fbpx

ಮಕ್ಕಳ ಪ್ರತಿಭೆಯನ್ನು ಸಮಾಜಕ್ಕೆ ಪರಿಚಯಿಸುವುದು ಬಾಲ ವಿಕಾಸ ಆಕಾಡೆಮಿಯ ಆಶಯ ಗವಿಸಿದ್ದಪ್ಪ ಕರ್ಕಿಹಳ್ಳಿ.

ಕೊಪ್ಪಳ- ಅ ೧೦. ನಾಡಿನ ಎಲ್ಲ ವರ್ಗದ ಮಕ್ಕಳ ಶಿಕ್ಷಣ ಸಾಹಿತ್ಯ ಕ್ರೀಡೆ, ಕಲೆ, ಸಂಸ್ಕೃತಿಗಳಂತಹ ಕ್ಷೇತ್ರಗಳಲ್ಲಿ ಅವರ ಅಪಾರ ಪ್ರತಿಭೆ ಗುರುತಿಸುವ ಮತ್ತು ಅಂತಹ ಪ್ರತಿಭೆಯನ್ನು ಸಮಾಜಕ್ಕೆ ಪರಿಚಯಿಸಿ ಪ್ರೋತ್ಸಾಹಿಸಿ ಅವರಲ್ಲಿ ಅತ್ಮಸ್ಥೈರ್ಯ ತಂಬುವುದು. ಮಕ್ಕಳ ಆರೋಗ್ಯ ರಕ್ಷಣೆ ಅವರ ಹಕ್ಕುಗಳ ಸಂರಕ್ಷಣೆ ಅರಿವನ್ನು ಸಾರ್ವಜನಿಕರಲ್ಲಿ ಮೂಡಿಸಿ ಮಕ್ಕಳ ಸುರಕ್ಷಿತ ಸಮಾಜ ನಿರ್ಮಿಸುವ ಆಶಯದೊಂದಿಗೆ ಬಾಲವಿಕಾಸ ಆಕಾಡೆಮಿಯು ಜನ್ಮ ತಾಳಿದೆ ಎಂದು ಕೊಪ್ಪಳ ಜಿಲ್ಲಾ ಬಾಲವಿಕಾಸ ಆಕಾಡೆಮಿ ಸದಸ್ಯ ಗವಿಸಿದ್ದಪ್ಪ ಕರ್ಕಿಹಳ್ಳಿ, ಓಜನಹಳ್ಳಿ ಹೇಳಿದರು. ಅವರು ನಗರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಕಾರ್ಯಲಯಕ್ಕೆ ಬೇಟಿ ನೀಡಿ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ನಂತರ ಈ ವಿಷಯ ಪ್ರಸ್ತಾಪಿಸಿದ ಅವರು ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದ ಮಕ್ಕಳನ್ನು ಕೇಂದ್ರವನ್ನಾಗಿ ಇಟ್ಟುಕೊಂಡು ಅವರ ಸರ್ವತೋಮುಖ ವಿಕಾಸಕ್ಕೆ ವಿಶೇಷ ಕಾರ್ಯಕ್ರಮ ರೂಪಿಸುವ ಹೊಣೆಗಾರಿಕೆಯನ್ನು ಆಕಾಡೆಮಿ ಹೊಂದಿದೆ. ಈ ಎಲ್ಲಾ ಜವಾಬ್ದಾರಿ ಮತ್ತು ಆಶಯಗಳ ನೆರವೇರಿಕೆಗೆ  ಹಲವು ಯೋಜನೆಗಳನ್ನು ಹಾಕಿಕೊಳ್ಳಲಾಗುವುದು ಎಂದು ಹೇಳಿದರು. ಮಕ್ಕಳ ಬುದ್ದಿ, ಭಾವ ವಿಕಾಸಕ್ಕೆ ಪೂರಕವಾದ ಮಕ್ಕಳ ಸಾಹಿತ್ಯ ಸಮೃದ್ದವಾಗಿ ಬಾಳೆಯುವ ವಾತಾವರಣ ನಿರ್ಮಿಸುವುದು. ಅದಕ್ಕಾಗಿ ಸರಿಯಾದ ಮಾರ್ಗದರ್ಶನ ನೀಡಿ ಪ್ರೊತ್ಸಾಹಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ಒಂದೇ ಸೂರಿನಡಿಯಲ್ಲಿ ಎಲ್ಲಾ ಜ್ಞಾನ ವಲಯಗಳ ಪರಿಚಯ ಮಾಡಿಕೊಡುವುದರಿಂದ ಮಕ್ಕಳನ್ನು ಸೆಳೆದು ಅವರ ಕುತೂಹಲ ತಣಿಸಿ ಹೊಸ ಶೋಧಕ್ಕೆ ಅಣಿಗೊಳಿಸುವಂತಹ ಸಂಕೀರ್ಣ ನಿರ್ಮಿಸುವುದು, ಸಾಮಾಜಿಕವಾಗಿ ಹಿಂದುಳಿದ ಹಾಗೂ ಕೊಳಗೇರಿ ಮಕ್ಕಳ ಸೃಜನಾತ್ಮಕ ಸಂಸ್ಕೃತಿಕ ವಿಕಸನಕ್ಕೆ ಪೂರಕಾವಾಗಿ ಅವರ ನೆಲೆಗಳಲ್ಲಿ, ನಾಟಕ ಪ್ರದರ್ಶನ, ಗೀತಗಾಯನ, ಕಥಾ ನಿರೂಪಣೆ, ಪುಸ್ತಕ ಪರಿಚಯ, ಕಿರುಚಿತ್ರ ಪ್ರದರ್ಶನ ಮೊದಲಾದ ಕಾರ್ಯಕ್ರಮಗಳನ್ನು ಸಂಘಟಿಸಲಾಗುವದು ಎಂದು ಹೇಳಿದ ಅವರು ಗ್ರಾಮೀಣ ಮಕ್ಕಳ ಪ್ರತಿಭಾ ಪ್ರದರ್ಶನಕ್ಕೆ ಮುಕ್ತ ಅವಕಾಶ ದೊರಕಿಸಿ ಅವರ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಿಲು ಪ್ರತಿ ಹಳ್ಳಿಯಲ್ಲಿ ಮಕ್ಕಳ ಮಿತ್ರ ಪಡೆ ರಚಿಸಲಾಗುವುದು. ಮಕ್ಕಳ ಬೆಳವಣಿಗೆಗೆ ಶೈಕ್ಷಣಿಕ ಸಮಸ್ಯೆ ಹಕ್ಕುಗಳ ಮಾಹಿತಿ, ಕಲಿಕೆಗೆ ಮಾರ್ಗದರ್ಶನಕ್ಕಾಗಿ ಪಾಲಕರ ಮಾರ್ಗದರ್ಶನ ನೀಡಲು ಮಕ್ಕಳ ಸಹಾಯವಾಣಿ ಕೇಂದ್ರ ಆರಂಭಿಸುವುದು ಅಕಾಡೆಮಿಯ ಆಶಯವಾಗಿದೆ ಎಂದು ಕೊಪ್ಪಳ ಜಿಲ್ಲಾ ಬಾಲವಿಕಾಸ ಅಕಾಡೆಮಿಯ ಸದಸ್ಯ ಗವಿಸಿದ್ದಪ್ಪ ಕರ್ಕಿಹಳ್ಳಿ ಓಜನಹಳ್ಳಿ ಮುಂದಿನ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಹಲವು ಯೋಜನೆಗಳನ್ನು ಅಧಿಕಾರಿ ವರ್ಗಗಳ ಸಹಾಯದೊಂದಿಗೆ ಹಮ್ಮಿಕೊಳ್ಳಲಾಗಿದೆ ಎಂದು ತಮ್ಮ ಆಶಯ ವ್ಯಕ್ತಪಡಿಸಿದರು.
Please follow and like us:
error

Leave a Reply

error: Content is protected !!