You are here
Home > Koppal News > ರೈತ ವಿರೋಧಿ ಪಕ್ಷ ದಿಕ್ಕರಿಸಿ, ಜನಪರ ಕಾಂಗ್ರೆಸ್‌ನ್ನು ಅಧಿಕಾರಕ್ಕೆ ತನ್ನಿ-ಸಿದ್ಧರಾಮಯ್ಯ

ರೈತ ವಿರೋಧಿ ಪಕ್ಷ ದಿಕ್ಕರಿಸಿ, ಜನಪರ ಕಾಂಗ್ರೆಸ್‌ನ್ನು ಅಧಿಕಾರಕ್ಕೆ ತನ್ನಿ-ಸಿದ್ಧರಾಮಯ್ಯ

ಕೊಪ್ಪಳ. ರೈತರ ಹೆಸರಿನಲ್ಲಿ ಅಧಿಕಾರಕ್ಕೆ ಬಂದು ರೈತರ ಜೊತೆ ಚಲ್ಲಾಟವಾಡಿದ ಬಿಜೆಪಿ, ಜೆಡಿಎಸ್‌ನ್ನು ಧಿಕ್ಕರಿಸಿ, ಸದಾ ಜನಪರ, ಜನಹಿತ ಹಾಗೂ ಸಾಮಾಜಿಕ ಕಳಕಳಿಯುಳ್ಳ ಕಾಂಗ್ರೆಸ್‌ನ್ನು ಅಧಿಕಾರಕ್ಕೆ ತನ್ನಿ ಎಂದು ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಹೇಳಿದರು.
ಅವರು ಶುಕ್ರವಾರ ನಗರದ ಸಾರ್ವಜನಿಕ ಮೈದಾನದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದರು
ಈ ಹಿಂದೆ ಬಿಜೆಪಿ ಪಕ್ಷ ನಮಗೂ ಒಂದು ಭಾರಿ ಅಧಿಕಾರ ಕೊಡಿ ಎಂದು ಮತದಾರರಲ್ಲಿ ಬೇಡಿಕೊಂಡ ಪರಿಣಾಮ ಹಾಗೂ ಜೆಡಿಎಸ್ ಬಿಜೆಪಿಗೆ ೨೦ ತಿಂಗಳ ಅಧಿಕಾ ನೀಡದಿದ್ದಾಗ ಸಹಜವಾಗಿಯೇ ರಾಜ್ಯದ ಜನರ ಅನುಕಂಪ ಪಡೆದುಕೊಂಡ ಬಿಜೆಪಿಯವರು ನಂತರ ಅಧಿಕಾರ ಗದ್ದುಗೆ ಏರಿ ಮಾಡಿದ್ದಾದರೂ ಏನು ಎಂದು ಪ್ರಶ್ನಿಸಿದ ಅವರು, ರೈತರ ಮೇಲೆ ಪ್ರಮಾಣ ಮಾಡಿ ಅಧಿಕಾರ ಸ್ವೀಕರಿಸಿದ ಬಿಜೆಪಿಯವರು ಆರಂಭದಲ್ಲೇ ರೈತರ ಮೇಲೆ ಲಾಠಿ ಚಾರ್ಜ ಮಾಡುವ ಮೂಲಕ ಇಬ್ಬರು ರೈತರ ಸಾವಿಗೂ ಕಾರಣರಾದರು, ಮುಂದೆ ಸ್ವಾರ್ಥ ಸಾಧನೆಗೋಸ್ಕರ ಅಧಿಕಾರ ದುರುಪಯೋಗ, ಸ್ವಜನ ಪಕ್ಷಪಾತ, ಭ್ರಷ್ಠಾಚಾರ, ಅಕ್ರಮ ಗಣಿಗಾರಿಕೆಗಳಂತಹ ಅಕ್ರಮ, ಅನೈತಿಕ ರಾಜಕಾರಣ ಮಾಡುವ ಮೂಲಕ ರಾಜ್ಯದ ಜನತೆಯ ಆಶೋತ್ತರಗಳಿಗೆ ಸ್ಪಂಧಿಸದೆ ಸ್ವಾರ್ಥದಲ್ಲಿ ಮುಳುಗಿತು ಎಂದು ಟೀಕಿಸಿದರು.
ಜನಪರ, ಸಾಮಾಜಿಕ ಕಳಕಳಿ ಹಾಗೂ ನಾಡಿನ ಹಿತ ಕಾಪಾಡುವಲ್ಲಿ ಬದ್ಧತೆ ಹೊಂದಿರುವ ಕಾಂಗ್ರೆಸ್‌ಗೆ ಮಾತ್ರ ಈ ರಾಜ್ಯವನ್ನು ಪ್ರಗತಿಪಥದತ್ತ ಕೊಂಡೊಯ್ಯುವ ಇಚ್ಛಾಶಕ್ತಿಯಿದ್ದು ಮೇ. ೫ರಂದು ನಡೆಯಲಿರುವ ಕೊಪ್ಪಳ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಘವೇಂದ್ರ ಹಿಟ್ನಾಳರವರಿಗೆ ತಮ್ಮ ಅಮೂಲ್ಯವಾದ ಮತವನ್ನು ಹಾಕಿ ಬಹುಮತದಿಂದ ಆರಿಸಿ ತರಬೇಕೆಂದು ಮತದಾರರಲ್ಲಿ ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಮಾತನಾಡಿ, ಹಿಂದಿನ ಬಿಜೆಪಿ ಸರಕಾರದ ದುರಾಡಳಿತದಿಂದ ರಾಜ್ಯದ ಜನತೆ ಬೇಸತ್ತಿದ್ದಾರೆ. ಹಿಂದಿನ ಬಿಜೆಪಿ ಸರಕಾರದಲ್ಲಿ ಒಟ್ಟು ೨ ಸಚಿವರು ಕ್ರಿಮಿನಲ್ ಮೊಕದ್ದಮೆಗಳನ್ನು ಎದುರಿಸುತ್ತಿದ್ದಾರೆ ಇಂತಹ ಸರಕಾರ ಮತ್ತೊಮ್ಮೆ ಈ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಬಿಡಬೇಡಿ ಎಂದ ಅವರು, ಮೇ. ೫ರಂದು ನಡೆಯಲಿರುವ ವಿಧಾನಸಭಾ ಕ್ಷೇತ್ರಗಳ ಚುನಾವಣೆ ಅತ್ಯಂತ ಮಹತ್ವವಾದ ಚುನಾವಣೆಯಾಗಿದ್ದು, ಇದರಲ್ಲಿ ರಾಜ್ಯದ ೬ಕೋಟಿ ಜನತೆಯ ಭವಿಷ್ಯ ಅಡಗಿದೆ. ಹೀಗಾಗಿ ಮತದಾರರು ಯಾವುದೇ ಆಮಿಷಗಳಿಗೆ ಒಳಗಾಗದೆ ಯುವ ಉತ್ಸಾಹಿ ತರುಣರಾಗಿರುವ ನಮ್ಮ ಕಾಂಗ್ರೆಸ್ ಅಭ್ಯರ್ಥಿ ರಾಘವೇಂದ್ರ ಹಿಟ್ನಾಳರಿಗೆ ಮತ ನೀಡಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಸಹಕರಿಸಬೇಕೆಂದು ಮನವಿ ಮಾಡಿದರು.
ವೇದಿಕೆ ಮೇಲೆ ಮಾಜಿ ಸಚಿವ ಸತೀಶ ಜಾರಕಿಹೊಳಿ, ಮಾಜಿ ವಿಧಾನಪರಿಷತ್ ಸದಸ್ಯ ಎಚ್.ಆರ್.ಶ್ರೀನಾಥ, ಜಿಲ್ಲಾ ಮುಖಂಡರಾದ ಜುಲ್ಲು ಖಾದ್ರಿ, ಈಶಪ್ಪ ಮಾದಿನೂರ, ಎಸ್.ಬಿ.ನಾಗರಳ್ಳಿ, ಎಚ್.ಎಲ್.ಹಿರೇಗೌಡ್ರು, ಸುರೇಶ ದೇಸಾಯಿ, ಅಮ್ಜದ್ ಪಟೇಲ್, ದ್ಯಾಮಣ್ಣ ಚಿಲವಾಡಗಿ, ಅನಿಕೇತ ಅಗಡಿ, ಯಮನಪ್ಪ ಕಬ್ಬೇರ, ಮಾನ್ವಿ ಪಾಷಾ, ಕಾಟನ್ ಪಾಷಾ, ವೆಂಕನಗೌಡ್ರು  ಹಿರೇಗೌಡ್ರು, ಕಾಳಿಂಗಪ್ಪ ವಕೀಲರು, ಶಿವನಾಗಪ್ಪ, ಬಾಳಪ್ಪ ಬಾರಕೇರ, ಟಿ.ಜನಾರ್ಧನ, ಗೂಳಪ್ಪ ಹಲಿಗೇರಿ, ಮುತ್ತು ಕುಷ್ಟಗಿ, ಸುರೇಶ ದಾಸರೆಡ್ಡಿ, ಪ್ರಸನ್ನ ಗಡಾದ ಮತ್ತಿತರರು ಉಪಸ್ಥಿತರಿದ್ದರು.
ವರುಣಾದಲ್ಲಿ ನನಗೆ ಪ್ರತಿಸ್ಪರ್ಧಿಯೇ ಇಲ್ಲ-ಸಿದ್ಧರಾಮಯ್ಯ 

ಕೊಪ್ಪಳ. ಮೈಸೂರ ಭಾಗದ ವರುಣಾ ಕ್ಷೇತ್ರದಲ್ಲಿ ತಮಗೆ ಪ್ರತಿಸ್ಪರ್ಧೆ ಒಡ್ಡುವ ಎದುರಾಳಿಗಳೇ ಇಲ್ಲ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ಅವರು ಶುಕ್ರವಾರ ಕೊಪ್ಪಳ ನಗರಕ್ಕೆ ಆಗಮಿಸುತ್ತಿದ್ದ ವೇಳೆ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವರುಣಾ ನನ್ನ ನೆಚ್ಚಿನ ಹಾಗೂ ನನ್ನ ರಾಜಕೀಯದ ನೆಲೆ ಒದಗಿಸಿದ ಕ್ಷೇತ್ರ ಇಲ್ಲಿ ನನ್ನ ವಿರುದ್ಧ ಪೈಪೋಟಿ ನೀಡಬಲ್ಲ ಯಾವುದೇ ಅಭ್ಯರ್ಥಿಗಳಿಲ್ಲ ಎಂದರು.
ಅಪ್ಪ-ಮಕ್ಕಳ ಪಕ್ಷದಿಂದ ನಾನು ಯಾವುದೇ ಪಾಠ ಕಲಿಯುವ ಅಗತ್ಯವಿಲ್ಲ ಎಂದು ಜೆಡಿಎಸ್‌ನ್ನು ಮೂದಲಿಸಿದ ಅವರು, ಈ ಭಾರಿ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿಯನ್ನು ಸಹಜವಾಗಿಯೇ ಕಾಂಗ್ರೆಸ್ ಹಿಡಿಯಲಿದೆ. ತಾವೂ ಸಿಎಂ ಆಕಾಂಕ್ಷಿ ಎಂದು ಹೇಳಿದರು.
ಗಂಗಾವತಿ ಕೇತ್ರದ ಎಚ್.ಆರ್.ಶ್ರೀನಾಥ, ಯಲಬುರ್ಗಾ ಕ್ಷೇತ್ರದ ಬಸವರಾಜ ರಾಯರೆಡ್ಡಿ ಹಾಗೂ ಕೊಪ್ಪಳ ಕ್ಷೇತ್ರದ ರಾಘವೇಂದ್ರ ಹಿಟ್ನಾಳ ಪರ ಸಿದ್ಧರಾಮಯ್ಯ ಮತಯಾಚನೆ ಮಾಡಿದರು.

Leave a Reply

Top