ಶಿಕ್ಷಕರ ಸಂಘದ ಮಧ್ಯಸ್ತಿಕೆಯಲ್ಲಿ ಪತ್ತಿನ ಸಹಕಾರಿ ಸಂಘಕ್ಕೆ ಅವಿರೋಧ ಆಯ್ಕೆ.

ಕೊಪ್ಪಳ-17- ಕೊಪ್ಪಳ ತಾಲೂಕ ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರಿ ಸಂಘದ ನಿರ್ದೆಶಕರಾಗಿದ್ದ ಶ್ರೀಮತಿ ಸಾವಿತ್ರಿ ಕುಲಕರ್ಣಿ ಯವರ ನಿಧನದಿಂದ ಖಾಲಿಯಾದ ಒಂದು ಮಹಿಳಾ ಅಭ್ಯರ್ಥಿಗೆ ಚುನಾವಣೆ ಘೋಷಣೆಯಾಗಿದ್ದು ಈ ಚುನಾವಣೆಯಲ್ಲಿ ೫ ಜನ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದರು. ಸದ್ರಿ ಚುನಾವಣೆಯೂ ಶೈಕ್ಷಣಿಕ ಹಿತದೃಷ್ಠಿಯಿಂದ ಹಾಗೂ ಶಿಕ್ಷಕರ ಪತ್ತಿನ ಸಹಕಾರಿ ಸಂಘದ ಏಳಿಗೆಗಾಗಿ   ಶಂಭುಲಿಂಗನಗೌಡ ಪಾಟೀಲ ಇವರ ಅಧ್ಯಕ್ಷತೆಯಲ್ಲಿ ಹಿರಿಯ ಶಿಕ್ಷಕರುಗಳಾದ  ವಿಶ್ವನಾಥ ಬೆಲ್ಲದ್, ಲಷ್ಕರ್ ನಾಯಕ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶರಣಬಸವನಗೌಡ ಪಾಟೀಲ, ಜಿಲ್ಲಾ ಉಪಾಧ್ಯಕ್ಷರಾದ ಮಂಜುನಾಥ.ಬಿ, ಪತ್ತಿನ ಸಂಘದ ಅಧ್ಯಕ್ಷರಾದ ಮೈಲಾರಗೌಡ ಹೊಸಮನಿ ಹಾಗೂ ತಾಲೂಕ ಶಿಕ್ಷಕರ ಸಂಘದ ಅಧ್ಯಕ್ಷರಾದ ಸುರೇಶ ಅರಕೇರಿ ಇವರುಗಳು ಎಲ್ಲಾ ಶಿಕ್ಷಕರ ಸಂಘದ ಪ್ರತಿನಿಧಿಗಳನ್ನ ವಿಶ್ವಾಸಕ್ಕೆ ತೆಗೆದುಕೊಂಡು ಶ್ರೀಮತಿ ಸಾವಿತ್ರಿ ದಾಸ್ ಇವರನ್ನು ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ತಾಲೂಕ ಶಿಕ್ಷಕರ ಸಂಘದ ಪ್ರತಿನಿಧಿಗಳು ಹಾಗೂ ಪತ್ತಿನ ಸಹಕಾರ ಸಂಘದ ಪ್ರತಿನಿಧಿಗಳು ಉಪಸ್ಥಿತರಿದ್ದರು.


Please follow and like us:
error