ಮಳೆ ಮಲ್ಲೇಶ್ವರ ದೇವಸ್ಥಾನದಲ್ಲಿ ವರುಣಜಪ ಕಾರ್ಯಕ್ರಮ ಮುಕ್ತಾಯ.

ಕೊಪ್ಪಳ- ಆಗಸ್ಟ್ ೧೭- ಕೊಪ್ಪಳ ಜಿಲ್ಲೆ ಸೇರಿದಂತೆ ನಾಡಿನ ಅನೇಕ ಜಿಲ್ಲೆಗಳಲ್ಲಿ ಮಳೆ ಇಲ್ಲದೇ ತೀವ್ರ ಬರಗಾಲ ಅನುಭವಿಸಿ ಜಾನುವಾರುಗಳಿಗೆ ಸರಿಯಾದ ಮೇವು ಸಿಗದೆ ಅನೇಕ ರೈತ ಕುಟುಂಬಗಳು ಮಳೆ ಇಲ್ಲದೇ ಮತ್ತು ಬೆಳೆದ ಬೆಳೆಗೆ ಸರಿಯಾದ ಬೆಂಬಲಬೆಲೆ ಸಿಗದೇ ಅತ್ಮಹತ್ಯೆಗೆ ಶರಣಾಗಿ ರೈತಕುಟುಂಬಗಳು ಬೀದಿಪಾಲಾಗಿವೆ. ನಾಡಿಗೆ ವರುಣನ ಕೃಪೆಯಾಗಲೆಂದು ಕೊಪ್ಪಳ ವಿವೇಕ ಜಾಗೃತ ದಳದಿಂದ ಮಳೆಮಲ್ಲೇಶ್ವರ ದೇವಸ್ಥಾನದಲ್ಲಿ ದಿನಾಂಕ ೧೪-೦೭-೨೦೧೫ ರಿಂದ ಪ್ರಾರಂಭಗೊಂಡ ವರುಣನ ಜಪ ಕಾರ್ಯಕ್ರಮ ನಿರಂತರವಾಗಿ ಒಂದು ತಿಂಗಳ ಕಾಲ ನಡೆದು ಇಂದು ವಿಶೇಷ ಪೂಜಾ-ಪುನಸ್ಕಾರಗಳೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.  ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಾಗೃತದಳದ ಗೌರವ ಅಧ್ಯಕ್ಷರಾದ ವೀರಭದ್ರಯ್ಯ ಬನ್ನಿಮಠ ವಹಿಸಿದ್ದರು. ಕಾರ್ಯಕ್ರಮದಲ್ಲಿ ಜಾಗೃತದಳದ ಅನೇಕ ಸದಸ್ಯರು ನಂತರ ಸದ್ಬಕ್ತರು ಪಾಲ್ಗೊಂಡು ವಿಶೇಷ ಪೂಜೆ ಸಲ್ಲಿಸುವುದರ ಮುಖಾಂತರ ಮಳೆಗಾಗಿ ಪ್ರಾರ್ಥನೆಗೈದರು. ಕಾರ್ಯಕ್ರಮದ ನಂತರ ಸಂಜೆ ೫-೦೦ ಗಂಟೆಗೆ ಕೊಪ್ಪಳ ನಗರದ ಅಶೋಕ ವೃತ್ತದಲ್ಲಿರುವ ಬಸವರಾಜ ಮುದೇನೂರು ಇವರ ಮನೆಯಲ್ಲಿ ವಿಶೇಷ ಸತ್ಸಂಗ ಕಾರ್ಯಕ್ರಮ ಜರುಗಿತು. ಅಧ್ಯಕ್ಷತೆಯನ್ನು ಜಾಗೃತದಳದ ಅಧ್ಯಕ್ಷರಾದ ಸಿ.ವಿ ಮಡಿವಾಳರ ವಹಿಸಿದ್ದರು. ಸತ್ಸಂಗ ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಚಾರ್ಯರಾದ ಬಿ.ಜಿ.ಕರಿಗಾರ, ಸಿ.ವಿ.ಕಲ್ಮಠ, ವೀರಭದ್ರಯ್ಯ ಬನ್ನಿಮಠ, ನಿಜಗುಣಿಯಪ್ಪ ಕೊರ್ಲಳ್ಳಿ, ಚಂದ್ರಶೇಖರ ಪಾಟೀಲ, ಎಂ.ಬಸವರೆಡ್ಡಿ, ಎಸ್.ಎಂ.ಖಂಡಿಮಠ, ಎಸ್.ಬಿ.ನಾಗನಗೌಡ್ರು, ಬಸನಗೌಡ ಮಾಲಿಪಾಟೀಲ, ಶ್ರೀಮತಿ ಶಿವಮ್ಮ ಬನ್ನಿಮಠ, ಭಾರತೀ ಜಾಣರ ಮುಂತಾದವರು ಭಾಗವಹಿಸಿ ವರುಣನ ಕೃಪೆಗಾಗಿ ಪ್ರಾರ್ಥನೆಗೈದರೆಂದು ವಿವೇಕ ಜಾಗೃತ ಬಳಗದ ಜ್ಯೋತಿ ಸಂಚಾಲಕರಾದ ಗವಿಸಿದ್ದಪ್ಪ ಕರ್ಕಿಹಳ್ಳಿ ಓಜನಹಳ್ಳಿ ತಿಳಿಸಿದ್ದಾರೆ.

Please follow and like us:
error