ಸಹಾಯ ಹಸ್ತ ಚಳುವಳಿ ಜನತೆಯ ಕಷ್ಟಗಳಿಗೆ ಸ್ಪೂರ್ತಿಯಾಗಿದೆ-

 ಬಸನಗೌಡ ಬಾದರ್ಲಿ

ಕೊಪ್ಪಳ: ಇಂದು ಬಿಜೆಪಿ ಸರಕಾರದ ನಿಷ್ಕ್ರೀಯತೆಯಿಂದಾಗಿ ಆಡಳಿತ ವರ್ಗವು ಜನತೆಯ ಸಮಸ್ಯೆಗಳಿಗೆ ಕಿವಿಗೊಡುತ್ತಿಲ್ಲ. ಅಂತವರ ಕಿವಿ ಹಿಂಡುವ ಮಹತ್ವದ ಚಳುವಳಿ ಇದಾಗಿದೆ ಎಂದು ಕೊಪ್ಪಳ ಲೋಕಸಭಾ ಯುವ ಕಾಂಗ್ರೆಸ ಅಧ್ಯಕ್ಷರಾದ ಬಸನಗೌಡ ಬಾದರ್ಲಿ ಹೇಳಿದ್ದಾರೆ.
    ನಗರದ ತಹಶಿಲ್ದಾರ ಕಛೇರಿಯ ಎದುರುಗಡೆ ಇಂದು ಯುವ ಕಾಂಗ್ರೇಸ  ವತಿಯಿಂದ ಹಮ್ಮಿಕೊಂಡಿದ್ದ ಸಹಾಯ ಹಸ್ತ ಚಳುವಳಿಯಲ್ಲಿ ಮಾತನಾಡಿದ ಅವರು ಈ ಚಳುವಳಿಯ ಮೂಲಕ ವಿಧವೆಯರ, ಅಂಗವಿಕಲರ ಮಾಸಾಶನ, ನಿವೇಶನ ಇನು ಅನೇಕ ಸಮಸ್ಯೆಗಳನ್ನು ಒಳಗೊಂಡಂತೆ ದೀನ ದಲಿತರ, ಬಡವರ ಸಮಸ್ಯೆಗಳನ್ನು ಅಧಿಕಾರಿವರ್ಗದ ಗಮನಕ್ಕೆ ತರುವುದು ಈ ಚಳುವಳಿಯ ಉದೆಸವಾಗಿದೆ. ಇಂದು ಹಮ್ಮಿಕೊಂಡಿದ್ದ ಚಳುವಳಿಯಲ್ಲಿ ಪಾಲ್ಗೊಂಡ ಬಡಮಹಿಳೆಯರ ಕೆಲ ಸಮಸ್ಯೆಗಳನ್ನು ಕುರಿತು ತಹಶಿಲ್ದಾರರೊಂದಿಗೆ ಬಸನಗೌಡ ಬಾದರ್ಲಿ ಯವರು ಚರ್ಚಿಸಿದರು.
    ಸಹಾಯ ಹಸ್ತ ಚಳುವಳುಗೆ ಚಾಲನೆ ನೀಡಿದ ಜಿಲ್ಲಾ ಕಾಂಗ್ರೇಸ ಅಧ್ಯಕ್ಷರಾದ ಕೆ. ಬಸವರಾಜ ಹಿಟ್ನಾಳರವರು ಮಾತನಾಡಿ ಜನಸಾಮಾನ್ಯರ ನಿತ್ಯದ ಬದುಕಿಗೆ ಮತದತು ಅವರ ಸಮಸ್ಯೆಗಳಿಗೆ ಸ್ಪಂದಿಸದ ಬಿಜೆಪಿ ಸರಕಾರದ  ಆಡಳಿತ ವ್ಯವಸ್ಥೆ ವಿರುದ್ದ ಮತ್ತು ಜನತೆಯ ಸಮಸ್ಯೆಗಳಿಗೆ ಸ್ಪಂದಿಸುವ ಉದ್ದೇಶದಿಂದ  ಯುವ ಕಾಂಗ್ರೆಸ ಸಮಿತಿಯು ಈ ಚಳುವಳಿಯನ್ನು ಪ್ರಾರಂಭಿಸಿದ್ದು ಅತ್ಯಂತ ಶ್ಲಾಗನೀಯ ಎಂದು ಹೇಳಿದರು.
    ಇಂದಿನ ಚಳುವಳಿಯಲ್ಲಿ ೬೫ ವಿಧವಾ ವೇತನ ಮತ್ತು ಅಂಗವಿಕಲರ ವೇತನ ಸಮಸ್ಯೆಗಳನ್ನು ಜನತೆ ಹೇಳಿಕೊಂಡಿದ್ದು  ವಿಷೇಶವಾಗಿ ಭೂಮಾಪನಾ ಇಲಾಖೆಯ ಕಾರ್ಯ ವೈಕರಿಯಬಗ್ಗೆ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಮರ್ದಾನ ಅಲಿ ಅಡ್ಡೆವಾಲೆ, ಎಸ್.ಬಿ.ನಾಗರಳ್ಳಿ, ಜುಲ್ಲುಖಾದ್ರಿ, ಸಿದ್ದಲಿಂಗಯ್ಯ ಹಿರೇಮಠ, ಟಿ.ಜನಾಧನ, ದೇವಣ್ಣ ಮೆಕ್ಕಾಳಿ, ಕಾಟನ ಪಾಷಾ, ಮಾನ್ವಿ ಪಾಷಾ, ಯಮನೂರಪ್ಪ ಸಿಂಗನಾಳ, ಇಂದಿರಾ ಭಾವಿಕಟ್ಟಿ, ನಾಗರಾಜ ಬಳ್ಳಾರಿ, ಶ್ರೀಮತಿ ಸುನಂದಾ ಗದ್ದಿಕೇರಿ, ಸರೋಜಾ ಬಾಕಳೆ, ವೈಜನಾಥ ದಿವಟರ್, ಆರ್.ಎಂ.ರಫಿ, ಗಾಳೆಪ್ಪ ಪೂಜಾರ, ವಿಸ್ವನಾಥ ರಾಜು, ಸುಮಂಗಲಾ ಕರ್ಲೆ, ಮಲ್ಲಿಕಾರ್ಜುನ ಪೂಜಾರ, ಚೆತನಕುಮಾರ ಸೇರಿದಂತೆ ಪಕ್ಷದ ನೂರಾರು ಕಾರ್ಯಕರ್ತರು ಈ ಸಂಧರ್ಬದಲ್ಲಿ ಹಾಜರಿದ್ದರು ಎಂದು ಯುವ ಕಾಂಗ್ರೇಸ ಉಪಾಧ್ಯಕ್ಷ ಸುರೇಶ ದಾಸರಡ್ಡಿ ಅಳವಂಡಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ. 

Please follow and like us:
error