ತಾಯಿ,ಮಕ್ಕಳು ಆತ್ಮಹತ್ಯೆ ಮಾಡಿಕೊಂಡ ಕುಟುಂಬಕ್ಕೆ ಕೆ.ಎಂ.ಸೈಯದ್ ಸಾಂತ್ವನ

ಕೊಪ್ಪಳ : ಹಿರೇಸಿಂದೋಗಿಯ ತಾಯಿ,ಮಕ್ಕಳು ಆತ್ಮಹತ್ಯೆ ಮಾಡಿಕೊಂಡ ಕುಟುಂಬಕ್ಕೆ ಜೆ.ಎಡಿ.ಎಸ್.ನ ಅಲ್ಪಸಂಖ್ಯಾತರ ಘಟಕದ ರಾಜ್ಯ ಪ್ರದಾನ ಕಾರ್‍ಯದರ್ಶಿ ಕೆ.ಎಂ.ಸೈಯದ್ ಸಾಂತ್ವನ ಹೇಳಿದರು. ತಾಯಿ ಮತ್ತು ಮಕ್ಕಳಿಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಕುಟುಂಬಕ್ಕೆ ಆತ್ಮಸ್ಥೈರ್ಯ ತುಂಬಿದ ಕೆ.ಎಂ.ಸೈಯದ್ – ದುಃಖಿ ಕುಟುಂಬಕ್ಕೆ ದೇವರು ದುಃಖವನ್ನು ಭರಿಸುವ ಶಕ್ತಿ ನೀಡಲೆಂದು ಪ್ರಾರ್ಥಿಸಿದರು. ಈ ಸಂದರ್ಭದಲ್ಲಿ ಜೆಡಿ ಎಸ್ ಮುಖಂಡರಾದ ವೆಂಕನಗೌಡ ಡಿ ಪಾಟೀಲ್ ಹೊರತಟ್ನಾಳ, ಎಂ.ಡಿ.ಹುಸೇನ್, ಮಲ್ಲಣ್ಣ ಭತ್ತಿ, ಪೀರಾಸಾಬ ಬೆಳಗಟ್ಟಿ, ಸಿದ್ದೇಶ ಪೂಜಾರ, ನವಾಬಸಾಬ, ಭೂತಣ್ಣನವರ ಸೇರಿದಂತೆ ಇತರರು ಉಪಸ್ಥಿತರಿದ್ದರು.
Please follow and like us:
error