ರಂಗಕಲೆ ಉಳಿಸಲು ಕಲಾವಿದರಿಗೆ ಪ್ರೋತ್ಸಾಹ ಅಗತ್ಯ : ಸೈಯ್ಯದ್


ಕೊಪ್ಪಳ.ನ.೧೫: ಇಂದಿನ ಆಧುನಿಕ ಯುಗದಲ್ಲಿ ದೃಶ್ಯ ಮಾಧ್ಯಮದ ಹಾವಳಿಯಲ್ಲಿ ರಂಗಕಲೆ ನಶಿಸಿ ಹೊಗುತ್ತಿವೆ. ರಂಗಭೂಮಿ ಉಳಿಸಿ ಬೆಳೆಸಲು ರಂಗಭೂಮಿ ಕಲಾವಿದರಿಗೆ ಪ್ರತಿಯೊಬ್ಬರು ಪ್ರೋತ್ಸಾಹಿಸುವುದು ಅಗತ್ಯ. ರಂಗಕಲೆಯಲ್ಲಿ ನಮ್ಮ ನಾಡಿನ ಸಂಸ್ಕೃತಿ, ಕಲೆ, ಪರಂಪರೆ ಪ್ರತಿಬಿಂಬಿಸುತ್ತದೆ. ಇದರ ಉಳಿವಿಗಾಗಿ ಕಲಾಸಕ್ತರು ರಂಗಭೂಮಿ ಕಲಾವಿದರಿಗೆ ಪ್ರೋತ್ಸಾಹಿಸುವುದು ಅಗತ್ಯ ಈ ದೀಸೆಯಲ್ಲಿ ತಮ್ಮ ಸಂಪೂರ್ಣ ಸಹಾಯ, ಸಹಕಾರ ರಂಗಭೂಮಿ ಕಲಾವಿದರಿಗೆ ನೀಡುವುದಾಗಿ ಸೈಯ್ಯದ್ ಫೌಂಡೇಶನ್ ಅಧ್ಯಕ್ಷ ಹಾಗೂ ಬಿಎಸ್‌ಆರ್ ಕಾಂಗ್ರೆಸ್ ಮುಖಂಡ ಕೆ.ಎಂ.ಸೈಯ್ಯದ್ ಹೇಳಿದರು.
ಅವರು ತಾಲೂಕಿನ ಅಳವಂಡಿ ಗ್ರಾಮದಲ್ಲಿ ಶ್ರೀ ಪಂಚಾಕ್ಷರೇಶ್ವರ ಕಲಾ ಬಳಗ ಮಂಗಳೂರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರುಗಳ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ ಡಾ|| ಪಂಡಿತ ಪುಟ್ಟರಾಜ ಕವಿ ಗವಾಯಿಗಳ ಕೃತ ಶಿವಶರಣೆ ಅಕ್ಕಮಹಾದೇವಿ ಎಂಬ ಭಕ್ತಿ ಪ್ರಧಾನ ಪೌರಾಣಿಕ ನಾಟಕದ ಪ್ರದರ್ಶನದ ಉದ್ಘಾಟನೆ ನೆರವೇರಿಸಿ ನಾಟಕಕ್ಕೆ ಚಾಲನೆ ನೀಡಿ ಮಾತನಾಡಿದರು.
ಮುಂದುವರೆದು ಮಾತನಾಡಿದ ಅವರು, ಜೀವನ ಒಂದು ನಾಟ್ಯ ರಂಗ ಇಲ್ಲಿ ವಾಸಿಸುವ ಮನುಷ್ಯ ಪಾತ್ರದಾರಿ. ಸೂತ್ರದಾರಿ ಆ ಪರಮಾತ್ಮ ಆ ಪರಮಾತ್ಮನ ನಿರ್ದೇಶನದಂತೆ ಪ್ರತಿಯೊಬ್ಬ ಮನುಷ್ಯ ಜೀವನದಲ್ಲಿ ಒಳ್ಳೆಯ ಕೆಲಸಗಳನ್ನು ಮಾಡುವುದರ ಮೂಲಕ ತನ್ನ ಜೀವನವನ್ನು ಸಾರ್ಥಕ ಮಾಡಿಸಿಕೊಳ್ಳಬೇಕು ಅಂದಾಗ ಮಾತ್ರ ಬದುಕಿಗೆ ಒಂದು ಅರ್ಥ ಬರುತ್ತದೆ ಎಂದ ಅವರು, ನಾಟಕಗಳಲ್ಲಿ ಬರುವಂತಹ ಒಳ್ಳೆಯ ಸನ್ನಿವೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಕೆಟ್ಟ ಸನ್ನಿವೇಶಗಳನ್ನು ಅಲ್ಲಿಯೇ ಬಿಡಬೇಕು ಅಂದಾಗ ಮಾತ್ರ ಸಾರ್ಥಕ ಬದುಕು ನಿಶ್ವಾರ್ಥದ ಸೇವೆಯಾಗುತ್ತದೆ ಎಂದು ಹೇಳಿ ಕಲಾವಿದರ ಸಹಾಯಾರ್ಥವಾಗಿ ಏರ್ಪಡಿಸಿದ ಈ ನಾಟಕಕ್ಕೆ ತಮ್ಮ ಫೌಂಡೆಶನ್ ವತಿಯಿಂದ ಸಂಪೂರ್ಣ ಸಹಕಾರ ನೀಡುವುದಾಗಿ ಸೈಯ್ಯದ್ ಫೌಂಡೇಶನ್ ಅಧ್ಯಕ್ಷ ಹಾಗೂ ಬಿಎಸ್‌ಆರ್ ಕಾಂಗ್ರೆಸ್ ಮುಖಂಡ ಕೆ.ಎಂ.ಸೈಯ್ಯದ್‌ರವರು  ಹೇಳಿದರು.
ದಿವ್ಯ ಸಾನಿಧ್ಯವನ್ನು ಪ್ರಕಾಶ ಸ್ವಾಮಿ ಇನಾಂದಾರ ವಹಿಸಿದ್ದರು. ಗ್ರಾ.ಪಂ.ಉಪಾಧ್ಯಕ್ಷ ಹನುಮಂತಪ್ಪ ಕರಡಿ ವಹಿಸಿದ್ದರು. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಜೆಡಿಎಸ್ ಮುಖಂಡ ಪ್ರದೀಪ ಗೌಡ ಮಾಲಿಪಾಟೀಲ್, ಚೌಡಪ್ಪ ಜಂತಲಿ, ಜಯಣ್ಣ ಶೆಟ್ರ, ಚಂದ್ರಪ್ಪ ಜಂತಲಿ, ನಾಗಪ್ಪ ಸವಡಿ, ಹನುಮಂತಗೌಡ್ರ ಗಾಳಿ, ರಾಮಣ್ಣ ಜಂತಲಿ, ಗೊಣೇಶ ಉಪ್ಪಾರ, ವೆಂಕಾರೆಡ್ಡಿ ಇಮಡಿ ಸೇರಿದಂತೆ ತಾ.ಪಂ. ಮತ್ತು ಗ್ರಾ.ಪಂ.ಸರ್ವ ಸದಸ್ಯರು, ಗ್ರಾಮದ ಹಿರಿಯರು ವೇದಿಕೆಯ ಮೇಲೆ ಉಪಸ್ಥಿತರಿದ್ದರು. ನಂತರ ಶಿವಶರಣೆ ಅಕ್ಕಮಹಾದೇವಿ ಎಂಬ ಭಕ್ತಿ ಪ್ರಧಾನ ಪೌರಾಣಿಕ ನಾಟಕ ಉಚಿತ ಪ್ರದರ್ಶನ ಯಶಸ್ವಿಯಾಗಿ ಜರುಗಿತು.

Please follow and like us:
error