ಸರ್ಕಾರಿ ಪ್ರಥಮ ದರ್ಜೆ ಕಾಲೇಜ ದ್ವಿತೀಯ ಸ್ಥಾನ

ಅಂತರ್ ವಲಯಮಟ್ದ ಕಬಡ್ಡಿ ಪಂದ್ಯಾವಳಿಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜ   ದ್ವಿತೀಯ ಸ್ಥಾನ

ಕೊಪ್ಪಳ :- ವಿಜಯ ನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ ಬಳ್ಳಾರಿ ಇವರು ಏರ್ಪಡಿಸಿದ್ದ ಪುರುಷರ ಅಂತರ್‌ವಲಯಕಬಡ್ಡಿ ಪಂದ್ಯಾವಳಿಯಲ್ಲಿ ಕೊಪ್ಪಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕಬಡ್ಡಿ ತಂಡ ದ್ವಿತೀಯ ಸ್ಥಾನವನ್ನು ಪಡೆದಿದೆ. ಕಬಡ್ಡಿ ತಂಡದ ಅಭ್ಯರ್ಥಿಗಳನ್ನು ಪ್ರಾಂಶುಪಾಲರಾದ ಪ್ರೋ.ತಿಮ್ಮಾರಡ್ಡಿ ಮೇಟಿ ಹಾಗೂ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ದಾರುಕಾಸ್ವಾಮಿ, ಪ್ರಭುರಾಜ ನಾಯಕ, ಕ್ರೀಡಾ ವಿಭಾಗದ ಅಧಿಕಾರಿ ಪ್ರೋ.ಸುರೇಶ ಸೊನ್ನದ, ಮ್ಯಾನೇಜರ.ಕೆ.ಆದಿಬಾಬು, ಹಾಗೂ ಕಾಲೇಜಿನ ಎಲ್ಲ ಸಿಬ್ಬಂದಿವರ್ಗದವರು ಅಭಿನಂದಿಸಿದ್ದಾರೆ. 
ಅಂತರ ಮಟ್ಟದ ಈ ಪಂದ್ಯಾವಳಿಯಲ್ಲಿ ದ್ವಿತೀಯ ಸ್ಥಾನ ಪಡೆದು ಕಾಲೇಜಿಗೆ ಕೀರ್ತಿ ತಂದಿರುವ ಎಲ್ಲಾ ಕ್ರೀಡಾಪಟುಗಳನ್ನು ಪ್ರಾಂಶುಪಾಲರು ಹಾಗೂ ಸಿಬ್ಬಂದಿವರ್ಗದವರು ಅಭಿನಂದಿಸಿದ್ದಾರೆ. 

Leave a Reply