You are here
Home > Koppal News > ಕಾರ್ಕಳದ ಗೊಮಟೇಶ್ವರ ಬೆಟ್ಟದಲ್ಲಿ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ

ಕಾರ್ಕಳದ ಗೊಮಟೇಶ್ವರ ಬೆಟ್ಟದಲ್ಲಿ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ

ಕಾರ್ಕಳ:ಕಾರ್ಕಳದ ಗೊಮಟೇಶ್ವರ ಬೆಟ್ಟದಲ್ಲಿ ಗುರುವಾರ ನಡೆದ ಅಖಿಲ ಕರ್ನಾಟಕ ಬೆಳದಿಂಗಳಸಾಹಿತ್ಯ ಸಮ್ಮೇಳನದಲ್ಲಿ ಮುಂಬಯಿಯ ಸಾಹಿತಿ ಕೋಡು ಭೋಜ ಶೆಟ್ಟಿ, ಬೆಂಗಳೂರಿನ ಕೆ.ಪಿ.ನಂಜುಂಡಿ ವಿಶ್ವಕರ್ಮ,ಉಡುಪಿಯ ಕುಗೋ,ಮಂಗಳೂರಿನ ನವೀನ್ ಪಡೀಲ್,ಸುಳ್ಯದ ಪಟ್ಟಾಭಿರಾಮ ಸುಳ್ಯ, ಬಂಟ್ವಾಳದ ಎಸ್.ಜಯರಾಮ್,ಕುಂದಾಪುರದ ಡಾ.ಭಾರತಿ ಮರವಂತೆ,ಯಕ್ಷಗಾನ ಕಲಾರಂಗದ ಶಿವರಾಮ ತಲ್ಲೂರು, ಕುಂದಾಪುರ ಕೆದೂರಿನ ಸ್ಪೂರ್ತಿ ಧಾಮ ಕೇಶವ ಕೋಟೇಶ್ವರ,ಶಾಸ್ತ್ರೀಯ ಸಂಗೀತಾ ಸಭಾದ ಡಾ.ಪ್ರಕಾಶ್ ಶೆಣೈ ಮೊದಲಾದವರು ರಾಜ್ಯ ಮಟ್ಟದ ಬೆಳದಿಂಗಳ ಸಮ್ಮೇಳನ ಗೌರವ ಸ್ವೀಕರಿಸಿದರು.
ಕಾರ್ಕಳದ ಗೋಮಟೇಶ್ವರ ಬೆಟ್ಟದಲ್ಲಿ ಗುರುವಾರ ನಡೆದ ೩ ನೇ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನದಲ್ಲಿ ಮೂಡುಬಿದರೆಯ ಅಯನಾ.ವಿ ರಮಣ್,ಶ್ವೇತಾ, ರಂಜನ್,ಮಂಗಳೂರಿನ ವಿಜೇತ್ ಉಳ್ಳಾಲ್,ಅಭಿಷೇಕ್ ಎಂ.ಬಿ,ಕೃಷ್ಣ ಪ್ರಸಾದ್.ಅನನ್ಯ ರೈ ಮೊದಲದವರಿಗೆ  ಬಾಲಪ್ರತಿಭಾ ಗೌರವ ನೀಡಲಾಯಿತು.ಸಮ್ಮೇಳನಾಧ್ಯಕ್ಷ ಜಯಂತ ಕಾಯ್ಕಿಣಿ, ಸಂಘಟಕ ಶೇಖರ ಅಜೆಕಾರು, ಕಾರ್ಯದರ್ಶಿ ಮಂಜುನಾಥ ಮತ್ತಿತರರು ಉಪಸ್ಥಿತರಿದ್ದರು.
ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನವು ಪ್ರಸಿದ್ಧ ಸಾಹಿತಿ ಜಯಂತ ಕಾಯ್ಕಿಣಿ ಅವರ ಅಧ್ಯಕ್ಷತೆಯಲ್ಲಿ ಕಾರ್ಕಳದ ಗೋಮಟೇಶ್ವರ ಸನ್ನಿಧಿಯಲ್ಲಿ ಗುರುವಾರ ನಡೆದಿದ್ದು ಕಾಯ್ಕಿಣಿ ಅವರ ಭಾವ ಚಿತ್ರವನ್ನು ಅನಾವರಣಗೊಳಿಸಿ ಡಾ.ನಾ.ಮೊಗಸಾಲೆ ಅವರು ಉದ್ಘಾಟಿಸಿದರು. 
ಪಾಂಗಳ ವಿಲಾಸ್ ಕುಮಾರ್ ನಾಯಕ್,ಇಮ್ತಿಯಾಜ್ ಅಹ್ಮದ್,ಎಂ.ಕೆ ವಿಜಯ್ ಕುಮಾರ್,ಡಾ.ಸಂತೋಷ್ ಕುಮಾರ್ ಶೆಟ್ಟಿ,ಶೇಖರ ಅಜೆಕಾರು ಮೊದಲಾದವರು ಉಪಸ್ಥಿತರಿದ್ದರು.

Leave a Reply

Top