fbpx

ಪಂ.ಪುಟ್ಟರಾಜ ಗವಾಯಿಗಳ ಜನ್ಮ ಶತಮಾನೋತ್ಸವ ಕಾರ್ಯಕ್ರಮ

ಕೊಪ್ಪಳ:ಸರ್ಕಾರಿ ಅಂಗವಿಕಲ ನೌಕರರ ಸಂಘ ಮತ್ತು ಸಿ.ಪಿ.ಎಸ್.ಶಾಲೆಯ ಸಂಯುಕ್ರಾಶ್ರಯದಲ್ಲಿ ಗಾನಯೋಗಿ ಪಂ.ಪುಟ್ಟರಾಜ ಗವಾಯಿಗಳ ಜನ್ಮ ಶತಮಾನೋತ್ಸವ ಕಾರ್ಯಕ್ರಮವನ್ನು ಮಾ.೨೪ ರ ಮದ್ಯಾಹ್ನ ೧೨ ಘಂಟೆಗೆ ಸಿ.ಪಿ.ಎಸ್.ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ.
             ಕಾರ್ಯಕ್ರಮವನ್ನು ಹಿರಿಯ ಸಾಹಿತಿಗಳಾದ ಡಾ.ವಸಂತ ಕುಷ್ಟಗಿ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಸಿ.ಪಿ.ಎಸ್.ಶಾಲೆಯ ಮುಖ್ಯ ಶಿಕ್ಷಕರಾದ ಭರಮಪ್ಪ ಕಟ್ಟಿಮನಿ ವಹಿಸಿಕೊಳ್ಳುವರು. ಮುಖ್ಯ ಅಥಿತಿಗಳಾಗಿ ಕೊಪ್ಪಳ ಜಿಲ್ಲಾ ವೈಧ್ಯಕೀಯ ಕಾಲೇಜಿನ ಮುಖ್ಯ ಆಡಳಿತಾಧಿಕಾರಿ ಡಾ.ಹನುಮಾಕ್ಷಿ ಗೋಗಿ,ಸರ್ಕಾರಿ ಅಂಗವಿಕಲ ನೌಕರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಬೀರಪ್ಪ ಅಂಡಗಿ ಚಿಲವಾಡಗಿ,ಜಿಲ್ಲಾಧ್ಯಕ್ಷರಾದ ಚನ್ನಬಸಪ್ಪ ಬೆಲ್ಲದ,ಕೊಪ್ಪಳ ತಾಲೂಕ ಅಧ್ಯಕ್ಷರಾದ ಅಂದಪ್ಪ ಬೋಳರೆಡ್ಡಿ ಭಾಗವಹಿಸಲಿದ್ದಾರೆ. 
Please follow and like us:
error

Leave a Reply

error: Content is protected !!