ಶಿಕ್ಷಕರ ದಿನಾಚಾರಣೆ ಅಂಗವಾಗಿ ಮಾಹಂತೇಶ ಮಲ್ಲನಗೌಡ್ರ ರವರಿಗೆ ಸನ್ಮಾನ.

ಕೊಪ್ಪಳ- 09- ೦೮ ರಂದು  ಶಿಕ್ಷಕರ ದಿನಾಚರಣೆ ಪ್ರಯುಕ್ತ ಸಾಹಿತಿ ನಿವೃತ್ತ ಪ್ರಾಚಾರ್ಯರಾದ ಹನುಮಂತಪ್ಪ ಅಂಗಡಿ ಮತ್ತು  ಸಂಸ್ಥೆಯ ಕಾರ್ಯದರ್ಶಿಗಳಾದ. ಗವಿಸಿದ್ದಪ್ಪ ಹಿಟ್ನಾಳ  ರವರು ಸನ್ಮಾನಿಸಿದರು . ಈ ಸಂದರ್ಭದಲ್ಲಿಸಂಸ್ಥೆಯ  ನಿರ್ದೇಶಕರಾದ ಹನುಮೇಶ ಮುರುಡಿ ಕಾಳಿದಾಸ ಪ್ರೌಢ ಶಾಲೆಯ ಮುಖ್ಯೋಪಾದ್ಯಯರಾದ ಎಸ್. ಎಸ್. ಗುರುವಿನ  ಹಾಗೂ ಕಾಳಿದಾಸ ಸಂ.ಪ.ಪೂ ಕಾಲೇಜಿನ ಪ್ರಾಚಾರ್ಯರಾದ ಎನ್. ಆರ್ ಜುಮ್ಮಣ್ಣನವರ್ ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಪ.ಪೂ ಕಾಲೇಜಿನ ತಾಲೂಕು ಮಟ್ಟದ ಕ್ರೀಡಾ ಕೂಟದಲ್ಲಿ ಭಾಗವಹಿಸಿದ ವಿರ್ಧ್ಯಾರ್ಥಿಗಳಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು ಪ್ರಥಮ ಬಾರಿಗೆ ಕಾಲೇಜಿನ ವಿಧ್ಯಾರ್ಥಿನಿಯರು ತಾಲೂಕ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ  ಖೋ ಖೋ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದಿರುವ ವಿಶೇಷವಾಗಿತ್ತು . ಈ ಸಂಧಂರ್ಬದಲ್ಲಿ ಮಾತಾನಾಡಿದ ಮಾ

ಹಂತೇಶ ಮಲ್ಲನಗೌಡ್ರರವರು ಪ್ರಾಚಿನ ಮತ್ತು ಆಧುನಿಕ ಶಿಕ್ಷಣ ವ್ಯವಸ್ಥೆಯಲ್ಲಿರುವ  ವ್ಯತ್ಯಾಸವನ್ನು ಕುವೆಂಪುರವರ ಉದಾಹರಣೆ ತೆಗೆದುಕೊಂಡು ಮಾರ್ಮಿಕವಾಗಿ  ಮಾತನಾಡಿದರು . ನಂತರದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಹನುಮಂತಪ್ಪ ಅಂಗಡಿ ಅವರು ಶಿಕ್ಷಕರ ದಿನಾಚರಣೆಯ ಕುರಿತು ಮಾತಾನಾಡುತ್ತಾ ಎಲ್ಲಾ ಶಿಕ್ಷಕ ವೃಂದದವರಿಗೆ ಅಭಿನಂದನೆ ಸಲ್ಲಿಸಿದರು .  ವಿಶೇಷ ಉಪನ್ಯಾಸಕರಾಗಿ ಮಾತನಾಡಿದ ನಿವಾಸಗೌಡ್ರ ರವರು ಸರ್ವಪಲ್ಲಿ ರಾಧಾಕೃಷ್ಣನ್ ರವರ ಶ್ರೇಷ್ಠ ವ್ಯಕ್ತಿತ್ವದ ಚಿತ್ರಣವನ್ನು ವಿಧ್ಯಾರ್ಥಿಗಳಿಗೆ ತಿಳಿಯ ಪಡಿಸಿದರು  ಕಾರ್ಯಕ್ರಮದ ಸ್ವಾಗತವನ್ನು ಉಪನ್ಯಾಸಕರಾದ ವಿಶ್ವನಾಥ ಅಂಗಡಿ ಅವರು  ನೆರವೆರಿಸಿದರು.  ಮತ್ತು ಮಹೇಶ ಸುನಗ ಅವರು  ಕಾರ್ಯಕ್ರಮವನ್ನು ನಿರೂಪಿಸಿದರು.   ಶ್ರೀಮತಿ ನಿರ್ಮಾಲಾ ಉಪನ್ಯಾಸಕಿಯರು ವಂದಿಸಿದರ.

Please follow and like us:
error