ರಾಷ್ಟ್ರೀಯ ಯುವ ದಿನದ ಶುಭಾಷಯಗಳು..

ಸ್ವಾಮಿ ವಿವೇಕಾನಂದ (ನರೇಂದ್ರನಾಥ ದತ್ತ) (ಜನವರಿ ೧೨, ೧೮೬೩ – ಜುಲೈ ೪, ೧೯೦೨) ಭಾರತದ ಅತ್ಯಂತ ಪ್ರಸಿದ್ಧ ಮತ್ತು ಪ್ರಭಾವಶಾಲಿ ತತ್ತ್ವಜ್ಞಾನಿಗಳಲ್ಲಿ ಒಬ್ಬರು. ನಿರ್ಭಯತೆ, ಆಶಾವಾದ ಮತ್ತು ಸಾಮಾಜಿಕ ಸಮಸ್ಯೆಗಳ ಬಗೆಗಿನ ವಿಶಾಲ ದೃಷ್ಟಿಯ ಸಂಕೇತವಾಗಿ ಅವರು ಪರಿಗಣಿತರಾಗಿದ್ದಾರೆ. ಸ್ವಾಮಿ ವಿವೇಕಾನಂದರ ಜನ್ಮ ದಿನವಾದ ಜನವರಿ ೧೨ ರಂದು ರಾಷ್ಟ್ರೀಯ “ಯುವದಿನ”ವೆಂದು ಆಚರಿಸಲಾಗುತ್ತದೆ. ಬಾಲ್ಯದಲ್ಲಿ ನರೇಂದ್ರರು ತುಂಬಾ ತುಂಟರಾಗಿದ್ದು ಓದು ಬರಹದ ಕಡೆ ಗಮನವೇ ಇರುತ್ತಿರಲಿಲ್ಲ, ಆದರೆ ತಾಯಿ ಹೇಳುವ ರಾಮಾಯಣ, ಮಹಾಭಾರತದ ಕಥೆಗಳನ್ನು ಮಾತ್ರ ಮನಸ್ಸಿಟ್ಟು ಕೇಳುತ್ತಿದ್ದರಂತೆ, ಬಡವರ ಬಗ್ಗೆ ಕನಿಕರ, ಸನ್ಯಾಸಿಗಳನ್ನು ಕಂಡರೆ ಆಸಕ್ತಿ ಆಕರ್ಷಣೆ ಪ್ರತಿಯೊಂದನ್ನು ಪ್ರಾಮಾಣಿಸಿ ಕಾಣುವ ಕುತೂಹಲ ಮೈಗೂಡಿಸಿಕೊಂಡೇ ಬೆಳೆದರು ತಂದೆ ತಾಯಿಯ ಮರಣಾನಂತರ ಕುಟುಂಬದ ಜವಾಬ್ದಾರಿ ಹೊತ್ತ ಅವರಿಗೆ ಕಷ್ಟಸುಖದ ಅರಿವಾಯಿತು ಬಡವರ ಕಷ್ಟನಿವಾರಣೆಗೆ ಹೇಗೆ? ದೇವರನ್ನು ಕಾಣುವುದು ಹೇಗೆ? ಎನ್ನುತ್ತಾ ತಮಗಾಗಿ ಮಾರ್ಗದರ್ಶನ ನೀಡುವ ಗುರುವನ್ನು ಅರಸುತ್ತಾ ನೆಡೆದರು ರಾಮಕೃಷ್ಣರ ಶಿಷ್ಯರಾದರುಗುರುವಿಗೆ ಕೇಳಿದ ಮೊದಲ ಪ್ರಶ್ನೆ ನೀವು ದೇವರನ್ನು ನೋಡಿದ್ದೀರಾ? ಆಗ ರಾಮಕೃಷ್ಣರು ಹೌದು ಈಗ ನೀನಿರುವುದು ಎಷ್ಟು ಸತ್ಯವೋ ಹಾಗೇ ದೇವರಿರುವುದೂ ಸತ್ಯ ನೋಡಿದ್ದೇನೆ ಎಂದಾಗ ಅವರ
ಶಿಷ್ಯರಾದರು ನರೇಂದ್ರನ ಮನದ ಹೋರಾಟವನ್ನೆಲ್ಲಾ ಅರಿತ ಗುರುಗಳು ಅವನಿಗೆ ತಾಳ್ಮೆಯಿಂದ
ಅಪಾರ ಜ್ಞಾನಭಂಢಾರವನ್ನೇ ಧಾರೆಎರೆದರು ಇಡೀ ಭಾರತ ದೇಶದಲ್ಲಿ ೫ ವರ್ಷಗಳ ಕಾಲ ಸಂಚಾರಮಾಡಿ
ಜನರ ಮನವನಿರಿತು, ಬಡತನದಿಂದ ನರಳುವವರನ್ನು ಕಂಡು, ಸೋಮಾರಿತನದ ಪರಮಾವಧಿ ಕಂಡು
ಕನ್ಯಾಕುಮಾರಿಯ ಮೇಲ್ಗಡೆನಿಂತು ಯುವಕರನ್ನು ಬಡಿದೆಬ್ಬಿಸಿದರು “ಏಳಿ ಎದ್ದೇಳಿ
ಸೋಮಾರಿಯಾಗಿ ಕಾಲ ಕಳೆಯದಿರಿ, ಮುನ್ನುಗ್ಗಿ ಮುಂದಿನ ಭಾರತದ ಭವ್ಯ ಪ್ರಜೆಗಳು ನೀವು
ಎನ್ನುತ್ತಾ ಅವರನ್ನು ಹುರಿದುಂಬಿಸಿ ಹೊಸ ಚೈತನ್ಯ ತುಂಬಿದಾ ಮಹಾ ಶಕ್ತಿಯಾದರು ಆದ್ದರಿಂದ
ಇಂದಿನ ಅವರ ಜನ್ಮದಿನವನ್ನು “ಯುವ ದಿನಾಚರಣೆಯೆಂದೇ” ಕರೆಯುತ್ತಾರೆ. ಇಂತಹಾ ಮಹಾ
ಚೇತನಕ್ಕೆ ಆಯಸ್ಸು ಮಾತ್ರ ಅಲ್ಪ ತಮ್ಮ೩೯ ನೇ ವಯಸ್ಸಿನಲ್ಲೇ ಇಹಲೋಕ ತ್ಯಜಿಸಿದ ಮಹಾ
ಪುರುಷರು ವಿವೇಕಾನಂದರು ಅಲ್ಪಕಾಲದಲ್ಲೇ ಅಪಾರ ಜ್ಞಾನಸಂಪತ್ತನ್ನು ಮುಂದಿನ ಯುವಪೀಳಿಗೆಗೆ
ಕೊಟ್ಟವರು ಅವರ ವಿವೇಕಾನಂದವಾಣಿ ಇಂದಿಗೂ ಪುಸ್ತಕರೂಪದಲ್ಲಿ ಕೋಟ್ಯಾಂತರ ಜನರನ್ನು
ತಲುಪಿದೆ ತಲುಪುತ್ತಿದೆ ಅವರ ತತ್ವಜ್ಞಾನ, ಯೋಗಜ್ಞಾನ ,ಎಲ್ಲವನ್ನೂ ಭಾರತೀಯರಿಗೆ
ಧಾರೆಎರದ ಮಹಾ ಚೇತನಕ್ಕೆ ಇಂದು ನಾವೆಲ್ಲಾ ಒಂದಾಗಿ ನಮಿಸುತ್ತಾ ಅವರ ವಿವೇಕವಾಣಿಯನ್ನು
ಇಂದಾದರೂ ಓದೋಣವೇ? ಏನಂತೀರಿ?

Please follow and like us:
error