ಕರ್ನಾಟಕ ಸ್ಟೇಟ್ ಟೈಲರ‍್ಸ್ ಅಸೋಸಿಯೇಶನ್ ರಾಜ್ಯಸಮಿತಿ ಸಭೆ

ಹೊಸಪೇಟೆ:ಟೈಲರ್‌ಗಳಿಗೆ ಪಿಂಚಣಿ ಯೋಜನೆ, ಆಮ್ ಆದ್ಮಿಭೀಮಾಯೋಜನೆ ಹಾಗೂ ರಾಷ್ಟ್ರೀಯ ಭೀಮಾ ಯೋಜನೆಯಲ್ಲಿ ಅವಕಾಶ ನೀಡಿ, ಅವರ ಬದುಕಿಗೆ ಭದ್ರತೆ ನೀಡಬೇಕೆಂದು ಕರ್ನಾಟಕ ಸ್ಟೇಟ್ ಟೈಲರ‍್ಸ್ ಅಸೋಸಿಯೇಶನ್ ರಾಜ್ಯಸಮಿತಿ ಅಧ್ಯಕ್ಷ ಬಿ.ವಸಂತ್ ಹೇಳಿದರು.
ನಗರದಲ್ಲಿ ಭಾನುವಾರ ರಾಜ್ಯಸಮಿತಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯಸರ್ಕಾರವು ಭೀಮಾಯೋಜನೆಯಡಿ ಬಿಪಿಎಲ್ ಕಾರ್ಡುದಾರರಿಗೆ ಮಾತ್ರ  ಅವಕಾಶ ನೀಡಿದ್ದು, ಅದನ್ನು ಎಲ್ಲಾ ಅಸಂಘಟಿತ ಕಾರ್ಮಿಕರಿಗೂ ವಿಸ್ತರಿಸಬೇಕೆಂದು ಆಗ್ರಹಿಸಿದರು. ಕಳೆದ ೧೬ವರ್ಷದಿಂದ ಕರ್ನಾಟಕ ಸ್ಟೇಟ್ ಟೈಲರ‍್ಸ್ ಅಸೋಸಿಯೇಶನ್ ಹೋರಾಟ ನಡೆಸುತ್ತಾ ಬಂದಿದ್ದು, ರಾಜ್ಯಸರ್ಕಾರ ಟೈಲರ್‌ಗಳ ಬಗ್ಗೆ ಗಮನ ಹರಿಸಬೇಕೆಂದರು.

Leave a Reply