೦೧ ರಂದು ಕೊಪ್ಪಳದಲ್ಲಿ ರೈತ ಚೈತನ್ಯ ಯಾತ್ರೆ.

ಕೊಪ್ಪಳ-29- ಗುರುವಾರ ರಂದು ಬಿ.ಜೆ.ಪಿಯ ರಾಷ್ಟ್ರೀಯ ಉಪಾಧ್ಯಕ್ಷ ಹಾಗೂ ಸಂಸದರಾದ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್ ಯಡಿಯೂರಪ್ಪ ಇವರ ನೇತೃತ್ವದಲ್ಲಿ ರೈತರ ಆತ್ಮ ಹತ್ಯೆಯನ್ನು ತಡೆಗಟ್ಟಲು ಅವರಿಗೆ ಆತ್ಮಸ್ಥರ್‍ಯವನ್ನು ತುಂಬಲು ರಾಜ್ಯ ನಾಯಕರೊಂದಿಗೆ ಕೊಪ್ಪಳ ಜಿಲ್ಲೆಗೆ ಆಗಮಿಸಲಿದ್ದಾರೆ.
    ಮದ್ಯಾಹ್ನ ೩ ಗಂಟೆಗೆ  ಬಾಲಕಿಯರ ಪದವಿ ಪೂರ್ವ ಕಾಲೇಜಿನ   ಸಾರ್ವಜನಿಕ ಮೈದಾನದಲ್ಲಿ ಬಹಿರಂಗ ಸಭೆಯಲ್ಲಿ ರೈತರನ್ನು ಉದ್ದೇಶಿಸಿ  ಮಾತನಾಡಲಿದ್ದಾರೆ.
    ಇವರೊಂದಿಗೆ ಸಂಸದರಾದ ಶ್ರೀರಾಮುಲು, ಶೋಭಾ ಕರಂದ್ಲಾe, ರಾಜ್ಯ ನಾಯಕರಾದ ಬಸವರಾಜ ಬೊಮ್ಮಾಯಿ, ರಾಜ್ಯ ಉಪಾಧ್ಯಕ್ಷರು ಹಾಗೂ ವಿಧಾನ ಪರಿಷತ್ತ ಸದಸ್ಯರಾದ ಹಾಲಪ್ಪ ಆಚಾರ, ವಿಜಯಶಂಕರ, ಕೃಷ್ಣ ಮೂರ್ತಿ, ಸಂಚಾಲಕರಾದ ಸುನಿಲಕುಮಾರ, ಸಹ ಸಂಚಾಲಕರಾದ ಹೆಚ್ ಗಿರಿಗೌಡ್ರ, ಕುಷ್ಟಗಿ ತಾಲೂಕಿನ  ಶಾಸಕರಾದ ದೊಡ್ಡನಗೌಡ್ರ ಪಾಟೀಲ, ಗಂಗಾವತಿ ಮಾಜಿ ಶಾಸಕರಾದ ಪರಣ್ಣ ಮನವಳ್ಳಿ, ಮಾಜಿ ಸಂಸದರಾದ ಕೆ.ವಿರುಪಾಕ್ಷಪ್ಪ, ಶಿವರಾಮಗೌಡ, ರಾಜ್ಯ ಎಸ್. ಸಿ ಮೋರ್ಚಾ ಅಧ್ಯಕ್ಷರಾದ ಬಸವರಾಜ ದಡೆಸೂರ, ಇನ್ನೂ ಅನೇಕ ಜಿಲ್ಲೆಯ ಬಿ ಜೆ ಪಿ ನಾಯಕರು ಭಾಗವಹಿಸಲಿದ್ದಾರೆ.
ಈ ರೈತ್ ಚೈತನ್ಯ ಯಾತ್ರೆಯ ಅಧ್ಯಕ್ಷತೆಯನ್ನು ಕೊಪ್ಪಳ ಜಿಲ್ಲಾಧ್ಯಕ್ಷರು ಹಾಗೂ ಸಂಸದರಾದ ಕರಡಿ ಸಂಗಣ್ಣನವರು ವಹಿಸಲಿದ್ದಾರೆ.
Please follow and like us:
error