡದಾಳ, ಬೆವಿನಾಳ, ಕೆ ಹೊಸೂರು, ಲಿಂಗದಳ್ಳಿ, ತಿಪ್ಪರಸನಾಳ, ಕಲಕೇರಿ, ಕುಷ್ಟಗಿ, ಪುಟಗಮರಿ, ಕಂದಕೂರು, ಭಾಗ್ಯನಗರ, ಇಂದರಗಿ, ಕುರುಬನಾಳ, ದದೆಗಲ್ಲ, ಯತ್ನಟ್ಟಿ, ಹೆಚ್.ವಿ.ಕುಂಟಾ, ಚಿತ್ತಾಪುರ, ಚಿಕ್ಕಬೊಮ್ಮನಾಳ, ಲಕಮನಗುಳಿ, ಹೊನ್ನುಂಚಿ, ಗುನ್ನಾಳ, ಲೇಬಗೇರಿ, ಹಿರೇಅರಳಹಳ್ಳಿ, ಗಂಗನಾಳ, ಗುಡಿಗೇರಿ, ಬುಕನಟ್ಟಿ, ಗೌರಿಪುರ, ಮಾಟಲದಿನ್ನಿ, ಉಚ್ಚಲಕುಂಟ, ಜಿನ್ನಾಪುರ, ಕಲ್ಲತಾವರಗೇರಾ, ಚಾಮಲಾಪೂರ ಚವಡಾಪೂರ, ವಣಜಭಾವಿ ಮತ್ತು ಮುಸ್ಲಾಪೂರ ಗ್ರಾಮದ ಸದ್ಭಕ್ತರು ಮಹಾದಾಸೋಹಕ್ಕೆ ಕಾಣಿಕೆ ಸಮರ್ಪಿಸಿದರು. ಕಾಣಿಕೆ ಸಲ್ಲಿಸಿದ ಭಕ್ತರಿಗೆ ಶ್ರೀಗಳು ಆಶೀರ್ವದಿಸಿದ್ದಾರೆ.
    ಇಂದು ಜಿಲ್ಲೆಯ ವಿವಿಧ ಹಳ್ಳಿಗಳಿಂದ ಭಕ್ತರು ಶ್ರೀಮಠದ ದಾಸೋಹಕ್ಕೆ ರೊಟ್ಟಿಗಳ ಮಹಾಪೂರವನ್ನೇ ಕಾಣಿಕೆಯಾಗಿ ಸಮರ್ಪಿಸಿದ್ದಾರೆ.

Please follow and like us:
error