ಯಶಸ್ವಿನಿ ಯೋಜನೆಯ ಸದುಪಯೋಗ ಪಡೆದುಕೊಳ್ಳಲು ಸೂಚನೆ

 ಕೊಪ್ಪಳ ಪಿಕಾರ್ಡ ಬ್ಯಾಂಕಿನ ಸದಸ್ಯತ್ವ ಹೊಂದಿದ ಸದಸ್ಯರಿಗೆ ಯಶಸ್ವಿನಿ ಆರೋಗ್ಯ ವಿಮಾ ಪ್ರೀಮಿಯಂ ಪಾವತಿಸಲು ಆಗಸ್ಟ್ ೩೧ ಕೊನೆಯ ದಿನವಾಗಿದ್ದು, ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ವೀರಪ್ಪ ಲಕ್ಷಾಣಿ ಅವರು ಸೂಚನೆ ನೀಡಿದ್ದಾರೆ.
  ಪ್ರೀಮಿಯಂ ಮೊತ್ತ ಪ್ರತಿ ಸದಸ್ಯರಿಗೆ ರೂ.೨೧೦, ಕುಟುಂಬದ ಇತರೆ ಸದಸ್ಯರಿಗೆ ರೂ.೨೧೦/- ರಂತೆ, ೫ ಜನ ಸದಸ್ಯರಿಗಿಂತ ಹೆಚ್ಚಾದಲ್ಲಿ ಶೇ.೧೫ ರಂತೆ ರಿಯಾಯತಿಯೊಂದಿಗೆ ಈ ಯಶಸ್ವಿನಿ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.  ಅರ್ಜಿ ಸಲ್ಲಿಸಲು ಆ.೩೧ ಕೊನೆಯ ದಿನವಾಗಿದ್ದು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನಾಂಗದವರಿಗೆ ಈ ವರ್ಷ ಪಿಕಾರ್ಡ್ ಬ್ಯಾಂಕಿನಲ್ಲಿ ಸದಸ್ಯತ್ವ ಹೊಂದಿದ ಸದಸ್ಯರಿಗೆ ಮಾತ್ರ ಈ ಸೌಲಭ್ಯ ಒದಗಿಸಲಾಗುವುದು. ಪ್ರತಿ ಸದಸ್ಯರಿಗೆ ರೂ.೧೦ ರಂತೆ, ತಮ್ಮ ಕುಟುಂಬದ ಸದಸ್ಯರಿಗೆ ಹಣ ಪಾವತಿ ಮಾಡಿದಲ್ಲಿ ಉಳಿದ ಹಣವನ್ನು ಸರ್ಕಾರದಿಂದಲೇ ಪಡೆದುಕೊಳ್ಳಲಾಗುವುದು. ಬ್ಯಾಂಕಿನ ಎಲ್ಲಾ ಸದಸ್ಯರು ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಪಿಕಾರ್ಡ ಬ್ಯಾಂಕ್‌ನ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿಯ ಸದಸ್ಯರು  ಮನವಿ ಮಾಡಿದ್ದಾರೆ.

Leave a Reply