ಕು.ಗಾಯತ್ರಿಗೆ ಎನ್‌ವಿಎಸ್ ಇನ್ಸೆಂಟಿವ್ ಆವಾರ್ಡ ಪ್ರದಾನ.

ಕೊಪ್ಪಳ-28- ಇತ್ತೀಚಿಗೆ ಹೈದ್ರಾಬಾದನ ಸಾಂಪ್ರದಾಯಿಕ ವೇದಿಕೆ ಶಿಲ್ಪಾರಾಮಮ್ ನಲ್ಲಿ    ನಡೆದ ಸಮಾರಂಭದಲ್ಲಿ ಕು.ಗಾಯತ್ರಿ ಕುಲಕರ್ಣಿಯವರಿಗೆ ೨೦೧೫ನೇ ಸಾಲಿನ ಎನ್‌ವಿಎಸ್ ಇನ್ಸೆಂಟಿವ್ ಆವಾರ್ಡ ಪ್ರದಾನ ಮಾಡಲಾಯಿತು. ತೆಲಂಗಾಣ ಮತ್ತು ಆಂದ್ರಪ್ರದೇಶದ ರಾಜ್ಯಪಾಲರಾದ ಇ.ಎಸ್.ಎಲ್.ನರಸಿಂಹನ್ ಪ್ರಶಸ್ತಿ ಪತ್ರ ಮತ್ತು ಪದಕವನ್ನು ನೀಡಿದರು.    ಕುಕನೂರಿನ ಜವಾಹರ್ ನವೋದಯ ವಿದ್ಯಾಲಯದಲ್ಲಿ ಓದಿರುವ  ಕು.ಗಾಯತ್ರಿ ೨೦೧೫ನೇ ಸಾಲಿನ ಎನ್‌ವಿಎಸ್ ಇನ್ಸೆಂಟಿವ್ ಆವಾರ್ಡಗೆ ಆಯ್ಕೆಯಾಗಿದ್ದಾಳೆ. ಕು.ಗಾಯತ್ರಿ ೨೦೧೪-೧೫ನೇ ಸಾಲಿನಲ್ಲಿ ಕಾಮರ್ಸ ವಿಭಾಗದಲ್ಲಿ ಎಐಎಸ್‌ಎಸ್‌ಸಿಇ(೧೨) ತರಗತಿಯಲ್ಲಿ ರಾಷ್ಟ್ರಮಟ್ಟದಲ್ಲಿ ಅಗ್ರಗಣ್ಯಳಾಗಿ ಆಯ್ಕೆಯಾಗಿದ್ದಳು.  ರಾಷ್ಟ್ರಮಟ್ಟದಲ್ಲಿ ಅತ್ಯುತ್ತಮ ಸಾಧನೆ ತೋರಿದ ನವೋದಯದ ವಿದ್ಯಾಲಯದ ವಿದ್ಯಾರ್ಥಿಗಳಿಗೆ ಈ ಪುರಸ್ಕಾರ ನೀಡಲಾಗುತ್ತದೆ.  ಕು.ಗಾಯತ್ರಿ ಕೊಪ್ಪಳ ಬನ್ನಿಕಟ್ಟಿಯ ನಿವಾಸಿ ರಮೇಶ ಕುಲಕರ್ಣಿಯವರ ಪುತ್ರಿಯಾಗಿದ್ದು  ಕಾಮರ್ಸ ವಿಭಾಗದಲ್ಲಿ ರಾಷ್ಟ್ರಮಟ್ಟದಲ್ಲಿ ಟಾಪರ್ ಎಂದು ಸಾಧನೆ ಮಾಡಿದ್ದಾಳೆ.   ಈ ಸಂದರ್ಭದಲ್ಲಿ ಡಾ.ಸುಭಾಸಚಂದ್ರ ಕುಂಚಿಯಾ ಕಾರ್ಯದರ್ಶಿ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ದಿ ಇಲಾಖೆ, ವಿಶ್ವಜೀತ್ ಸಿಂಗ್ ಕೇಂದ್ರ ನವೋದಯ ಸಮಿತಿಯ ಆಯುಕ್ತರು, ನರೇಂದ್ರಕುಮಾರ ಜಂಟಿ ನಿರ್ದೇಶಕರು, ಹಾಗೂ ಉಪ ಆಯುಕ್ತ ಎ.ವಾಯ್ .ರೆಡ್ಡಿ  ಸಮಾರಂಭದಲ್ಲಿ ಉಪಸ್ಥಿತರಿದ್ದರು. ಮೊನ್ನೆ ನಡೆದ ಗಣರಾಜ್ಯೋತ್ಸವ ದಿನದಂದು ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೊಪ್ಪಳದ ಜಿಲ್ಲಾಡಳಿತದವತಿಯಿಂದ ವಿದ್ಯಾರ್ಥಿನಿಗೆ ಸನ್ಮಾನಿಸಲಾಯಿತು. ವಿದ್ಯಾರ್ಥಿನಿಯ ಈ ಸಾಧನೆಗೆ ಶಿಕ್ಷಕರು, ಪಾಲಕರು ಮತ್ತು ಗುರಯ್ಯ ಹಿರೇಮಠ, ವಿಶ್ವನಾಥ ಹಿರೇಮಠ, ರಾಜಶೇಖರ, ರಾಜಾಬಕ್ಷಿ ಎಚ್.ವಿ., ಲಕ್ಷ್ಮಣ ಪಲ್ಲೇದ ಸೇರಿದಂತೆ ಇತರರು ಅಭಿನಂದಿಸಿದ್ದಾರೆ.

Please follow and like us:
error