ಮತದಾನ ಕೇಂದ್ರ ವ್ಯಾಪ್ತಿಯಲ್ಲಿ ಯಾವುದೇ ಬಗೆಯ ಪ್ರಚಾರ ಶಿಕ್ಷಾರ್ಹ ಅಪರಾಧ

ಕೊಪ್ಪಳ ಸೆ.   : ಕೊಪ್ಪಳ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸಂಬಂಧಿಸಿದಂತೆ ಬಹಿರಂಗ ಪ್ರಚಾರ ಅಂತ್ಯಗೊಂಡಿದ್ದು, ಸೆ. ೨೬ ರಂದು ಮತದಾನ ನಡೆಯಲಿದೆ.  ಮತದಾನ ಕೇಂದ್ರದೊಳಗೆ ಅಥವಾ ಮತದಾನ ಕೇಂದ್ರದ ೧೦೦ ಮೀ. ವ್ಯಾಪ್ತಿಯೊಳಗಿನ ಯಾವುದೇ ಸ್ಥಳದಲ್ಲಿ ಮತ ಕೋರುವುದು ಮುಂತಾದ ಯಾವುದೇ ಬಗೆಯ ಚಟುವಟಿಕೆ ಕೈಗೊಂಡಲ್ಲಿ ಅಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿ ಆಗಿರುವ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಎಚ್ಚರಿಕೆ ನೀಡಿದ್ದಾರೆ.
  ಮತದಾನದ ದಿನದಂದು ಮತಕೇಂದ್ರದ ಒಳಗೆ ಅಥವಾ ಮತಕೇಂದ್ರದ ೧೦೦ ಮೀ. ವ್ಯಾಪ್ತಿಯೊಳಗಿನ ಯಾವುದೇ ಸಾರ್ವಜನಿಕ ಅಥವಾ ಖಾಸಗಿ ಸ್ಥಳದಲ್ಲಿ ಮತದಾರರಿಗೆ ಮತ ಕೋರುವುದು, ಮತ ನೀಡುವಂತೆ ಮನವೊಲಿಸಲು ಪ್ರಯತ್ನಿಸುವುದು, ಯಾವುದೇ ಬಗೆಯ ಚಿಹ್ನೆಯನ್ನು ಸಂಜ್ಞೆ ಮೂಲಕ ತೋರಿಸುವುದು, ಚಿಹ್ನೆ ಪ್ರದರ್ಶಿಸುವುದು, ಯಾವುದೇ ಅಭ್ಯರ್ಥಿಗೆ ಮತ ನೀಡುವಂತೆ ಅಥವಾ ಮತ ನೀಡದಂತೆ ಮನವೊಲಿಸುವುದು, ಅಥವಾ ಚುನಾವಣೆಗೆ ಮತ ಚಲಾಯಿಸದಂತೆ ಒತ್ತಡ ಹೇರುವುದು, ಧ್ವನಿವರ್ಧಕವನ್ನು ಬಳಸುವುದು ಆರ್.ಪಿ. ಕಾಯ್ದೆ ೧೯೫೧ ರ ಕಲಂ ೧೩೦ ಮತ್ತು ೧೩೧ ರೀತ್ಯ ಶಿಕ್ಷಾರ್ಹ ಅಪರಾಧವಾಗಿರುತ್ತದೆ.  ಒಂದು ವೇಳೆ ಈ ಕಾಯ್ದೆಯ ಉಲ್ಲಂಘನೆ ಕಂಡುಬಂದಲ್ಲಿ ಅಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿ ಆಗಿರುವ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಎಚ್ಚರಿಕೆ ನೀಡಿದ್ದಾರೆ.
Please follow and like us:
error