You are here
Home > Koppal News > ಸಿಎಂ ಪಟ್ಟದ ಆಸೆ ಇಲ್ಲ, ರೆಡ್ಡಿ ಬ್ರದರ್ಸ್ ಕಥೆ ಕ್ಲೋಸ್- ಬಿ‌ಎಸ್ ವೈ

ಸಿಎಂ ಪಟ್ಟದ ಆಸೆ ಇಲ್ಲ, ರೆಡ್ಡಿ ಬ್ರದರ್ಸ್ ಕಥೆ ಕ್ಲೋಸ್- ಬಿ‌ಎಸ್ ವೈ

ಬೆನ್ನ ಹಿಂದೆ ಕತ್ತಿ ಮಸೆಯೋರನ್ನ ಸುಮ್ನೆ ಬಿಡಲ್ಲ: 
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ‌ಎಸ್ ಯಡಿಯೂರಪ್ಪ ಅವರು ಜೈಲಿನಿಂದ ಹೊರ ಬಂದ ನಂತರ ಮೊದಲಿಗಿಂತ ಹೆಚ್ಚು ಹಟವಾದಿಯಾಗಿದ್ದಾರೆ. ಆದರೆ, ತಾಳ್ಮೆಯನ್ನು ಮೈಗೂಡಿಸಿ ಕೊಂಡಿದ್ದು, ಪುಣ್ಯಕ್ಷೇತ್ರಗಳ ಸಂದರ್ಶನ ಮಾಡಿ, ತಮ್ಮ ಯೋಜನೆಗೆ ತಕ್ಕ ಹೆಜ್ಜೆಯನ್ನು ಇಡುತ್ತಿದ್ದಾರೆ.
ಪ್ರಶ್ನೆ: ಬಳ್ಳಾರಿ ರೆಡ್ಡಿ ಸೋದರರು ಸರ್ಕಾರಕ್ಕೆ ಮಾರಕವಾಗಬಲ್ಲರೇ?
ಯಡಿಯೂರಪ್ಪ: ಬಳ್ಳಾರಿ ಗ್ರಾಮಾಂತರ ಉಪ ಚುನಾವಣೆಯಲ್ಲಿ ರೆಡ್ಡಿಗಳ ಬೆಂಬಲ ಪಡೆದಿರುವ ಪಕ್ಷೇತರ ಅಭ್ಯರ್ಥಿ ಶ್ರೀರಾಮುಲು ಸೋಲುತ್ತಾರೆ. ಜನಾರ್ದನ ರೆಡ್ಡಿ ಇನ್ನೂ ಜೈಲಿನಲ್ಲಿದ್ದಾರೆ. ಕರುಣಾಕರ ಹಾಗೂ ಸೋಮಶೇಖರ ಪಕ್ಷದ ಪರವಾಗಿ ನಿಲ್ಲುವ ಸಾಧ್ಯತೆಯಿದೆ. ನಾನು ಸಿ‌ಎಂ ಆಗಿದ್ದಾಗ ಕೈಗೊಂಡ ಅಭಿವೃದ್ಧಿ ಕಾರ್ಯ ಬಿಜೆಪಿಯನ್ನು ಕಾಪಾಡಲಿದೆ.
ಪ್ರಶ್ನೆ: ಮುಂದಿನ ಚುನಾವಣೆಯಲಿ ಸಿ‌ಎಂ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೀರಾ?
ಯಡಿಯೂರಪ್ಪ: ನಾನು ಬಿಜೆಪಿಯ ಸಾಮಾನ್ಯ ಕಾರ್ಯಕರ್ತ. ಆರು ತಿಂಗಳ ನಂತರ ಸಿ‌ಎಂ ಪದವಿ ಮತ್ತೆ ಸಿಗುತ್ತದೆ ಎಂದಿದ್ದು ನಿಜ. ಆದರೆ, ಅದು ಪಕ್ಷದ ಹಿರಿಯ ನಾಯಕರು ಹೇಳಿಸಿದ್ದು, ಅವರು ಬಯಸಿದ್ದು, ನನಗೆ ಈಗ ಸಿ‌ಎಂ ಪಟ್ಟದ ಆಸೆಯಿಲ್ಲ.
ಪ್ರಶ್ನೆ: ಸಿ‌ಎಂ ಪಟ್ಟ ಸಿಗಲು ಸದಾನಂದ ಗೌಡರ ಸರ್ಕಾರ ಅಡ್ಡಿಯಾಗಿದಿಯೇ?
ಯಡಿಯೂರಪ್ಪ: ನಾನು ಸಿ‌ಎಂ ಆಗಬೇಕು ಎಂದು ಯಾವತ್ತೂ ಯಾರ ಮೇಲೂ ಒತ್ತಡ ಹೇರಲಿಲ್ಲ. ನನ್ನ ಬೆಂಬಲಿಗರಿಂದ ಸದಾನಂದ ಗೌಡರ ಸರ್ಕಾರಕ್ಕೆ ತೊಂದರೆಯಿದೆ. ಸರ್ಕಾರ ಬೀಳಲಿದೆ ಎಂಬುದು ಊಹಾಪೋಹದ ಮಾತುಗಳಷ್ಟೇ.
ಸರ್ಕಾರ ಬೀಳಿಸಬೇಕಾದರೆ, ಸರ್ಕಾರ ರಚನೆಗೂ ಮುನ್ನವೇ ಆ ಕೆಲಸ ಮಾಡಬಹುದಿತ್ತು. ರಾಜಭವನಕ್ಕೆ ನಾನು ರಾಜೀನಾಮೆ ಸಲ್ಲಿಸಲು ಹೋದಾಗ ನನ್ನ ಜೊತೆಗೆ 70 ಜನ ಶಾಸಕರು ಹಾಗೂ ಎಲ್ಲಾ ಸಂಸದರು ಬಂದಿದ್ದರು ಎಂಬುದನ್ನು ಮರೆಯುವಂತಿಲ್ಲ. ನನ್ನ ಬೆಂಬಲಿಗರನ್ನು ಸರ್ಕಾರ ಉರುಳಿಸಲು ಎಂದೂ ಬಳಸುವುದಿಲ್ಲ.
ಪ್ರಶ್ನೆ: ಪ್ರಬಲ ಲಿಂಗಾಯತ ನಾಯಕರಾಗಿ ಬೆಳೆದಿದ್ದೀರಾ ಏನ್ನನ್ನಿಸುತ್ತದೆ?
ಯಡಿಯೂರಪ್ಪ: ನಾನು ಯಾವುದೆ ಒಂದು ಸಮುದಾಯಕ್ಕೆ ಸೇರಿದವನಲ್ಲ. ಲಿಂಗಾಯತ ನಾಯಕನಾಗಿ ಜನ ನನ್ನನ್ನು ಗುರುತಿಸುವುದಿಲ್ಲ. ನಾನು ಎಲ್ಲರಿಗೂ ಸೇರಿದವನು. ಎಲ್ಲಾ ಮಠಗಳಿಗೂ ಭೇಟಿ ಕೊಡುತ್ತೇನೆ. ಮುಸ್ಲೀಮ್ ಹಾಗೂ ಕ್ರೈಸ್ತ ಬಾಂಧವರ ಕರೆಗೆ ಸದಾ ಓಗೊಡುತ್ತೇನೆ.
ಪ್ರಶ್ನೆ: ಕಡೆಯದಾಗಿ ನಿಮ್ಮನ್ನು ತುಳಿದವರು ಯಾರು? 
ಯಡಿಯೂರಪ್ಪ: ಯಾರೂ ತಮ್ಮ ಕ್ಷೇತ್ರದಲ್ಲಿ ಜೀರೋಗಳಾಗಿದ್ದಾರೋ ಅವರು ದೆಹಲಿಯಲ್ಲಿ ಹೀರೋಗಳಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕರ್ನಾಟಕದ ಮುಖ್ಯಮಂತ್ರಿಯಾಗಿ ಮೆರೆಯುವ ಆಸೆಯಿದ್ದರೆ ಮೊದಲು ಚುನಾವಣೆ ಎದುರಿಸಿ ಗೆಲ್ಲಲಿ. ನಾನಂತೂ ಬಿಜೆಪಿಯನ್ನು ತೊರೆಯುವುದಿಲ್ಲ ಎಂದು ಮಾರ್ಮಿಕವಾಗಿ ಉತ್ತರಿಸಿದರು.
ಬೆನ್ನ ಹಿಂದೆ ಕತ್ತಿ ಮಸೆಯೋರನ್ನ ಸುಮ್ನೆ ಬಿಡಲ್ಲ: ಬಿ‌ಎಸ್ ವೈ
ಯಡಿಯೂರಪ್ಪ ಎಲ್ಲಿದ್ದರೂ ಅವರ ಪ್ರಭಾವ ಕುಗ್ಗಿಲ್ಲ. ನಮ್ಮದೇನಿದ್ದರೂ ಸಾಮೂಹಿಕ ನಾಯಕತ್ವ ಎಂದು ಬಿಜೆಪಿ ಎಷ್ಟೇ ಸಾರಿ ಕೂಗಿ ಹೇಳಿದರೂ ಯಡಿಯೂರಪ್ಪ ಇಲ್ಲದ ಪಕ್ಷದ ಊಹಿಸಲು ಸಾಧ್ಯವಿಲ್ಲ.
ಬಳ್ಳಾರಿ ಪ್ರಚಾರಕ್ಕೆ ಹೋಗಲು ಒಪ್ಪಿಕೊಂಡ ನಂತರ ಯಡಿಯೂರಪ್ಪ ಅವರು ಟೈಮ್ಸ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ತಮ್ಮ ಮುಂದಿನ ರಾಜಕೀಯ ನಡೆಯ ಬಗ್ಗೆ ವಿಸ್ತಾರವಾಗಿ ಹೇಳಿಕೊಂಡಿದ್ದಾರೆ.
38 ತಿಂಗಳು ಸಿ‌ಎಂ ಪಟ್ಟ ಧರಿಸಿದ್ದ ಬಿ‌ಎಸ್ ಯಡಿಯೂರಪ್ಪ 24 ದಿನ ಜೈಲುವಾಸ ಅನುಭವಿಸಿ ಬಂದಿದ್ದಾರೆ. ಈ ಸಂದರ್ಭದಲ್ಲಿ ಯಡಿಯುರಪ್ಪ ಅವರ ಬೆಂಬಲಿಗರ ಬಗ್ಗೆ ಚರ್ಚೆ ಆರಂಭವಾಗಿದೆ.
ಪ್ರಶ್ನೆ:ನಿಮ್ಮನ್ನು ರಾಜಕೀಯವಾಗಿ ಮುಗಿಸಲು ಯತ್ನಿಸಿದ್ದು ಯಾರು? ನಿಮ್ಮ ಪಕ್ಷದವರೇನಾ? ಅಥವಾ ವಿಪಕ್ಷಗಳಾ?
ಬಿ‌ಎಸ್ ವೈ: ನಿಮ್ಮ ಮಾತು 100ಕ್ಕೆ ನೂರು ಸತ್ಯ. ಆಂತರಿಕ ಬಿಕ್ಕಟ್ಟು, ಬೆನ್ನ ಹಿಂದೆ ಕತ್ತಿ ಮಸೆಯುವವರು ನಮ್ಮಲ್ಲಿ ಅಧಿಕವಾಗಿದ್ದಾರೆ. ವಿಪಕ್ಷಗಳಿಗಿಂತ ಪಕ್ಷದವರಿಂದಲೇ ನನಗೆ ಅಪಾಯ ಜಾಸ್ತಿ.
ಪ್ರಶ್ನೆ: ಉತ್ತಮ ಆಡಳಿತ ಹಾಗೂ ಭ್ರಷ್ಟಾಚಾರ ಜೊತೆಜೊತೆಗಿರಲು ಸಾಧ್ಯವಿಲ್ಲ ಎಂದು ಎಲ್ ಕೆ ಅಡ್ವಾಣಿ ಹೇಳಿದಾಗ ನಿಮಗೆ ಏನ್ನನಿಸಿತು?
ಬಿ‌ಎಸ್ ವೈ: ನಾನು ಆಗ ನ್ಯಾಯಾಂಗ ಬಂಧನದಲ್ಲಿದ್ದೆ. ಅಡ್ವಾಣಿ ಹೇಳಿಕೆಯಿಂದ ತೀವ್ರವಾಗಿ ಮನನೊಂದೆ. ಎಲ್ ಕೆ ಅಡ್ವಾಣಿ ಹಾಗೂ ಎಬಿ ವಾಜಪೇಯಿ ಮೇಲೆ ನನಗೆ ಅಪಾರ ಗೌರವವಿದೆ. ಇಬ್ಬರು ನನಗೆ ಜ್ಞಾನ ನೇತ್ರಗಳಿದ್ದ ಹಾಗೆ. ಈ ಬಾರಿ ವೈಷ್ಣೋದೇವಿಗೆ ಹೋಗುವಾಗ ಅಡ್ವಾಣಿಯನ್ನು ಭೇಟಿ ಮಾಡಿ ಮಾತಾಡುತ್ತೇನೆ. ಅವರ ರಥಯಾತ್ರೆ ಕಾರ್ಯಕ್ರಮ ನನಗೆ ಆಶ್ಚರ್ಯ ತಂದಿದೆ.
ಪ್ರಶ್ನೆ:ಅಡ್ವಾಣಿ ಹೇಳಿಕೆ, ಬಿಜೆಪಿ ಬಿಕ್ಕಟ್ಟು, ಜೈಲುವಾಸ, ಚುನಾವಣೆ ಬಗ್ಗೆ ಹೇಳಿ?
ಬಿ‌ಎಸ್ ವೈ: ಆರೋಪ ಬಂದಾಗ ಅದನ್ನು ನ್ಯಾಯವಾದ ರೀತಿಯಲ್ಲಿ ಎದುರಿಸಿ ಎಲ್ಲದರಲ್ಲೂ ಜಾಮೀನು ಪಡೆದಿದ್ದೇನೆ.
ನನ್ನ ಕಂಡರೆ ಆಗದವರು ಅಡ್ವಾಣಿ ಕಿವಿಯೂದಿದ್ದಾರೆ. 2008ರಲ್ಲಿ ಕೊಪ್ಪಳದಲ್ಲಿ ಡೆಫಾಸಿಟ್ ಕಳೆದುಕೊಂಡಿದ್ದೆವು. ಚನ್ನಪಟ್ಟಣ ಹಾಗೂ ಬಂಗಾರಪೇಟೆಯಲ್ಲಿ ಕೇಸರಿ ಬಾವುಟ ಎಲ್ಲಿತ್ತು.
ಜನ ನನ್ನ ಮೇಲೆ ವಿಶ್ವಾಸವಿಟ್ಟಿದ್ದರಿಂದಲೇ ಕಾಂಗ್ರೆಸ್, ಜೆಡಿ‌ಎಸ್ ವಶದಲ್ಲಿದ್ದ ಕೊಪ್ಪಳ, ಚನ್ನಪಟ್ಟಣ ಹಾಗೂ ಬಂಗಾರಪೇಟೆ ನಮ್ಮ ಕೈವಶವಾಗಿದೆ.
ನನ್ನ ಬಗ್ಗೆ ಕೇಂದ್ರ ನಾಯಕರಿಗೆ ಇಲ್ಲಸಲ್ಲದನ್ನು ಹೇಳಿದ್ದು ಯಾರೂ ಎಂದು ತಿಳಿದಿದೆ. ಮುಂದಿನ ದಿನಗಳಲ್ಲಿ ಅವರ ಪರಿಸ್ಥಿತಿ ಏನಾಗಲಿದೆ ಎಂದು ನೀವು ನೋಡುವಿರಿ                                            ಕೃಪೆ-  ಗಲ್ಫ್ ಕನ್ನಡಿಗ

Leave a Reply

Top