You are here
Home > Koppal News > ಹಳೆಯ ಪಿಂಚಣಿ ಜಾರಿಗೆ ಒತ್ತಾಯಿಸಿ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಕೆ.

ಹಳೆಯ ಪಿಂಚಣಿ ಜಾರಿಗೆ ಒತ್ತಾಯಿಸಿ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಕೆ.

ಕೊಪ್ಪಳ-02-೨೦೦೬ ಎಪ್ರೀಲ್ ೧ ರ ನಂತರ ನೇಮಕಗೊಂಡ ರಾಜ್ಯ ಸರಕಾರಿ ನೌಕರರಿಗೆ ಜಾರಿಗೆ ಮಾಡಿರುವ ನೂತನ ಪಿಂಚಣಿ ಯೋಜನೆ(ಎನ್.ಪಿ.ಎಸ್.)ಯನ್ನು ರದ್ದುಗೊಳಿಸಿ ಹಳೆಯ ಪಿಂಚಣಿಯನ್ನು ಜಾರಿಗೊಳಿಸುವಂತೆ ರಾಜ್ಯ ನೂತನ ಪಿಂಚಣಿ ಯೋಜನೆಗೆ ಒಳಪಡುವ ಸರಕಾರಿ ನೌಕರರ ಸಂಘದ ವತಿಯಿಂದ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ರಾಜ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ ಚಿಲವಾಡಗಿ ಮಾತನಾಡಿ,ನೂತನ ಪಿಂಚಣಿ ಯೋಜನೆಯಲ್ಲಿ ನೌಕರರ ಹಣವನ್ನು ಷೇರುಪೇಟೆಯಲ್ಲಿ ಹೂಡುವುದರಿಂದ ನೌಕರರು ಆಂತಕಕ್ಕೆ ಒಳಗಾಗಿದ್ದಾರೆ.ಭದ್ರತೆಯಿಲ್ಲದ ಯೋಜನೆಯಾಗಿದೆ.೩೫ ವರ್ಷಗಳ ಸೇವೆ ಸಲ್ಲಿಸಿ ಸಂಧ್ಯಾ ಕಾಲದಲ್ಲಿ ಪಿಂಚಣಿ ನೀಡದಿರುವ  ಕ್ರಮ ಖಂಡನೀಯವಾಗಿದೆ.ನೌಕರರಿಗೆ ಪೂರಕವಾದ ಯೋಜನೆಗೆಗಳನ್ನು ಸರಕಾರವು ಜಾರಿಗೊಳಿಸಲು ಮೀನಾಮೇಷ ಮಾಡುತ್ತದೆ.ಆದರೆ ನೌಕರರಿಗೆ ಮಾರಕವಾಗುವ
ಯೋಜನೆಗೆಗಳನ್ನು  ಒತ್ತಡದ ಮೂಲಕ ಹೇರುತ್ತದೆ. ನೌಕರರ ದುಡಿದ ಹಣವನ್ನು ಬೇಕಾಬಿಟ್ಟಿಯಾಗಿ
ಕಟಾವಣೆ ಮಾಡುವ ಅಧಿಕಾರವನ್ನು ಪಿಂಚಣಿ ನಿಯಂತ್ರ ಸಂಸ್ಥೆಗೆ ನೀಡುವ ಅಧಿಕಾರವನ್ನು
ಹಿಂಪಡೆಯಬೇಕು.ನೌಕರರಿಂದ ಕಟಾವಣೆ ಮಾಡಲಾದ ಹಣಕ್ಕೆ ಶೇ.೧೨ ರಷ್ಟು ಬಡ್ಡಿ ನೀಡಿ ಹಣವನ್ನು
ಹಿಂಬರಿಸಬೇಕು.ಸಾಮಾನ್ಯ ಭವಿಷ್ಯ ನಿಧಿ ಖಾತೆ ತೆರೆಯಲು ಅವಕಾಶ ನೀಡಬೇಕು.ನೂತನ ಪಿಂಚಣಿ
ಯೋಜನೆಗೆ ಒಳಪಡುವ ನೌಕರರಿಗೆ ಎನ್.ಪಿ.ಎಸ್.ಯೋಜನೆಯನ್ನು ರದ್ದುಗೊಳಿಸಿ ನಿಶ್ಚಿತ
ಪಿಂಚಣಿಯನ್ನು ಜಾರಿಗೊಳಿಸುವಂತೆ ಇಂದು ರಾಜ್ಯಾಧ್ಯಂತಹ ಕಪ್ಪು ಬಟ್ಟೆ ಧರಿಸಿ ಕರ್ತವ್ಯ
ನಿರ್ವಹಿಸುವುದರೊಂದಿಗೆ ಮನವಿ ಪತ್ರ ಸಲ್ಲಿಸುವ ಕಾರ್ಯಕ್ರಮವನ್ನು
ಹಮ್ಮಿಕೊಳ್ಳಲಾಗಿದೆ.ರಾಷ್ಟ್ರ ಮಟ್ಟದ ಯೋಜನೆಯಾಗಿರುವುದರಿಂದ ಯೋಜನೆಯ ರದ್ದತಿಗೆ
ಪ್ರಬಲವಾದ ಹೋರಾಟದ ಅಗತ್ಯವಿದೆ.ಅವೈಜ್ಞಾನಿಕ,ಅನಿಶ್ಚಿತ ಯೋಜನೆಗೆಯನ್ನು ಸರ್ಕಾರವು
ಶೀಘ್ರವೇ ರದ್ದುಗೊಳಿಸಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು
ಹಮ್ಮಿಕೊಳ್ಳಲಾಗುತ್ತದೆ ಎಂದು ಹೇಳಿದರು.

Leave a Reply

Top