ಕರ್ನಾಟಕ ರಾಜ್ಯ ಪಂಚಮಸಾಲಿ ಸಂಘದ ಮುಕ್ತ ಸಂವಾದ ಸಭೆ

ಕೊಪ್ಪಳ: ಕರ್ನಾಟಕ ರಾಜ್ಯ ವೀರಶೈವ ಪಂಚಮಸಾಲಿ ಸಂಘದ ಸಂವಾದ ಸಭೆಯನ್ನು ದಿನಾಂಕ ೨೨-೦೪-೨೦೧೫ ರ ಬುಧವಾರ ಬೆಳಗ್ಗೆ ೧೧:೦೦ ಘಂಟೆಗೆ ಆರ್.ಎಮ್ ಪಾಟೀಲ್ ಭವನ ಐ.ಬಿ. ಎದುರುಗಡೆ ಕಿನ್ನಾಳ ರಸ್ತೆ ಕೊಪ್ಪಳದಲ್ಲಿ ಇತ್ತೀಚಿಗೆ ಬೆಂಗಳೂರಿನ ಪಾಲಾಕ್ಷಬಾಣದ ಹಾಗೂ ಸಿ.ಎ ಪೋಲೀಸ್ ಪಾಟೀಲ್ ಹಾಗೂ ಇತರರು ರಾಜ್ಯ ಪಂಚಮಸಾಲಿ ಸಂಘದ ಬಗ್ಗೆ ಇಲ್ಲ ಸಲ್ಲದ ಸುಳ್ಳು ಆರೋಪ ಮಾಡಿ ಸಮಾಜದ ಜನರಿಗೆ ತಪ್ಪು ಮಾಹಿತಿ ನೀಡಿ ಗೊಂದಲೆಬ್ಬಿಸಿದ್ದಕ್ಕಾಗಿ ಇದಕ್ಕೆ ಸೂಕ್ತ ಉತ್ತರ ಕೊಡಲು ಈ ಸಭೆಯನ್ನು ಕರೆಯಲಾಗಿದೆ .
          ಇದು ಬೆಂಗಳೂರು ಜಿಲ್ಲಾ ನೊಂದಾವಣೆ ಅಧಿಕಾರಿಗಳ ಕಛೇರಿಯಲ್ಲಿ ವಿಚಾರಣೆ ನಡೆದಿದ್ದು ಅಲ್ಲಿ ಸಂಘದ ಪರವಾಗಿ ತೀರ್ಪು ಬಂದಿದ್ದು ಮತ್ತೆ ಹೈಕೋರ್ಟಿನಲ್ಲಿ ವಿಚಾರಣೆ ನಡೆದು ಮರು ವಿಚಾರಣೆಗಾಗಿ ಸಬ್ ರಿಜೀಸ್ಟರ ಕಛೇರಿಯ ಹೆಸರಘಟ್ಟಕ್ಕೆ ಬಂದಿದೆ. ಈಗ ವಿಚಾರಣೆ ನಡೆಯುತ್ತಿದ್ದು ಇಲ್ಲ ಸಲ್ಲದ ಆರೋಪ ಮಾಡುತ್ತಿರುವುದು ಸರಿಯಲ್ಲ ಆರೋಪಮಾಡಿದವರು ಈ ಸಭೆಗೆ ಹಾಜರಾಗದೆ ಇದ್ದಲ್ಲಿ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಭಾವಿಬೆಟ್ಟಪ್ಪ ಹಾಗೂ ಬಸವರಾಜ ದಿಂಡೂರು ಇವರ ಅಧ್ಯಕ್ಷತೆ ಅವಧಿಯಲ್ಲಿ ಆರೋಪ ಮಾಡಿದವರು ಸಹಪಾಠಿಗಳಿದ್ದರು ಅವರು ಉತ್ತರ ಕೊಡಲಿಕ್ಕೆ ಬರಬೇಕೆಂದು ಹಾಗೂ ಯಾರಾದರು ಪ್ರಶ್ನೇಕೇಳಲು ಇದ್ದರೆ ರಾಜ್ಯಾದ್ಯಂತ ಬಂಧುಗಳು ಬರಬಹುದು.  ರಾಜ್ಯ ಸಂಘದ ಅಧ್ಯಕ್ಷರಾದ ಬಸವರಾಜ ದಿಂಡೂರು ಹಾಗೂ ಬಾವಿಬೆಟ್ಟಪ್ಪ ಕೊಪ್ಪಳ ಜಿಲ್ಲಾಧ್ಯಕ್ಷರಾದ ಕಳಕನಗೌಡ ಪಾಟೀಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply