ಹಿಂದು ಮುಸ್ಲಿಮರ ಭಾವೈಕ್ಯತೆ ಮೆರೆದ ಗವಿಸಿದ್ದೇಶ್ವರ.

ಕೊಪ್ಪಳ ಮಠದ ೩ನೇ ಪೀಠಾಧಿಪತಿ ಶಿವಲಿಂಗೇಶ್ವರ ಮಹಾಸ್ವಾಮಿಗಳು ಇರುತ್ತಿರಲು ಮಕ್ಕಳು ಬೆಡಲು ಬಂದ ಹೆಣ್ಣುಮಗಳು ಗುಡ್ಡದ ಡೋಣಿಯಲ್ಲಿ ಬಿದ್ದು ಮರಣಹೊಂದಲು ಶ್ರೀಗಳು ಮಗನನ್ನು ಪೆಡಯದೇ ನೀಹೇಗೆ ಮರಣಹೊಂದಿದೆ. ಎಂದು ತಮ್ಮ ಪಾದೋದಕ ಸಿಂಪಡಿಸಲು ತಕ್ಷಣವೇ ಎದ್ದು ಕುಳಿತು ಮುಂದೆ ಮಕ್ಕಳ ಫಲವನ್ನು ಪಡೆದು ಹೋದಳು, ಹೀಗೆ ಅನಂತಲೀಲೆ ಮಾಡುತ್ತಿರಲು ಶಾಂತಗೇರಿಗೆ ಪ್ರಯಾಣಿಸುತ್ತಾರೆ. ಅಲ್ಲಿಯ ಹಿರೇಮಠದವರ ಮಗನಾದ ಚನ್ನವೀರನನ್ನು ಮಠಕ್ಕೆ ಕರೆದುಕೊಂಡು ಬಂದು ಮರಿದೇವರನ್ನಾಗಿಸಿ ವೇದ ಶಾಸ್ತ್ರಗಳನ್ನು ಸಂಸ್ಕೃತವನ್ನು  ಕಲಿಸಿ ಮುಂದೆ ೪ನೇಪಿಠಾಧಿಪತಿಯನ್ನಾಗಿಮಾಡಿ ಶ್ರೀ ಮ.ನಿ.ಪ್ರ.ಜ ಚನ್ನವೀರ ಮಹಾಸ್ವಾಮಿ ಎಂದು  ಹೆಸರು ಇಡುತ್ತಾರೆ. ನಂತರ ಕೆಲವು ವರ್ಷಗಳ ನಂತರ ಹರಪನಹಲ್ಳಿಗೆ ತೆರಳಿ ಲಿಂಗೈಕ್ಯರಾಗುತ್ತಾರೆ ಮುಂದೆ ಚನ್ನವೀರ ಸ್ವಾಮಿಗಳು ತೀರ್ಥ ಕ್ಷೇತ್ರಗಳ ದರ್ಶನಕ್ಕೆ ತೆರಳುತ್ತಾರೆ ಕಾಶಿ, ವಾರಣಾಸಿಗೆ ಹೋಗಿ ಷಟಸ್ಥಲದ ಸಿದ್ದಾಂತವನ್ನು ತಿಳಿಸುತ್ತಾರೆ ಮುಂದ ತ್ರಿನಧಿ ಸಂಗಮ, ಗಂಗಾ, ಯಮುನಾ, ಸರಸ್ವತಿಯಲ್ಲಿ ಶಿವಪೂಜೆ ಮಾಡುತ್ತಿರುವಾಗ ಜರ್ವ ಜಂಗಮ ೫ ವರ್ಷದ ಬಾಲಕನ್ನು ಕರೆದುಕೊಂಡು ಬಂದು ಇದು ನಿನ್ನ ಮಗು ಇವನನ್ನು ನೀನೆ ರಕ್ಷಿಸಿರಿ ಎಂದು ಹೇಳಿ ಅದೃಶ್ಯೃಆಗುತ್ತಾರೆ ಸಾಕ್ಷತ್ತಾ  ಶಿವನೇ ಬಂದು ಈ ಮಗುವನ್ನು ಕರುಣಿಸಿದ್ದಾನೆ ಎಂದು ತಿಳಿದು ಆ ಮಗುವನ್ನು ಕರೆದುಕೊಂಡು ಕೊಪ್ಪಳ ಮಠಕ್ಕೆ ಬರುತ್ತಾರೆ ಭಕ್ತರಿಗೆ ತಿಳಿಸಿ ಮಠದ ಮಹಿಮೆಯನ್ನು ಮರಿಯನ್ನಾಗಿ ಮಾಡಿ, ಶಿಕ್ಷಣವನ್ನು ಕೊಟ್ಟು ಶುಭ ಮಹೂರ್ತದಲ್ಲಿ ಆ ಮಗನಿಗೆ ಪೀಠಾದಿಪತಿಯನ್ನಾಗಿ ಮಾಡುತ್ತಾರೆ. ಶ್ರೀ.ಮ.ನಿ.ಪ್ರ. ಸ್ವ. ಕರಿಬಸವ ಮಹಾಸ್ವಾಮಿಗಳೆಂದು ಹೆಸರಿಡುತ್ತಾರೆ. ತಮ್ಮ ನಂತರ ೫ ನೇ ಪೀಠಾಧಿಪತಿಯಾಗಿ ಮುನ್ನಡೆಯುತ್ತರೆ. ಮುಂದೆ ಕೆಲವು ವರ್ಷಗಳ ನಂತರ ಶ್ರೀ ಚನ್ನವೀರಸ್ವಾಮಿಗಳು ಬಾಚೆಗೊಂಡನ ಹಳ್ಳಿಯಲ್ಲಿ ಲಿಂಗೈಕ್ಯರಾಗುತ್ತಾರೆ.
    ೧೧ ನೇ ಪೀಠಾಧಿಪತಿ ಶ್ರೀ ಗವಿಸಿದ್ದೇಶ್ವರಿರಲು ಸಹಸ್ರಾರು ಭಕ್ತರು ಆಗಮಿಸಿರುತ್ತಾರೆ. ಅವರಿಗಾಗಿ ಪ್ರಸಾದದ ವ್ಯವಸ್ಥೆ ಮಾಡಿರುತ್ತಾರೆ. ಆಧ್ಯಾತ್ಮ ಪ್ರವಚನ ಮಾಡುತ್ತಿರುತ್ತಾರೆ. ಹೀಗೆ ಇರುತ್ತಿರಲು ನಿಜಾಮರ ಆಸ್ಥಾನದ ಮೀರಲ್ ಬಹಾದ್ದೂರ ಎಂಬ ರಾಜರಿಗೆ ಕುಷ್ಠರೋಗವಿರುತ್ತದೆ. ನಾನಾ ಪಂಡಿತ್ತೋತ್ತ್ತಮ ವೈಧ್ಯರಿಗೆ ತಿಳಿಸಿದರು.  ಅದು ಗುಣಮುಖವಾಗಿದ್ದಲ್ಲಿ, ಹೈದ್ರಾಬಾದಿನಲ್ಲಿ ರಾಜರು ಇರುತ್ತಿರಲು ಈ ರೋಗದ ಚಿಂತೆಯಲ್ಲಿಯೇ ಇರುತ್ತಾರೆ. ಆ ಊರಿನ ವ್ಯಕ್ತಿಯೊಬ್ಬ ರಾಜರಿಗೆ ಹೇಳುತ್ತಾನೆ. ನಿಮ್ಮ ಆಸ್ಥಾನದಲ್ಲಿಯೇ ಬರುವ ಕೋಪಣ ಪಟ್ಟಣ ಜಿಲ್ಲೆ ಇರುವುದು. ಅಲ್ಲಿ ಗವಿಯಲ್ಲಿ ಸಿದ್ದೇಶ್ವರ ಸ್ವಾಮಿ ಇರುವರು. ಸಾಕ್ಷಾತ್ ಆ ಅಲ್ಲಾನೇ ಅವನಿದ್ದಾನೆ. ಎಲ್ಲರೋಗ ಗುಣಪಡಿಸುತ್ತಾನೆ. ಸಹಸ್ರಾರು ಜನರು ಹೋಗುತ್ತಿರುತ್ತಾರೆ. ನೀವಾದರೂ ಒಮ್ಮೇ ಬೇಟಿಕೊಡಿರಿ ಎಂದು ಹೇಳುತ್ತಾನೆ. ಮರುದಿನವೇ ತಮ್ಮ ಮಂತ್ರಿ ಸೇನಾಧಿಪತಿಗಳು ಕೂಡಿ ಕೊಪ್ಪಳ ತಮ್ಮ ರಾಜಸ್ಥಾನಕ್ಕೆ ಬರುತ್ತಾರೆ. ಮಠಕ್ಕೆ ಮಂತ್ರಿಗಳನ್ನು ಕಳಿಸಿ ನಾಳೆಎ ರಾಜರು ಬರುತ್ತಾರೆ ಎಂದು ಶ್ರೀಗಳಿಗೆ ತಿಳಿಸುತ್ತಾನೆ. ಮರುದಿವಸ ರಾಜರು ಮಂತ್ರಿಗಳು ವೈಭವದಿಂದ ಮಠಕ್ಕೆ ಬರುತ್ತಾರೆ. ಆದರೆ ಮಠದ ದ್ವಾರಭಾಗಿಲು ಮುಚ್ಚಿರುತ್ತದೆ. ಸೇವಕರಿಗೆ ಕೇಳಲು ಪೂಜ್ಯರ ಅಪ್ಪಣೆ ವಿರದೇ ಭಾಗಿಲು ತೆಗೆಯುವುದಿಲ್ಲವೆಂದು ಹೇಳುತ್ತಾರೆ. ಮಂತ್ರಿ ಸೇನಾದಿಪತಿಗಳು ಕೋಪಾವಿಷ್ಠರಾಗುತ್ತಾರೆ.ಇದು ರಾಜರಿಗೆ ಅವಮಾನಮಾಡಿದಂತೆ ಇದನ್ನು ನಾವು ಸಹಿಸೋದಿಲ್ಲ, ಸ್ವಾಮಿಗಳು ಹುಚ್ಚನಿದ್ದಾನೆಯೇ, ರಾಜರಿಗೆ ಹೇಗೆ ಗೌರವಿಸಬೆಕೆಂಬುದು ಗೊತ್ತಿಲ್ಲವೇ. ಕಠಿಣ ಶಿಕ್ಷೆಗೆ ಸ್ವಾಮಿಗಳು ಗುರಿಯಾಗುತ್ತಾರೆ. ಎಂದು ಮಂತ್ರಿಗಳು ಗುಡಿಗಿದರು. ಆದರೆ ಮಹಾರಾಜರು ಸಮಾಧಾನಮಾಡಿಕೊಂಡು ಇದು ನನ್ನ ಪರೀಕ್ಷೆಯೋ ಏನೋ ಇರಲಿ ಎಂದು ನುಡಿದು ಧ್ವಾರ ಬಾಗಿಲದ ಹೊಸ್ತಿಲ ಮೇಲೆ ಇರುವ ದೂಳನ್ನು ಮುಟ್ಟಿ ಮೈತುಂಬ ಲೇಪಿಸಿಕೊಳ್ಳುತ್ತಾನೆ. ಅದೇ ಹೊಸ್ತಿಲಿಗೆ ತಲೆ ಭಾಗಿನಮಿಸಿ ತೆರಳುತ್ತಾರೆ. ಮತ್ತು ಮತ್ತೆ ಮರು ದಿವಸ ಬರುತ್ತಾರೆ. ಬಾಗಿಲು ಮುಚ್ಚಿರುತ್ತದೆ. ಮತ್ತೆ ನಮಿಸಿ ತೆರಳುತ್ತಾನೆ. ಅಂದಿನರಾತ್ರಿ ರಾಜರಿಗೆ ರೋಗದ ನೋವು ಕಡಿಮೆಯಾಗುತ್ತದೆ. ಅವನಿಗೆ ಸಮಾಧಾನವೆನಿಸುತ್ತದೆ. ದಿನಾಲು ೬ ದಿವಸ ಬಂದು ಹೊಸ್ತಿಲಿಗೆ ನಮಿಸಿಹೋಗುತ್ತಾರೆ.
    ೭ ನೇ ದಿನಕ್ಕೆ ಬಾಗಿಲು ತೆರೆದಿರುತ್ತದೆ. ಮಠದಲ್ಲಿ ಶ್ರೀ ಗಳ ಪೂಜೆ ಮುಗಿಸಿ ಸಿಂಹಾಸನದಲ್ಲಿ ಕುಳಿತಿರುತ್ತಾರೆ.  ರಾಜರು ಬಂದು ಅವರ ಪಾದಕ್ಕೆ ಹಣೆಮುಟ್ಟಿ ನಮಸ್ಕರಿಸುತ್ತಾರೆ. ಯೋಗ ಕ್ಷೇಮವನ್ನು ವಿಚಾರಿಸಿದ ನಂತರ ನೀವು ಮಠದಲ್ಲಿಯೇ ೫ ದಿವಸ ಪ್ರಸಾದ ತೆಗೆದುಕೊಳ್ಳಬೇಕು. ನಿಮಗಂಟಿದ ರೋಗ ಗುಣವಾಗುತ್ತದೆ ಎಂದು ಶ್ರೀಗಳು ಹೇಳಲು ಧನ್ಯನಾದೆ ತಂದೆ ಎಂದು ನಮಿಸಿ, ೫ ದಿವಸ ಪ್ರಸಾದದ ಅಂಬಲಿ ಕುಡಿಯುತ್ತಿರಲು ಕ್ರಮೇಣವಾಗಿ ೫ ದಿವಸದ ನಂತರ ಪೂರ್ತಿ ಕುಷ್ಠರೋಗ ಹೋಗುತ್ತದೆ. ಸಂತೋಷವಾಗಿ ಮಠದ ಆಸ್ತಿ ಬಿಟ್ಟುಕೊಡುತ್ತಾರೆ. ಬಗನಾಳಗ್ರಾಮದ ಜಹಾಗೀರಧಾರ ಮಠಕ್ಕೆ ಸಮರ್ಪಿಸುತ್ತಾರೆ. ಭಕ್ತರ ಅಪೇಕ್ಷೆ ಮೇರೆಗೆ ಅದನ್ನು ಸ್ವೀಕರಿಸುತ್ತಾರೆ. ಈ ಲೀಲೆಯನ್ನು ಕಂಡು ಜನರು ಗವಿಸಿದ್ದೇಶ್ವರರನ್ನು ಕೊಂಡಾಡುತ್ತಾರೆ. ಅಂದಿನಿಂದ ಇಂದಿನವರೆಗೂ ಮುಸ್ಲಿಂ ಜನಾಂಗದವರು ಸಹಿತ ಗವಿಸಿದ್ದನಲ್ಲಿ ಭಕ್ತಿಯಟ್ಟು ನಡೆದುಕೊಳ್ಳುತ್ತಾರೆ.
Please follow and like us:
error