ನೌಕರರ ಸಂಘ ಚುನಾವಣೆ: ಜಿಲ್ಲಾ ಸಮಿತಿಯ ೧೬ ಸ್ಥಾನಗಳಿಗೆ ೩೯ ಅಭ್ಯರ್ಥಿಗಳು ಕಣದಲ್ಲಿ

ಜು. ೨೨ ರಂದು ಬೆಳಿಗ್ಗೆ ೧೧ ಗಂಟೆಯಿಂದ ಸಂಜೆ ೪ ಗಂಟೆಯವರೆಗೆ ಮತದಾನ ನಡೆಯಲಿದ್ದು, ಮತಗಳ ಎಣಿಕೆ ಸಂಜೆ ೪-೩೦ ರ ನಂತರ ಜಿಲ್ಲಾ ನೌಕರರ ಭವನದಲ್ಲಿ ನಡೆಯಲಿದೆ.
 ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಕಾರ್ಯಕಾರಿ ಸಮಿತಿಗೆ ಸದಸ್ಯರ ಆಯ್ಕೆಗೆ ನಡೆದಿರುವ ಚುನಾವಣೆಗೆ ಸಂಬಂಧಿಸಿದಂತೆ ೪೬ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದು, ಉಳಿದಂತೆ ೧೬ ಸ್ಥಾನಗಳಿಗಾಗಿ ೩೯ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ ಎಂದು ಚುನಾವಣಾಧಿಕಾರಿ ಎನ್.ವೈ. ಕಾಡಗಿ ಅವರು ತಿಳಿಸಿದ್ದಾರೆ.
  ಜಿಲ್ಲಾ ಕಾರ್ಯಕಾರಿ ಸಮಿತಿಗೆ ಅವಿರೋಧವಾಗಿ ಆಯ್ಕೆಯಾದ ಸದಸ್ಯರು ಮತ್ತು ಇಲಾಖೆಯ ವಿವರ ಇಂತಿದೆ.  ರಾಮಚಂದ್ರ, ಎನ್.ವೈ. ಹಿರೇದಾಳ -ಕೃಷಿ, ಡಾ. ಬಸಯ್ಯ ಸಾಲಿ- ಪಶುಸಂಗೋಪನೆ. ದೇವೇಂದ್ರಪ್ಪ, ಧನಂಜಯ, ಕೆ. ಹೊನ್ನಪ್ಪ- ಕಂದಾಯ.  ಪಿ.ಎಸ್. ಅಮರದೀಪ್- ಆಹಾರ, ಗ್ರಾಹಕ ವ್ಯವಹಾರಗಳ ಇಲಾಖೆ.  ಆರ್.ಹೆಚ್. ನದಾಫ್- ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆ.  ಎಂ. ಶ್ರೀಧರ್, ಹೆಚ್. ಬಸವರಾಜ್- ವಾಣಿಜ್ಯ ತೆರಿಗೆ. ಬಸವರಾಜ್-ಸಹಕಾರ ಸಂಘಗಳ ಲೆಕ್ಕಪರಿಶೋಧನೆ. ಗೋಪಾಲಕೃಷ್ಣ ಮುಂಡರಗಿ, ಮುಸ್ತಫಾ- ಲೋಕೋಪಯೋಗಿ ಮತ್ತು ಜಿ.ಪಂ.ಇಂ. ವಿಭಾಗ.  ಗೋಪಾಲರಾವ್- ಅಬಕಾರಿ.  ವಿಜಯಲಕ್ಷ್ಮಿ ಬೆಲ್ಲದ- ಸಮಾಜ ಕಲ್ಯಾಣ.  ಸಾರಂಗಮಠ- ಬಿಸಿಎಂ.  ಬಿ.ಟಿ. ಭೋಗೇಶ- ಮಹಿಳಾ ಮತ್ತು ಮಕ್ಕಳ ಕಲ್ಯಾಣ.  ಶ್ರೀನಿವಾಸ ಕುಲಕರ್ಣಿ- ಮೀನುಗಾರಿಕೆ.  ಕಲ್ಲಪ್ಪ- ಅರಣ್ಯ.  ನಾಗರಾಜ್ ಆರ್. ಜುಮ್ಮನ್ನವರ್, ಸುಧೀರ್, ಗವಿಶಿದ್ದಯ್ಯ ಬಿ ಮಠ, ದೇವೇಂದ್ರಪ್ಪ, ಚನ್ನವೀರಯ್ಯ-ಆರೋಗ್ಯ ಮತ್ತು ಕುಟುಂಬ ಕಲ್ಯಾಣ.  ಕರಿ ನಾಗರಾಜ್- ಆಯುಷ್ ಮತ್ತು ಇಎಸ್‌ಡಿ.  ವಂಕಾ ದುರ್ಗಾಪ್ರಸಾದ್- ತೋಟಗಾರಿಕೆ.  ಎನ್.ಎಂ.ಪತ್ತಾರ- ಕೈಗಾರಿಕೆ ಮತ್ತು ವಾಣಿಜ್ಯ.  ತುಕಾರಾಂರಾವ್ ಬಿ.ವಿ.- ವಾರ್ತಾ, ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ.  ಹರಿಸರ್ವೋತ್ತಮ ಆಚಾರ್ಯ- ಕೆಜಿಐಡಿ.  ವೆಂಕಟೇಶಮೂರ್ತಿ ಕೆ.- ತಾಂತ್ರಿಕ ಶಿಕ್ಷಣ.  ಅಮೃತವ್ವ ಹೂಗಾರ- ಕೃಷಿ ಉತ್ಪನ್ನ ಮಾರುಕಟ್ಟೆ.  ಹರೀಶ್ ಬಿ.ಜಿ.- ಗಣಿ ಮತ್ತು ಭೂವಿಜ್ಞಾನ.  ಜೆ.ಬಿ. ಲಕ್ಷ್ಮಣಗೌಡ- ಸಾರಿಗೆ. ಎನ್.ಟಿ. ಕಟ್ಟಿಮನಿ- ರೇಷ್ಮೆ.  ಹುಚ್ಚೀರಪ್ಪ ಹೊಸಮನಿ- ಭೂಮಾಪನ.  ಮಹ್ಮದ್ ಇಸ್ಮಾಯಿಲ್- ಮುದ್ರಾಂಕ ಮತ್ತು ನೋಂದಣಿ.  ಗಂಗಾಧರ್- ಖಜಾನೆ.  ಬಸಯ್ಯ ಅಂಗಡಿ- ಕಾರ್ಮಿಕ.  ಎಂ.ಎನ್. ವೀರಯ್ಯ- ನಗರ ಯೋಜನೆ.  ಜ್ಞಾನದೇವ ಬಿರಾದಾರ- ಐಟಿಐ.  ಬಿ.ಎಫ್.ಬೀರನಾಯ್ಕರ್- ಉದ್ಯೋಗ ಮತ್ತು ತರಬೇತಿ.  ಉಮೇಶ್ ಹುಡೇದ್- ಧಾರ್ಮಿಕ ದತ್ತಿ.  ಬಸವರಾಜ ಪಲ್ಲೇದ, ಅರುಣಕುಮಾರ- ನ್ಯಾಯಾಂಗ.  ಜಂಬಣ್ಣ ನಂದಾಪುರ- ಗ್ರಾಮಿಣಾಭಿವೃದ್ಧಿ (ತಾ.ಪಂ.).  ವಿ.ಆರ್. ಜೋಷಿ- ಇತರೆ (ಕೆವಿಕೆ) ಕೊಪ್ಪಳ.
  ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳ ಹೆಸರು, ಇಲಾಖೆ, ಸದಸ್ಯ ಸ್ಥಾನಗಳ ಸಂಖ್ಯೆಯ ವಿವರ ಇಂತಿದೆ.  ಕಮಲಾನಾಯಕ್, ಪ್ರದೀಪ್ ಕುಮಾರ- ಸಹಕಾರ (೧) .  ಜಯತೀರ್ಥದೇಸಾಯಿ, ಆರ್. ಯೂನಸ್- ನೀರಾವರಿ (೧).  ಕೆ.ಎಂ. ಪಾಟೀಲ್, ಶಿವನಗೌಡ ಪಾಟೀಲ್- ಯುವಜನ ಸೇವೆ ಮತ್ತು ಗ್ರಂಥಾಲಯ (೧).  ಹುಸೇನ್‌ಸಾಬ್ ಕಾಯಿಗಡ್ಡಿ, ಜೋಶಿ ಹೆಚ್.ಎಂ.- ಜಿಲ್ಲಾ ಪಂಚಾಯತಿ (೧).  ಐ.ಜಿ. ಕೊಳ್ಳಿ, ಶಶಿಧರ ಕೆ.ಎಂ., ಸವಿತಾ ಎಂ.  ಸೈದಾ ಟಿ.ಜಿ- ಜಿಲ್ಲಾ ಆಸ್ಪತ್ರೆ (೧).  ಅನ್ನಪೂರ್ಣ ಅಸ್ಕಿ, ಹೆಚ್.ಎಸ್. ಶಿವರೆಡ್ಡಿ, ಖಾಸಿಂಸಾಬ್, ಶಂಕರಗೌಡ, ಎಸ್.ಎಸ್. ಸುಂಕದ- ಪ್ರೌಢಶಿಕ್ಷಣ (೨).  ಬೀರಪ್ಪ, ಭಾರತಿ, ಇಬ್ರಾಹಿಂಸಾಬ್, ಕೊಟ್ರಬಸಯ್ಯ, ಮಹಾಂತಪ್ಪ ತಾಳಿಕೋಟೆ, ಮಾರುತಿ ಆರೇರ, ಪಾಂಡುರಂಗ, ರವೀಂದ್ರ ಜೋಶಿ, ಸಂಗಪ್ಪ ರಾಟಿ. ಸಂಗಪ್ಪ ವಟಪರವಿ, ಶಂಭುಲಿಂಗನಗೌಡ, ಶಿವಪ್ಪ ಜೋಗಿ, ವೀರಣ್ಣ ಕೊನಸಾಗರ, ವೆಂಕರೆಡ್ಡಿ ಇಮ್ಮಡಿ- ಪ್ರಾಥಮಿಕ ಶಾಲೆಗಳು(೫).  ರಜಪೂತ ಎಸ್.ಎ., ರಾಜಶೇಖರ್- ಕಿರಿಯ ಕಾಲೇಜು (೧).  ಹನುಮಂತಗೌಡ ಗುಡಿಹಿಂದಿನ, ಮಲ್ಲಿಕಾರ್ಜುನ ಎಂ- ಪದವಿ ಕಾಲೇಜು (೧).  ಶಂಕ್ರಪ್ಪ ಬಾವಿಮನಿ, ವಿವೇಕಾನಂದ- ಪೊಲೀಸ್ ಆಡಳಿತ (೧).  ಭರಮಪ್ಪ ಮುದಗಲ್, ಸುಶೀಲೇಂದ್ರರಾವ್- ರಾಜ್ಯ ಲೆಕ್ಕಪತ್ರ ಇಲಾಖೆ (೧).
  ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಕಾರ್ಯಕಾರಿ ಸಮಿತಿಯ ಸದಸ್ಯರ ಚುನಾವಣೆಗಾಗಿ ಮತದಾನವು ಕೊಪ್ಪಳದ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜು. ೨೨ ರಂದು ಬೆಳಿಗ್ಗೆ ೧೧ ಗಂಟೆಯಿಂದ ಸಂಜೆ ೪ ಗಂಟೆಯವರೆಗೆ ಮತದಾನ ನಡೆಯಲಿದ್ದು, ಮತಗಳ ಎಣಿಕೆ ಸಂಜೆ ೪-೩೦ ರ ನಂತರ ಜಿಲ್ಲಾ ನೌಕರರ ಭವನದಲ್ಲಿ ನಡೆಯಲಿದೆ.  ಚುನಾವಣೆ ಪ್ರಕ್ರಿಯೆಯೆ ಶಾಂತಿ ಮತ್ತು ಸುವ್ಯವಸ್ಥೆಯಿಂದ ನಡೆಸಲು ನೌಕರ ಬಾಂಧವರು ಸಹಕರಿಸಬೇಕು ಎಂದು ಚುನಾವಣಾಧಿಕಾರಿ ಎನ್.ವೈ. ಕಾಡಗಿ ಅವರು  ಮನವಿ ಮಾಡಿಕೊಂಡಿದ್ದಾರೆ.

Leave a Reply