ಜು. ೨೨ ರಿಂದ ಗಂಗಾವತಿಯಲ್ಲಿ ಮೈಸೂರು ಸಿಲ್ಕ್ ಸೀರೆಗಳ ಪ್ರದರ್ಶನ ಹಾಗೂ ಮಾರಾಟ ಮೇಳ.

ಕೊಪ್ಪಳ ಜು. ೨೦ ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮವು ಬರಲಿರುವ ವರಮಹಾಲಕ್ಷ್ಮಿ ಹಬ್ಬ ಹಾಗೂ ಗೌರಿ-ಗಣೇಶ ಹಬ್ಬ ನಿಮಿತ್ಯ, ಮೈಸೂರು ಸಿಲ್ಕ್ ರೇಷ್ಮೆ ಸೀರೆಗಳ ಬೃಹತ್ ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಜು. ೨೨ ರಿಂದ ೨೭ ರವರೆಗೆ ಆರು ದಿನಗಳ ಕಾಲ ಗಂಗಾವತಿ-ಆನೆಗೊಂದಿ ರಸ್ತೆಯಲ್ಲಿನ ಸರೋಜಮ್ಮ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದೆ.
     ಮೈಸೂರು ಸಿಲ್ಕ್ ಸೀರೆಗಳ ಪ್ರದರ್ಶನ ಹಾಗೂ ಮಾರಾಟ ಮೇಳದ ಉದ್ಘಾಟನೆಯನ್ನು ಜು. ೨೨ ರಂದು ಬೆಳಿಗ್ಗೆ ೧೧ ಗಂಟೆಗೆ ಜಿಲ್ಲಾಧಿಕಾರಿ ಆರ್.ಆರ್. ಜನ್ನು ಅವರು ನೆರವೇರಿಸುವರು.  
     ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮವು ನಾಲ್ಕನೇ ಬಾರಿಗೆ ಗಂಗಾವತಿಯಲ್ಲಿ ಮೈಸೂರು ಸಿಲ್ಕ್ ಸೀರೆಗಳ ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಹಮ್ಮಿಕೊಂಡಿದ್ದು,  ಗಂಗಾವತಿಯ ಸರೋಜಮ್ಮ ಕಲ್ಯಾಣ ಮಂಟಪದಲ್ಲಿ ಮಾರಾಟ ಮೇಳ ನಡೆಯಲಿದೆ. ಜು. ೨೨ ರಿಂದ ೨೭ ರವರೆಗೆ ಪ್ರತಿದಿನ ಬೆಳಗ್ಗೆ ೧೦.೦೦ರಿಂದ ಸಂಜೆ ೮.೦೦ ಗಂಟೆಯವರೆಗೆ  ಆರು ದಿನಗಳ ಕಾಲ ಮೈಸೂರು ಸಿಲ್ಕ್ ಸೀರೆಗಳ ಪ್ರದರ್ಶನ ಮಾರಾಟ ನಡೆಯಲಿದೆ.   ವಿಶೇಷವಾಗಿ ಈ ಬಾರಿ ನಿಗಮವು ಎಲ್ಲಾ ಉತ್ಪನ್ನಗಳ ಮೇಲೆ ಶೇ. ೨೫ ರ ರಿಯಾಯಿತಿ ನೀಡಲಿದೆ.  ವರಮಹಾಲಕ್ಷ್ಮಿ ಪೂಜೆ ಹಬ್ಬದ ಹಾಗೂ ಗೌರಿ-ಗಣೇಶ ಹಬ್ಬದ ಸಡಗರವನ್ನು ಮೈಸೂರು ಸಿಲ್ಕ್ ರೇಷ್ಮೆ ಖರೀದಿಸುವುದರೊಂದಿಗೆ ಆಚರಿಸಲು ಇದು ಉತ್ತಮ ಅವಕಾಶವಾಗಿದೆ.        
         ಸಾಂಪ್ರದಾಯಿಕ ರೀತಿಯಲ್ಲದೆ, ಕೆ.ಎಸ್.ಐ.ಸಿ.ಯು ಈಗ ನಾಜೂಕಾದ ವಿನ್ಯಾಸದ ಸಂಗ್ರಹಿತ ಕ್ರೇಪ್ ಡಿ ಚೈನ್ ಸೀರೆಗಳನ್ನು, ಕಸೂತಿ ಎಂಬ್ರಾಯಿಡರಿ ಸೀರೆಗಳನ್ನು ಹಾಗೂ ಜಾರ್ಜೆಟ್ ಮತ್ತು ಸಾದಾ ಮುದ್ರಿತ ಸೀರೆಗಳನ್ನು, ಟೈಯ್ಸ್, ಸ್ಕಾರ್ಫ್ ಇತ್ಯಾದಿ ಉತ್ಪನ್ನಗಳನ್ನು ಪ್ರದರ್ಶಿತಗೊಳಿಸುತ್ತಿದೆ.   ಇದಲ್ಲದೆ  ನವನವೀನ ವಿವಾಹ ಸಂಗ್ರಹ  ಸೀರೆಗಳನ್ನು  ಪರಿಚಯಿಸಲಾಗಿದೆ   ಹಾಗೂ ಕೆ.ಎಸ್.ಐ.ಸಿ.ಯು ಇತ್ತೀಚೆಗೆ ಇ-ಜಕಾರ್ಡ್ ಮಗ್ಗಗಳನ್ನು ಅಳವಡಿಸಿದ್ದು ೧೫ ರಿಂದ ೨೦ ನವನವೀನ ವಿನ್ಯಾಸಗಳ ಸೀರೆಗಳನ್ನು ಉತ್ಪಾದಿಸಿ ಗ್ರಾಹಕರುಗಳಿಗೆ ಪರಿಚಯಿಸಿದೆ.  ಕಸೂತಿ ಮೈಸೂರ್ ಸಿಲ್ಕ್ ಸೀರೆಗಳು ಬಹಳ ಮನಮೋಹಕ ಮತ್ತು ಇವುಗಳ ಸೌಂದರ್ಯ ಕಣ್ಸೆಳೆಯುತ್ತದೆ.  ಹಿಂದಿನ ಅರಸರು ನಿರ್ಮಿಸಿ ಸಂರಕ್ಷಿಸಲ್ಪಟ್ಟಿದ್ದು,  ಸಾಂಪ್ರದಾಯಕ ಶಿಲ್ಪ ವಿನ್ಯಾಸಗಳಿಂದ ಸ್ಫೂರ್ತಿಗೊಂಡ ಮಹಿಳಾ ಕೆಲಸಗಾರರ ಸೂಜಿಯ ಮೊನೆಯಿಂದ ನಿರ್ಮಿಸಲ್ಪಟ್ಟ ಕಸೂತಿ ಕುಸುರಿ ಕೆಲಸ ಮತ್ತು ಮೋಟಿಫ್‌ಗಳಿಂದ ಕೂಡಿವೆ.  ಕಸೂತಿ ಕುಸುರಿ ಕೆಲಸವು ಉತ್ತರ ಕರ್ನಾಟಕವು ಸೆರೆಹಿಡಿದ ಅತ್ಯಂತ ಸೂಕ್ಷ್ಮ ವಿವರಗಳ ವಿಸ್ತೀರ್ಣ ಮತ್ತು ಮೋಟಿಫ್‌ಗಳ ಸರಳ ಸ್ಟಿಕ್ಕರ್‌ಗಳನ್ನು ಒಳಗೊಂಡಿರುತ್ತದೆ
         ಸಾರ್ವಜನಿಕರು ಈ ಮೇಳದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮದ ತಿಳಿಸಿದೆ.

Related posts

Leave a Comment