You are here
Home > Koppal News > ಪಂಚಾಯತ್ ರಾಜ್ಯ ವ್ಯವಸ್ಥೆಯಿಂದ ಜನಸಾಮಾನ್ಯರಿಗೆ ಅಧಿಕಾರ -ಹೆಚ್. ಅಬ್ದುಲ್ ವಹಾಬ್

ಪಂಚಾಯತ್ ರಾಜ್ಯ ವ್ಯವಸ್ಥೆಯಿಂದ ಜನಸಾಮಾನ್ಯರಿಗೆ ಅಧಿಕಾರ -ಹೆಚ್. ಅಬ್ದುಲ್ ವಹಾಬ್

 ಹೊಸಪೇಟೆ: ರಾಜೀವ್ ಗಾಂಧಿ ಕನಸಿನ ಪಂಚಾಯತ್ ರಾಜ್ಯ ವ್ಯವಸ್ಥೆಯಿಂದ ಜನಸಾಮಾನ್ಯರಿಗೆ ಅಧಿಕಾರ ಸಿಗುವ ಅವಕಾಶ ಲಭ್ಯವಾಗಿದೆ ಎಂದು ಕೆಪಿಸಿಸಿ ಸದಸ್ಯ ಹೆಚ್. ಅಬ್ದುಲ್ ವಹಾಬ್ ಹೇಳಿದರು.
ಇಂಗಳಿಗಿ ಗ್ರಾಮದಲ್ಲಿ ಗುರುವಾರ ಇಂಗಳಿಗಿ ಗ್ರಾಮದ ಕೆರೆಗೆ ನೀರು ತುಂಬಿಸುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯಿಂದ ಈ ಕೆಲಸ ನಡೆಯುತ್ತಿರುವುದು ಸಂತಸದ ವಿಷಯವೆಂದರು.
ಇಂಗಳಿಗಿ ಗ್ರಾಮದ ಕೆರೆಗೆ ಗ್ರಾಮದ ಹತ್ತಿರವಿರುವ ಕಾಲುವೆಯಿಂದ ಪಂಪ್‌ಹೌಸ್ ಮುಖಾಂತರ ಕೆರೆಗೆ ನೀರು ತುಂಬಿಸುವ ಯೋಜನೆ ಮಾಡಲು ಹಾಗೂ ಸೀತಾರಾಮ ತಾಂಡದ ಶೇಕಡಾ ೯೮ ರಷ್ಟು ಪರಿಶಿಷ್ಟ ಜಾತಿ ಜನಾಂಗಕ್ಕೆ ಸೇರಿರುವ ಈ ಕುಗ್ರಾಮದ ಜನತೆಯ ಬಹುದಿನಗಳ ಕನಸಾದ ಬೃಹತ್ ಸಮುದಾಯ ಭವನ ಮತ್ತು ಮಹಿಳಾ ಶೌಚಾಲಯ ಈ ಸಮಸ್ಯೆಗಳ ಪರಿಹಾರಕ್ಕೆ ಮಾನ್ಯ ರಾಷ್ಟ್ರೀಯ ಅಧ್ಯಕ್ಷರಿಗೆ ಮನವಿ ಕಳುಹಿಸಿಕೊಡುವ ಮೂಲಕ ಸಮಸ್ಯೆಗಳ ಪರಿಹಾರಕ್ಕಾಗಿ ಶ್ರಮಿಸುವುದಾಗಿ ಭರವಸೆ ನೀಡಿದರು.
ಗುರುವಾರ  ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯಿಂದ ಫಲಾನುಭವಿಗಳಿಗೆ ಚೆಕ್‌ನ್ನು ವಿತರಿಸಲಾಯಿತು. ಬಳ್ಳಾರಿ ಜಿಲ್ಲಾ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಸದಸ್ಯರಾದ ಮುನ್ನಿಕಾಸಿಂ ಅಲಿ ಮತ್ತು ಎ.ಕೆ.ಉದೇದಪ್ಪ ಮತ್ತು ಕಾಂಗ್ರೆಸ್ ಮುಖಂಡರು ಗ್ರಾಮಸ್ಥರು ಹಾಜರಿದ್ದರು. 

Leave a Reply

Top