ನೂತನ ಕಟ್ಟಡಗಳ ಪೂಜಾ ಸಮಾರಂಭ.

ಕೊಪ್ಪಳ – 07- ನಗರದ ಶ್ರೀ ಗವಿಸಿದ್ಧೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ಎಂ.ಎ ಇಂಗ್ಲೀಷ, ಎಂ.ಎಸ್ಸಿ ಭೌತಶಾಸ್ತ್ರ ಹಾಗೂ ಎಂ.ಕಾಂ ಸ್ನಾತಕೋತ್ತರ ಪದವಿಯ ವಿದ್ಯಾರ್ಥಿಗಳಿಗಾಗಿ  ಬೆಳಿಗ್ಗೆ ೧೦ ಕ್ಕೆ ನೂತನ ಕಟ್ಟಡಗಳ ಪೂಜಾ ಸಮಾರಂಭವು ಪೂಜ್ಯ ಶ್ರೀಗವಿಸಿದ್ಧೇಶ್ವರ ಸ್ವಾಮಿಗಳ ನೇತೃತ್ವದಲ್ಲಿ ಜರುಗಿತು. ಪದವಿ ಪೂರ್ವ ಶಿಕ್ಷಣ ನಿರ್ದೇಶಕರಾದ ಟಿ. ಶಿವಮೂರ್ತಿ ರಿಬ್ಬನ್ ಕತ್ತರಿಸುವದರ ಮೂಲಕ ನೂತನ
ಕಟ್ಟಡಗಳನ್ನು ಉದ್ಘಾಟನೆ ನೆರವೇರಿಸಿದರು. ಎಂ.ಎ ಇಂಗ್ಲೀಷ ವಿಭಾಗಕ್ಕೆ ಎರಡು ವರ್ಗ
ಕೋಣೆಗಳು, ಎಂ.ಕಾಂ ವಿಭಾಗಕ್ಕೆ ಎರಡು ವರ್ಗ ಕೋಣೆಗಳು, ಎಂ.ಎಸ್ಸಿ ಭೌತಶಾಸ್ತ್ರ
ವಿಭಾಗಕ್ಕೆ ಎರಡು ವರ್ಗ ಕೋಣೆಗಳು ಹಾಗೂ ಒಂದು ಪ್ರಯೋಗಾಲಯ, ಒಂದು ಸುಸಜ್ಜಿತ ಗ್ರಂಥಾಲಯ,
ಒಂದು ಸ್ಟಾಫ ರೂಂ ಗಳು ಈ ಸಮಯದಲ್ಲಿ ಉದ್ಘಾಟನೆಯಾದವು. ಎಸ್.ಜಿ ಟ್ರಸ್ಟ
ಕಾರ್ಯದರ್ಶಿಗಳಾದ ಎಸ್.ಮಲ್ಲಿಕಾರ್ಜುನ, ಸದಸ್ಯರಾದ ಸಂಜಯ ಕೊತಬಾಳ, ಆಡಳಿತಾಧಿಕಾರಿಗಳಾದ
ಡಾ.ಮರೆಗೌಡ್ರ, ಪದವಿ ಪ್ರಾಚಾರ್ಯರಾದ ಎಂ.ಎಸ್.ದಾದ್ಮಿ, ಪದವಿ ಪೂರ್ವ ಪ್ರಾಚಾರ್ಯರಾದ
ಪರೀಕ್ಷಿತರಾಜ, ಪಿ.ಜಿ. ಕೋಆರ್ಡಿನೇಟರ ಅಜಯಕುಮಾರ ಸಕಲ ಸಿಬ್ಬಂಧಿ ಹಾಗೂ ವಿದ್ಯಾರ್ಥಿಗಳು
ಉಪಸ್ಥಿತರಿದ್ದರು.

Please follow and like us:
error