You are here
Home > Koppal News > ಕೊಪ್ಪಳ ನಗರದಲ್ಲಿ ವಿಶ್ವಕಲಾ ದಿನಾಚರಣೆ

ಕೊಪ್ಪಳ ನಗರದಲ್ಲಿ ವಿಶ್ವಕಲಾ ದಿನಾಚರಣೆ

ದಿನಾಂಕ ೧೫

ರಂದು ನಗರದ ಬಾ.ಸ.ಪ.ಪೂ ಕಾಲೇಜ ಕೊಪ್ಪಳದಲ್ಲಿ ಜರುಗಿದ “ವಿಶ್ವಕಲಾದಿನ” ವನ್ನು ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘ (ರಿ) ಕೊಪ್ಪಳ ಹಾಗೂ ಕರ್ನಾಟಕ ಲಲಿತ ಕಲಾ ಅಕಾಡಮಿ ಬೆಂಗಳೂರು ಈ ಭಾಗದ ಸದಸ್ಯರಾದ   ಕೃಷ್ಣ.ಕೆಎಮ್ ಗದಗ ಇವರ ಸಹಕಾರದೊಂದಿಗೆ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ರಾಜ್ಯ – ರಾಷ್ಟ್ರಕ್ಕೆ ಪ್ರಸಿದ್ದವಾದ ಕಿನ್ನಾಳ ಕಲೆಯ ಕಲಾವಿದರ ವಂಶಸ್ಥರಾದ  ಸೋಮಣ್ಣ ಚಿತ್ರಗಾರ ಖ್ಯಾತ ಕಲಾವಿದರು ಹಾಗೂ ನಿವೃತ್ತ ಉನ್ನತ ಶಿಕ್ಷಣ ( ಚಿತ್ರಕಲಾ ನಿರ್ದೆಶಕರು ಹಾಗೂ ಶ್ರೀ ಶಂಕರ ಕಾಳಪ್ಪ ಪತ್ತಾರ ಬಾನಾಪುರ ಇವರನ್ನು ಸನ್ಮಾನಿಸಿ ಗೌರಿವಿಸಲಾಯಿತು. ನಂತರ  ರಾಜು ತೇರದಾಳ ಚಿತ್ರಕಲಾ ಶಿಕ್ಷಕರು ಇವರು ಬರೆದ ಚಿತ್ರಕಲಾ ಚಿಂತನ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು, ಕಾರ್ಯಕ್ರಮದ ಪ್ರಾರಂಭದಲ್ಲಿ ಲಿಯೋನಾರ್ಡೊ-ಡ-ವಿಂಚಿ  ಕಲಾವಿದನ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಹಾಗೂ   ವೆಂಕಟೇಶ ಮಡಿವಾಳರ ರವರ ಪ್ರಾರ್ಥನ ಗೀತೆಯೊಂದಿಗೆ  ಪ್ರಾರಂಭಿಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು  ಸೋಮಣ್ಣ ಚಿತ್ರಗಾರ ಉದ್ಘಾಟಿಸಿ ಮಾತನಾಡಿ ತಮ್ಮ ಚಿತ್ರಕಲಾ ಅನುಭವದ ನುಡಿಗಳನ್ನು ಹೇಳಿದರು. ಅಧ್ಯಕ್ಷತೆಯನ್ನು ಜಿಲ್ಲಾಧ್ಯಕ್ಷರಾದ  ಎಮ್.ಎಮ್ ಬಳಿಗಾರ ವಹಿಸಿದ್ದರು. ಚಿತ್ರಕಲಾ ಶಿಕ್ಷಕರಾದ  ಎ.ಪಿ ಮುಧೋಳ ಮತ್ತು ರಾಜು ತೇರದಾಳ, ಕಲಾ ಉಪನ್ಯಾಸ ನೀಡಿದರು. ವೇದಿಕೆಯಲ್ಲಿ ರಾಜ್ಯ ಸಂಘದ ನಿರ್ದೆಶಕರಾದ                ಎಮ್.ಎ.ವಂದಾಲ ಮತ್ತು ಚಿತ್ರಕಲಾ ಶಿಕ್ಷಕ ವೀರಯ್ಯ.ವಿ.ಕೆ ಉಪಸ್ಥಿತರಿದ್ದರು. ಜಿಲ್ಲೆಯ ಸಮಸ್ತ ಚಿತ್ರಕಲಾ ಶಿಕ್ಷಕರು ಉಪಸ್ಥಿತರಿದ್ದು, ಕಾರ್ಯಕ್ರಮದ ನಿರೂಪಣೆಯನ್ನು  ಆರ್.ಎಲ್ ಕುಲಕರ್ಣಿ, ಕಾರ್ಯಕ್ರಮವನ್ನು ಸಂಘದ ಪ್ರ.ಕಾರ್ಯದರ್ಶಿ ಎಸ್.ಬಿ ಕುಲಕರ್ಣಿ ನೆರವೇರಿಸಿದರು ಹಾಗೂ ಕಾರ್ಯಕ್ರಮದಲ್ಲಿ ಲಿಯೋನಾರ್ಡೊ-ಡ-ವಿಂಚಿ   ಕಲಾವಿದನ ಜೀವನ ಚರಿತ್ರೆಯ ಸಾಕ್ಷ ಚಿತ್ರದ ವಿಡಿಯೋವನ್ನು ಕಲಾವಿದರಾದ   ರಾಜು ತೇರದಾಳರವರು ಸರ್ವರಿಗೂ ನೊಡಲು ವ್ಯವಸ್ಥೆ ಮಾಡಿದ್ದರು. ಕೋನೆಯಲ್ಲಿ  ಎನ್.ಡಿ ಪತ್ತಾರರವರ  ವಂದನಾರ್ಪಣೆಯೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.    

Leave a Reply

Top