ರಾಷ್ಟ್ರೀಯ ಸೇವಾ ಯೋಜನೆಯಿಂದ ವ್ಯಕ್ತಿತ್ವ ನಿರ್ಮಾಣ ಸಾಧ್ಯ – ಕಂಬಾಳಿಮಠ.

ಕೊಪ್ಪಳ-24- ಯುವಕರು ಈ ಆಧುನಿಕ ಯುಗದಲ್ಲಿ ಅನೇಕ ದುಷ್ಠ ಚಟುವಟಿಕೆಗಳಿಗೆ ಭಾಗಿಯಾಗುತ್ತಿರುವದು ವಿಷಾದನೀಯ ಆದರೆ ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಯುವಕರು ತೊಡಗಿಸಿಕೊಳ್ಳುವದರಿಂದ ಯುವಕರ ವ್ಯಕ್ತಿತ ನಿರ್ಮಾಣ ಸಾಧ್ಯ ಎಂದು ಇತಿಹಾಸ ತಜ್ಞ ಎಂ.ಎಂ,ಕಂಬಾಳಿಮಠ ಹೇಳಿದರು.
ಅವರು ಸ್ಥಳಿಯ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಕಾನೂನು iಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಆಶ್ರಯದಲ್ಲಿ ನೆಡದ ರಾಷ್ಟ್ರೀಯ ಸೇವಾ ಯೋಜನೆಯ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ದೇಶ ಅಭಿವೃದ್ದಿ ಹೊಂದಬೇಕಾದರೆ ಯುವಕರು ಪಾತ್ರ ಮುಖ್ಯವಾಗಿದ್ದು ಆದ್ದರಿಂದ ಯುವಕರು ವಿದ್ಯಾರ್ಥಿದಿಸೆಯಲ್ಲಿಯೆ ನಾಯಕತ್ವದ ಗುಣವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಅವರು ಮುಂದಿನ ದಿನಮಾನಗಳಲ್ಲಿ ಉತ್ತಮ ನಾಯಕರಾಗಿ ಹೊರಹೊಮ್ಮಲು ಸಾಧ್ಯ ಆಸದಸರಿಂದ ಯುವಕರು ತಮ್ಮ ಕಾಲೇಜಿನ ಜೀವನದಲ್ಲಿ ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸುವದರ ಮುಖಾಂತರ ತಮ್ಮ ಮುಂದಿನ ಜೀವನಕ್ಕೆ ಅಡಿಪಾಯ ಹಾಕಿಕೊಳ್ಳಬೇಕು ಎಂದರು.
ನಂತರ ಮುಖ್ಯ ಅಥಿಯಾಗಿ ಮಾತನಾಡಿದ ಹಿರಿಯ ಉಪನ್ಯಾಸಕ ಕೆ.ನಾಗಬಸಯ್ಯ ಮಾತನಾಡಿ ಮಹಾತ್ಮ ಗಾಂಧಿಜಿಯವರು ಕನಸ್ಸು ಗ್ರಾಮೀಣ ಅಭಿವೃದ್ದಿ ದೇಶದ ಅಭಿವೃದ್ದಿ ಎಂದು ಹೇಳಿದ ಅವರ ಮಾತು ನಿಜವಾಗಬೇಕಾದರೆ ಇಂದಿನ ಯುವಕರು ಗ್ರಾಮೀಣ ಅಭಿವೃದ್ದಿಗೆ ಪಣ ತೊಡಬೇಕು ಗ್ರಾಮೀಣ ಪ್ರದೇಶ ಜನರಲ್ಲಿಗೆ ಹೋಗಿ ಅವರಿಗೆ ದೊರಕಬೇಕಾಗುವ ಮೂಲಭೂತ ಸೌಲಭ್ಯದ ಬಗ್ಗೆ ತಿಳುವಳಿಕೆ ಹೇಳಬೆಕು ಮತ್ತು ಅನೇಕ ಹಳ್ಳಿಗಳಲ್ಲಿ ರಾಷ್ಟ್ರೀಯ ಸೇವಾ ಯೋಜನೆಯಿಂದ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವದರ ಮೂಲಕ ಮೌಡ್ಯತೆಯನ್ನು ನಿರ್ಮೂಲನೆ ಮಾಡಿದಾಗ ಗ್ರಾಮೀಣ ಅಭೀವೃ
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಚಾರ್ಯರರು ಆದ ಡಾ: ಬಿ.ಎಸ್.ಹನಸಿ ವಹಿಸಿಕೊಂಡು ಮಾತನಾಡಿದರು.ಕಾರ್ಯಕ್ರಮದಲ್ಲಿ ಮುಖ್ಯ ಅತಿಯಾಗಿ ಉಪನ್ಯಾಸಕ ಎಸ್,ಎಂ.ಪಾಟೀಲ,ಸೈಯದಅಮೀರ,ಉಪನ್ಯಾಸಕ ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ಅಧಿಕಾರಿ ಬಸವರಾಜ ಎಸ್,ಎಂ ಸೇರಿದಂತೆ ಉಪಸ್ಥಿತರಿದ್ದರು.
ಕಾರ್ಯಕ್ರಮದ ಸ್ವಾಗತವನ್ನು ಕಾಲೇಜಿನ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಕೊಡತಗೇರಿ ಮಾಡಿದರು ಪ್ರಾರ್ಥನೆಯನ್ನು ಕುಮಾರಿ ಗೀರಿಜಾ ಹಾಡಿದರು,ವಂದನಾರ್ಪಣೆಯನ್ನು ಶ್ರೀಮತಿ ಸಕ್ಕುಬಾಯಿ ಮಾಡಿದರು.ಕಾರ್ಯಕ್ರಮದ ನಿರೂಪಣೆಯನ್ನು ವಾಯ್.ಜಿ.ಕಬ್ಬನ್ನವರ್ ನೆರವೆರಿಸಿಕೊಟ್ಟರು.

ದ್ದಿಯಾಗಲು ಸಾಧ್ಯ ಎಂದರು.

Please follow and like us:
error