ಜೀನಿಯಸ್ ಪಬ್ಲಿಕ್ ಶಾಲೆಯಲ್ಲಿ ೬೬ನೇ ಗಣರಾಜ್ಯೋತ್ಸವ

 ಶಿಕ್ಷಕರು ಹೇಳುವ ಪಾಠವನ್ನು ಮಕ್ಕಳು ಶ್ರದ್ದೆಯಿಂದ ಕೇಳಿ ನಿಮ್ಮ ಜೀವನದಲ್ಲಿ ಶಿಸ್ತು ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು. ಅವರು ಕುಷ್ಟಗಿ ರಸ್ತೆ ಜೀನಿಯಸ್ ಪಬ್ಲಿಕ್ ಶಾಲೆಯಲ್ಲಿ ೬೬ ನೇ ಗಣರಾಜ್ಯೋತ್ಸವದ ಅಧ್ಯಕ್ಷತೆ ವಹಿಸಿ ಧ್ವಜರೋಣವನ್ನು ನೆರವೆರಿಸಿ ವಿ.ಶಾನಭಾಗ್ ಎಲ್.ಐ.ಸಿ ಡೆವಲಪಮೆಂಟ್ ಆಫೀಸರ್ ಮಾತನಾಡುತ್ತಿದ್ದರು.  

ಅತಿಥಿ ಸ್ಥಾನವನ್ನು ಎ.ಪಿ. ಶೆಟ್ಟರ್ ಅಡ್ವಕೇಟರ್ ವಹಿಸಿಕೊಂಡು ಮಕ್ಕಳಿಗೆ ಶುಭಾಶಯಗಳನ್ನು ತಿಳಿಸಿದರು.

ಶರಣಪ್ಪ ಚಂದನ್‌ಕಟ್ಟಿ ನಗರಸಭೆ ಸದಸ್ಯರು ಮಹಾತ್ಮ ಗಾಂಧೀಜಿರವರ ಆಧರ್ಶ, ತತ್ವಗಳನ್ನು ವಿಧ್ಯಾರ್ಥಿಗಳು ಪಾಲಿಸಬೇಕೆಂದರು. ಜೀನಿಯಸ್ ಪಬ್ಲಿಕ್ ಶಾಲೆಯ ಕಾರ್ಯದರ್ಶಿಗಳಾದ ನಾಗರಾಜ್ ಚಿಲವಾಡಗಿರವರು ಮಕ್ಕಳು ದೇಶಾಭಿಮಾನ ಬೇಳಸಿಕೊಂಡು ಮುಂದಿನ ಆಧುನಿಕ ಜಗತ್ತಿಗೆ ಭವ್ಯಭಾರತ ನಿರ್ಮಾಣ ಮಾಡಲು ಕರೆ ನೀಡಿದರು. ಶಾಲೆಯ ಮುದ್ದು ಮಕ್ಕಳು ಹಾಗೂ ಶಿಕ್ಷಕರಾದ ಶ್ರೀಮತಿ ವಿನುತಾ ಹಾಗೂ ಶ್ರೀಮತಿ ಪವಿತ್ರ ಮಾತನಾಡಿದರು. ಶ್ರೀಮತಿ ಅರುಣಾ ನಿರೂಪಿಸಿದರು. ಕುಮಾರಿ ನೇತ್ರಾವತಿ ಬಂಗಾರಿ ಸ್ವಾಗತಿಸಿದರು. ಶ್ರೀಮತಿ ನೀಲಮ್ಮ ಸರ್ವಿ ಈ ಸುಂದರ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು ಶ್ರೀಮತಿ ನೇತ್ರಾವರಿ ಚನ್ನಯ್ಯ ವಂದಿಸಿದರು.

Leave a Reply