೨೩ ರಂದು ಕಾರ್ಮಿಕಮಂತ್ರಿ ಪಿ.ಟಿ. ಪರಮೇಶ್ವರ ನಾಯ್ಕ ರಾಜಿನಾಮೆಗೆ ಒತ್ತಾಯಿಸಿ ಪ್ರತಿಭಟನೆ.

ಕೊಪ್ಪಳ-22- ಮೇಲ್ಕಾಣಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಕಾರ್ಮಿಕಮಂತ್ರಿ ಪಿ.ಟಿ. ಪರಮೇಶ್ವರ ನಾಯ್ಕರವರ ಧೋರಣೆ  ಹಾಗೂ ರಾಜ್ಯ ಸರ್ಕಾರದ ವಿರೋಧಿ ಕ್ರಮಗಳ ವಿರುದ್ಧ ಕಳೆದ ಅಕ್ಟೋಬರ್ ೧೭ ರಂದು ಸಿಐಟಿಯು ಕರ್ನಾಟಕ ರಾಜ್ಯ ಸಮಿತಿ ಸಭೆಯಲ್ಲಿ ಚರ್ಚಿಸಲಾಯಿತು. ಕಾರ್ಮಿಕರ ಪರಿಸ್ಥಿತಿ ದಿನದಿಂದ ದಿನಕ್ಕೆ ಸಂಕಷ್ಟಕ್ಕೆ ಒಳಗಾಗುತ್ತಿದೆ. ಸರ್ಕಾರದ ಕಾರ್ಮಿಕರ ವಿರೋಧಿ ನೀತಿ, ಕಾರ್ಮಿಕಮಂತ್ರಿ ಪಿ.ಟಿ. ಪರಮೇಶ್ವರ ನಾಯ್ಕರವರ ಧೋರಣೆ  ಖಂಡಿಸಿ ಕಾರ್ಮಿಕಮಂತ್ರಿ ಪಿ.ಟಿ. ಪರಮೇಶ್ವರ ನಾಯ್ಕರವರ ರಾಜಿನಾಮೆಗೆ ಒತ್ತಾಯಿಸಿ ಇದೇ ದಿ: ೨೩ ರಂದು ರಾಜ್ಯದಾಧ್ಯಂತ ಪ್ರತಿ ಜಿಲ್ಲಾ ಹಾಗೂ ತಾಲೂಕ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲು ನಿರ್ಣಯಿಸಲಾಗಿದೆ. ಇದರ ಅಂಗವಾಗಿ ಕೊಪ್ಪಳ ತಾಲೂಕ ಮಟ್ಟದ ಪ್ರತಿಭಟನೆಯನ್ನು ದಿ:೨೩ ರಂದು ನಗರದ ಅಶೋಕ ವೃತ್ತಿದಿಂದ ತಹಶೀಲ್ದಾರ ಕಚೇರಿಗೆ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ.

Leave a Reply