ಜೆಡಿಎಸ್ ಎಸ್ಸಿ ಎಸ್ಟಿ ಸದಸ್ಯತ್ವ ಅಭಿಯಾನ

ಕುಮಾರಸ್ವಾಮಿ ಮತ್ತೊಮ್ಮೆ ಮುಖ್ಯಮಂತ್ರಿಯಾಗಲು ತಳಮಟ್ಟದಿಂದ ಸಿದ್ಧತೆ
ಕೊಪ್ಪಳ,  ಅ. ೧೩. ಅಕ್ಟೋಬರ್ ಕೊನೆ ವಾರ ನಗರ ಮತ್ತು ತಾಲೂಕಿನಾದ್ಯಂತ ಜೆಡಿಎಸ್ ಎಸ್ಸಿ ಎಸ್ ಟಿ ಘಟಕ ದಿಂದ ನೂತನ ಸದಸ್ಯತ್ವ ಅಭಿಯಾನ ಹಮ್ಮಿಕೊಳ್ಳಲಾಗುವದು ಎಂದು ಎಸ್ ಟಿ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಂಜುನಾಥ ಜಿ. ಗೊಂಡಬಾಳ ತಿಳಿಸಿದ್ದಾರೆ.
ಜೆ.ಡಿ.ಎಸ್. ಪಕ್ಷ ಅಧಿಕಾರಕ್ಕೆ ಬಂದರೆ ಎಲ್ಲಾ ಕೆಲಸಗಳು ನಡೆಯುತ್ತವೆ, ಆದ್ದರಿಂದ ದಲಿತರ ಬಗ್ಗೆ ಕಾಳಜಿ ಇರುವ ವ್ಯಕ್ತಿಗೆ ಮತ ಚಲಾಯಿಸಬೇಕು ಎಂಬ ವಿಷಯ ಕುರಿತು ಜನಜಾಗೃತಿ ಮೂಡಿಸಲಾಗುವದು. ೧೯೯೫ ರಲ್ಲಿ ಗಂಗಾ ಕಲ್ಯಾಣ ಯೋಜನೆ, ೪೦೦ ರೂ ಸ್ಟೈಫಂಡ್, ಸೈಕಲ್ ಕೊಟ್ಟಿದ್ದಾರೆ, ಮೀಸಲಾತಿಗೆ ಹೋರಾಡುತ್ತ ಬಂದಿದ್ದಾರೆ ಅಂಥಹ ಕುಮಾರಸ್ವಾಮಿ ಮತ್ತೊಮ್ಮೆ ಮುಖ್ಯಮಂತ್ರಿಯಾಗಲು ಹೈ.ಕ ಭಾಗದಲ್ಲಿ ಪಕ್ಷದ ಬಲವರ್ಧನೆ ಆಗಬೇಕಿರುವದರಿಂದ ಸದಸ್ಯತ್ವ ಅಭಿಯಾನವನ್ನು ನಗರಸಭೆ ಮಾಜಿ ಅಧ್ಯಕ್ಷ ಚಂದ್ರಶೇಖರ ಕವಲೂರ, ಮುಖಂಡರಾದ ಗೋಣೇಶ ಉಪ್ಪಾರ, ಸಿದ್ದೇಶ ದದೇಗಲ್, ಶಂಕ್ರಪ್ಪ ಗೊಂಡಬಾಳ, ಗವಿಸಿದ್ದಪ್ಪ ಮುಂಡರಗಿ, ನಾಗರಜ ಚಲವಾದಿ, ವೆಂಕಟೇಶ ಬೆಲ್ಲದ, ನಾಸೀರಹುಸೇನ ಕಂಠಿ, ಮೌನೇಶ ವಡ್ಡಟ್ಟಿ (ಕರಾಟೆ), ಪಾರ್ವತಿ ವಾಲ್ಮೀಕಿ ಮುಂತಾದವರ ನೇತೃತ್ವದಲ್ಲಿ ಅಭಿಯಾನ ನಡೆಯಲಿದೆ ಎಂದು ಮಂಜುನಾಥ ಜಿ. ಗೊಂಡಬಾಳ ತಿಳಿಸಿದ್ದಾರೆ. 
Please follow and like us:
error