ಡಾ. ಸುಧಾಮೂರ್ತಿ, ಶಾಂತಾದೇವಿ ಕಣವಿಗೆ ಅತ್ತಿಮಬ್ಬೆ ಪ್ರಶಸ್ತಿ

ಬೆಂಗಳೂರು: ರಾಜ್ಯ ಸರ್ಕಾರ ೨೦೦೯ ಮತ್ತು ೧೦ನೇ ಸಾಲಿನ ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ ಮತ್ತು ಡಾ. ಗುಬ್ಬಿ ವೀರಣ್ಣ ಪ್ರಶಸ್ತಿಗಳನ್ನು ಪ್ರಕಟಿಸಿದೆ. ೨೦೧೦ನೇ ಸಾಲಿನ ಅತ್ತಿಮಬ್ಬೆ ಪ್ರಶಸ್ತಿಗೆ ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಡಾ. ಸುಧಾಮೂರ್ತಿರನ್ನು ಆಯ್ಕೆ ಮಾಡಲಾಗಿದೆ.
ಅದೇ ರೀತಿ ೨೦೦೯ನೇ ಸಾಲಿನ ಪ್ರಶಸ್ತಿಗೆ ಕನ್ನಡದ ಹಿರಿಯ ಲೇಖಕಿ ಶಾಂತಾದೇವಿ ಕಣವಿ ಅವರನ್ನು ಆಯ್ಕೆ ಮಾಡಿದೆ. ಧಾರವಾಡದ ಡಾ. ವೀಣಾ ಶಾಂತೇಶ್ವರ ಅಧ್ಯಕ್ಷತೆಯ ಸಮಿತಿ ಇವರ ಹೆಸರನ್ನು ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ೨೦೦೯ನೇ ಸಾಲಿನ ಡಾ. ಗುಬ್ಬಿ ವೀರಣ್ಣ ಪ್ರಶಸ್ತಿಗೆ ಪಿ.ವಜ್ರಪ್ಪ ಅವರನ್ನು ಮತ್ತು ೨೦೧೦ನೇ ಸಾಲಿಗೆ ಪ್ರಮೀಳಮ್ಮ ಗುಡೂರರನ್ನು ಆಯ್ಕೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಎಚ್.ಟಿ. ಅರಸು ನೇತೃತ್ವದ ಸಮಿತಿ ಈ ಶಿಫಾರಸು ಮಾಡಿತ್ತು

Leave a Reply