You are here
Home > Koppal News > ವಾಲ್ಮೀಕಿ ಕನಕದಾಸ ಜಾತಿಗೆ ಸೀಮಿತರಲ್ಲ – ಕಲ್ಲೇಶ

ವಾಲ್ಮೀಕಿ ಕನಕದಾಸ ಜಾತಿಗೆ ಸೀಮಿತರಲ್ಲ – ಕಲ್ಲೇಶ

ಮಹರ್ಷಿ ವಾಲ್ಮೀಕಿ ಮತ್ತು ಭಕ್ತ ಕನಕದಾಸರು ಯಾವುದೇ ಜಾತಿಗೆ ಸೀಮಿತರಲ್ಲ, ಹಾಗೆಂದು ನಾವು ಭಾವಿಸಿದರೆ ಅದು ಘೋರ ಅಪರಾಧ ಎಂದು ಜಿಲ್ಲಾ ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಇಲಾಖೆ ಉಪನಿರ್ದೇಶಕ ಬಿ. ಕಲ್ಲೇಶ ಹೇಳಿದರು.

ಅವರು ನಗರದ ಶ್ರೀ ಸಿರಸಪ್ಪಯ್ಯಮಠದ ಸಭಾ ಭವನದಲ್ಲಿ ಕೊಪ್ಪಳ ತಾಲೂಕಾ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಸ್ವರಭಾರತಿ ಗ್ರಾಮೀಣಾಭಿವೃದ್ಧಿ ಮತ್ತು ಸಾಂಸ್ಕೃತಿಕ ಸಂಸ್ಥೆ, ಯುವಚೇತನ ಶಿವರಾಜ ತಂಗಡಗಿ ಅಭಿಮಾನಿಗಳ ವೇದಿಕೆ ಹಾಗೂ ಬ್ಲ್ಯೂಸ್ಟಾರ್ ಕ್ರೀಡಾ ಮತ್ತು ಸಾಂಸಕೃತಿಕ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಸೋಮುವಾರ ಹಮ್ಮಿಕೊಂಡಿದ್ದ ವಾಲ್ಮೀಕಿ ಕನಕದಾಸರ ಜಯಂತಿ ಹಾಗೂ ನೀತಿಬೋಧಕ ಚಲನಚಿತ್ರ ವೀಕ್ಷಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮುಂದುವರೆದು ಮಾತನಾಡಿದ ಅವರು, ಮಹಿಳಾ ಶಕ್ತಿ ದೊಡ್ಡದು, ಅತ್ಯಂತ ಹಿಂದುಳಿದ ಹಣೆಪಟ್ಟಿಕಟ್ಟಿಕೊಂಡಿರುವ ನಮ್ಮ ಜಿಲ್ಲೆಯನ್ನು ಅತ್ಯಂತ ಎತ್ತರಕ್ಕೆ ಒಯ್ಯಲು ಮಹಿಳೆಯರಿಂದ ಸಾಧ್ಯ ಮತ್ತು ಅಪಾರ ಸಂಖ್ಯೆಯಲ್ಲಿ ಸೇರಿರುವ ಮಹಿಳೆಯರನ್ನು ನೋಡಿದರೆ ಕಂಡಿತ ಅಭಿವೃದ್ಧಿ ನಡೆಯಲಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ಕೆ. ಬೂದಪ್ಪಗೌಡ, ಸಂಸ್ಥೆ ಮಾಡುತ್ತಿರುವ ಮಹತ್ತರ ಕಾರ್ಯಗಳ ಕುರಿತು ವಿವರಿಸಿದ ಅವರು, ಸಮಾಜವನ್ನು ತಿದ್ದುವ ಕೆಲಸವನ್ನು ಸಹ ಮಾಡುತ್ತಿದೆ, ಅದರಂತೆ ಮಹಿಳೆಯರಿಗೆ ಉತ್ತಮ ಅಭಿರುಚಿ ಹಾಗೂ ಮಹತ್ವದ ಸಂದೇಶ ನೀಡುವ ಚಲನಚಿತ್ರಗಳನ್ನು ತೋರಿಸುವ ಮೂಲಕವೂ ಸಂಘಟನಾ ಸಾಮರ್ಥ್ಯ ಹಾಗೂ ಮೌಲಿಕ ಶಿಕ್ಷಣ ನೀಡುವ ಕೆಲಸವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಸ್ವರಭಾರತಿ ಸಂಸ್ಥೆ ಅಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ ಧರ್ಮಸ್ಥಳ ಸಂಸ್ಥೆ ಒಡಗೂಡಿ ಇನ್ನೂ ಹತ್ತಾರು ಕಾರ್ಯಕ್ರಮಗಳನ್ನು ಯೋಜಿಸಲಾಗಿದೆ, ಸಂಸ್ಥೆ ಮಾಡುತ್ತಿರುವ ಮಹತ್ವದ ಕಾರ್ಯಗಳಿಗೆ ಎಲ್ಲಾ ರೀತಿಯ ಸಾಥ್ ನೀಡಲಾಗುವದು ಎಂದು ತಿಳಿಸಿದರು.
ಅಧ್ಯಕ್ಷತೆವಹಿಸಿಕೊಂಡು ಮಾತನಾಡಿದ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ನಾಗರಾಜ ಆರ್. ಜುಮ್ಮನ್ನವರ, ವಾಲ್ಮೀಕಿ ಮತ್ತು ಕನಕದಾಸರು ಯಾವುದೇ ಜಾತಿಗೆ ಸೀಮಿತವಲ್ಲ ಎನ್ನುವದನ್ನು ಇವತ್ತು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವ ಈ ಸಂಘಟನೆಗಳು ತೋರಿಸಿಕೊಟ್ಟಿವೆ, ಮಹಿಳೆಯರು ಸಬಲರಾಗಲು ಉತ್ತಮ ಶಿಕ್ಷಣವನ್ನು ತಮ್ಮ ಮಕ್ಕಳಿಗೆ ಕೊಡಿಸಬೇಕು, ಕಾರ್ಯಕ್ರಮ ಸಂಘಟಿಸಿರುವ ಸಂಸ್ಥೆಗಳು ಅಭಿನಂದನಾರ್ಹ ಎಂದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಶಿವರಾಯಪ್ರಭು, ತಾಲೂಕ ಯೋಜನಾಧಿಕಾರಿ ಧರ್ಣಪ್ಪ ಮೂಲ್ಯ, ಯೋಜನಾಧಿಕಾರಿ ಸೋಮಪ್ಪ ಪೂಜಾರಿ, ಹುಬ್ಬಳ್ಳಿ ಮಹಿಳಾ ತರಬೇತಿ ಕೇಂದ್ರದ ಪ್ರಾಂಶುಪಾಲರಾದ ವಿಶಾಲಾಕ್ಷಿ, ಜೆವಿಕೆ ಪ್ರಾದೇಶಿಕ ಕಛೇರಿ ಸಮನ್ವಯಾಧಿಕಾರಿ ವೈಷ್ಣವಿ ಇತರರು ಭಾಗವಹಿಸಿದ್ದರು.
ಶ್ರೀಕ್ಷೇತ್ರ ಧರ್ಮಸ್ಥಳ ಸಂಸ್ಥೆಯ ಜ್ಞಾನವಿಕಾಸ ಕೇಂದ್ರಗಳ ಸುಮಾರು ಮನ್ನೂರು ಜನ ಮಹಿಳೆಯರಿಗೆ ನೀತಿಬೋಧಕ ಚಲನಚಿತ್ರ ಪ್ರದರ್ಶನ ಮಾಡಲಾಯಿತು. ಜೊತೆಗೆ ೬ ಜನರಿಗೆ ಸುಜ್ಞಾನ ನಿಧಿ ಎಂಬ ವಿದ್ಯಾರ್ಥಿ ವೇತನ ನೀಡಲಾಯಿತು. ಸಮಾಹಿಕ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದ ಸೌಆಗತವನ್ನು ವೈಷ್ಣವಿ ಮಾಡಿದರು, ಮೇಲ್ವಿಚಾರಕ ರಾಘವೇಂದ್ರ ಕಾರ್ಯಕ್ರಮ ನಿರೂಪಿಸಿದರು, ಮಂಜುನಾಥ ಜಿ. ಗೊಂಡಬಾಳ ವಂದಿಸಿದರು.

Leave a Reply

Top