ಹಳ್ಳಿಗಳು ಭಾರತ ದೇಶದ ಜೀವನಾಡಿ- ಬಸವರಾಜ ಅಂಗಡಿ ಕಾತರಕಿ ಗುಡ್ಲಾನೂರ ಗ್ರಾ.ಪಂ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆ.

ಕೊಪ್ಪಳ –  ಹಳ್ಳಿಗಳು ಭಾರತ ದೇಸದ ಜೀವನಾಡಿ ಮಹಾತ್ಮಗಾಂದಿಜೀಯವರ ಕನಸಿನಂತೆ ಹಳ್ಳಿಗಳಿಂದಲೇ ದೇಶೋದ್ಧಾರ ಎಂಬುವಂತೆ ಪಂಚಾಯತರಾಜ್ಯ ವ್ಯವಸ್ಥೆ ಅನುಷ್ಠಾನಗೊಂಡಿರುತ್ತದೆ ಗ್ರಾಮಗಳಲ್ಲಿ ಸಮಾಜಿಕ ವ್ಯವಸ್ಥೆ ಆರೋಗ್ಯ, ಶಿಕ್ಷಣ, ಮಹಿಳೆಯರ ಸ್ಥಾನಮಾನ, ಹಾಗೂ ಹಳ್ಳಿಗಳಲ್ಲಿ ಕಲಾವಿದರು ಬಡಿಗಿ, ನೇಕಾರ, ಶಿಲ್ಪಿಗಳು, ಇದ್ದಾರೆ ಅವರೆಲ್ಲ ನಮ್ಮ ಹಳ್ಳಿಗಳ ದುಡಿಯುವಂತೆಯಾಗಬೇಕು ಅಂದಾಗ  ಗ್ರಾಮಗಳ ಸುದಾರಣೆ ಸಾಧ್ಯ ಎಂದು ಗ್ರಾಮ ಪಂಚಾಯತ ನೂತನ ಉಪಾಧ್ಯಕ್ಷರಾದ ಬಸವರಾಜ ಅಂಗಡಿ ಉಪಾಧ್ಯಕ್ಷ ಸ್ಥಾನ ಅಲಂಕರಿಸಿ ಮಾತನಾಡುತ್ತಾ  ಸ್ವಚ್ಚತೆ, ಶೌಚಾಲಯ, ಚರಂಡಿ ವ್ಯವಸ್ಥೆ ರಸ್ತೆ ಸುಧಾರಣೆ ಬಡವರಿಗಾಗಿ ಮನೆ, ಅಂಗವಿಕಲರಿಗಾಗಿ ಏಳ್ಗೆಗಾಗಿ ದುಡಿಯುವೆವು ಎಂದು ಹೇಳಿದರು ಅಧ್ಯಕ್ಷರಾಗಿ ಮಲ್ಲಮ್ಮ ಗಂಡ ಮಲ್ಲಪ್ಪ ಮಾಂತಪ್ಪನವರ ಇವರನ್ನು ಗ್ರಾಮ ಪಂಚಾಯತಿಯ ಎಲ್ಲಾ ಸರ್ವ ಸದಸ್ಯರ ಒಗ್ಗಟ್ಟಿನಿಂದ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ಶಂಕ್ರಗೌಡ್ರು ಹಿರೇಗೌಡ್ರು,  ಮುದೇಗೌಡ ಮಾಲಿ ಪಾಟೀಲ್, ಹನುಮರಡ್ಡಿ ದುರ್ಗದ, ರಾಮನಗೌಡ ನಂದಿನಗೌಡ್ರು, ಯಲ್ಲನಗೌಡ ಮಾಲಿ ಪಾಟೀಲ್, ಶಿವಯ್ಯ ಸಾಲಿಮಠ, ಯಂಕಪ್ಪ ಕೊರಗಲ್ಲ, ಸೋಮಪ್ಪ ಭೈರಣ್ಣನವರ, ಸುಪುತ್ತರಪ್ಪ ತಳವಾರ, ಮಲ್ಲಣ್ಣ ಗುಗ್ರಿ, ಅಜ್ಜಪ್ಪ ಕುರಬರ, ಬಸಪ್ಪ ಕೊಪ್ಪಳ, ನೀಲಪ್ಪ ಸ್ಯಾವಿ, ಮುತ್ತಣ್ಣ ಇಡಗಲ್ಲ್, ಇಮಾಸಾಬ್ ದೇವಪೂರ, ಮೋದಿನ್ ಸಾಬ್ ಗಡ್ಡದ್, ಚನ್ನಬಸಯ್ಯ ಹಿರೇಮಠ, ಮರಿಯಮ್ಮ ದೇವಿಸ್ಥಾನದ ಅರ್ಚಕರಾದ ಹನುಮಂತಪ್ಪ ಪೂಜಾರ ಇನ್ನು ಮುಂತಾದವರು ಉಪಸ್ಥಿತರಿದ್ದರು. ಕೊನೆಯಲ್ಲಿ ದೇವಪ್ಪ ಭೈರಣ್ಣ ನವರ ನೀರೂಪಿಸಿದರು, ಗ್ರಾ ಪಂ ಅಭಿವೃದ್ಧಿ ಅಧಿಕಾರಿ ಪಾರ್ವತಿ ವಿ ಸ್ವಾಗತಿಸಿ ವಂದಿಸಿದರು.

Please follow and like us:
error