ಜಿ.ನಾರಾಯಣ , ಎಲ್.ಬಿ.ಮಾಲೀಪಾಟೀಲ ಅವರ ನಿಧನಕ್ಕೆ ಕ.ಸಾ.ಪ ಸಂತಾಪ

Gangavathi 
ಗಂಗಾವತಿ ನ.೨೨: ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರಾಗಿ, ಸ್ವಾತಂತ್ರ್ಯ ಹೋರಾಟಗಾರರಾಗಿ, ನಾಡೋಜ ಪ್ರಶಸ್ತಿಗೆ ಭಾಜನರಾಗಿ, ರಾಜಕೀಯ ಮುತ್ಸದ್ದಿಯಾಗಿ, ಅಪ್ಪಟಗಾಂಧಿವಾದಿಯಾಗಿದ್ದ ನಾಡಿನ ಹಿರಿಯ ಚೇತನ ಜಿ.ನಾರಾಯಣ ಅವರ ನಿಧನಕ್ಕೆ ಹಾಗೂ ಗಂಗಾವತಿಯಲ್ಲಿ ಬಡತನದ ಬೇಗೆಯಲ್ಲೂ ತನ್ನ ಕ್ರಿಯಾಶೀಲ ವ್ಯಕ್ತಿತ್ವದ ಮೂಲಕ ಕನ್ನಡದ ಸೇವೆ ಮಾಡಿದ ಯುವ ಕವಿ  ಎಲ್.ಬಿ.ಮಾಲೀಪಾಟೀಲ ಅವರ ನಿಧನಕ್ಕೆ ಕೊಪ್ಪಳ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ತೀವ್ರ ಸಂತಾಪ ವ್ಯಕ್ತಪಡಿಸಿದೆ. ಕನ್ನಡ ಸಾಹಿತ್ಯ ಲೋಕಕ್ಕೆ ಇವರ ನಿಧನದಿಂದ ತುಂಬಲಾರದ ನಷ್ಟವಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ   ಶೇಖರಗೌಡ ಮಾಲೀಪಾಟೀಲ,ಜಿಲ್ಲಾ ಗೌರವ ಕಾರ್ಯದರ್ಶಿಗಳಾದ  ಪ್ರಮೋದ ತುರ್ವಿಹಾಳ,  ಎಸ್.ಬಿ.ಗೊಂಡಬಾಳ, ಗೌರವ ಕೋಶಾಧ್ಯಕ್ಷ  ರಾಜಶೇಖರ ಅಂಗಡಿ, ತಾಲೂಕಾ ಅಧ್ಯಕ್ಷರುಗಳಾದ   ಬಸವರಾಜ ಕೋಟಿ,  ಜಿ.ಎಸ್ ಗೋನಾಳ,   ರವೀಂದ್ರ ಬಾಕಳೆ,   ಈಶಪ್ಪ ಮಳಗಿ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply