You are here
Home > Koppal News > ಕನ್ನಡ ಶಾಸ್ತ್ರೀಯ ಭಾಷೆ : ವಿಚಾರ ಸಂಕಿರಣ

ಕನ್ನಡ ಶಾಸ್ತ್ರೀಯ ಭಾಷೆ : ವಿಚಾರ ಸಂಕಿರಣ

ಕೊಪ್ಪಳ : ನಗರದಲ್ಲಿ ದಿ. 21ರಂದು ಬೆಳಿಗ್ಗೆ 10 ಗಂಟೆಗೆ ಕನ್ನಡ ಶಾಸ್ತ್ರಿಯ ಭಾಷೆ: ಒಂದು ಸಮರ್ಥನೆ ಎಂಬ ವಿಷಯದ ಬಗ್ಗೆ ರಾಜ್ಯಮಟ್ಟದ ವಿಚಾರ ಸಂಕಿರಣ ನಡೆಯಲಿದೆ.ವಿಶ್ವವಿದ್ಯಾಲಯ ಧನಸಹಾಯ ಆಯೋಗ, ಕನ್ನಡ ಸಾಹಿತ್ಯ ಅಕಾಡೆಮಿ ಬೆಂಗಳೂರು ಸಹಯೋಗದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಕಾರ್ಯಕ್ರಮವನ್ನು ನಾಡೋಜ ಪ್ರೋ: ಹಂಪನಾಗರಾಜಯ್ಯ ಉದ್ಘಾಟಿಸುವರು.
ಪ್ರೋ ಲಿಂಗದೇವರು ಹಳೆಮನೆ ಅವರ ಅಧ್ಯಕ್ಷತೆಯಲ್ಲಿ ಕವಿರಾಜ ಮಾರ್ಗಂ, ಪರಿಸರ ಸಾಹಿತ್ಯಿಕ ಭಾಷೆ ಕುರಿತು ಹಂಪಿ ಕನ್ನಡ ವಿಶ್ವವಿದ್ಯಾಲಯ ಪ್ರಾಧ್ಯಾಪಕ ಡಾ.ಎಸ್.ಎಸ್. ಅಂಗಡಿ ಹಾಗೂ ಕನ್ನಡ ಭಾಷೆಗಳ ಅಧ್ಯಯನ ಕುರಿತು ಡಾ.ವಿ.ಜಿ.ಪೂಜಾರ ಮಾತನಾಡುವರು.
ಹಂಪಿ.ವಿವಿಯ ನಿವೃತ್ತ ಕುಲಪತಿ ಅವರ ಅಧ್ಯಕ್ಷತೆಯಲ್ಲಿ ಕನ್ನಡ ಮಹಾಕಾವ್ಯಗಳು ಮಾರ್ಗ ಮತ್ತು ದೇಸಿಯತೆ ಕುರಿತು ಡಾ.ಬಿ.ವಿ.ಶಿರೂರ ಮತ್ತು ಕನ್ನಡಕ್ಕೆ ಕನ್ನಡದದ್ದೇ ಕಾವ್ಯ ಮಿಮಾಂಸೆ ವ್ಯಾಕರಣ ಕುರಿತು ಡಾ.ಎಚ್.ಆರ್.ಶಶಿಕಲಾ ಮಾತನಾಡುವರು. ಪ್ರೋ: ಅಲ್ಲಮಪ್ರಭು ಬೆಟ್ಟದೂರು ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು ಕನ್ನಡ ವಿವಿಯ ಕುಲಪತಿ ಎ.ಮುರಿಗೆಪ್ಪ ಭಾಗವಹಿಸುವರು

Leave a Reply

Top