ಮಕ್ಕಳಿಗೆ ಇಡ್ಲಿ-ಸಾಂಬರ್ ನೀಡುವ ವಿನೂತನ ಕಾರ್ಯಕ್ರಮಕ್ಕೆ ಚಾಲನೆ

ಕೊಪ್ಪಳ: ನಗರದ ಹೂವಿನಾಳ ರಸ್ತೆಯಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಉಪ್ಪಿಟ್ಟಿನ ಬದಲಾಗಿ ಇಡ್ಲಿ -ಸಾಂಬರ್ ನೀಡುವ ವಿನೂತ ಕಾರ್ಯಕ್ರಮವನ್ನು ಸರ್ಕಾರಿ ಅಂಗವಿಕಲ ನೌಕರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಬೀರಪ್ಪ ಅಂಡಗಿ ಚಿಲವಾಡಗಿ ಹಾಗೂ ರಾಜ್ಯ ಸಂಚಾಲಕರಾದ ಭರಮಪ್ಪ ಕಟ್ಟಿಮನಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಬೀರಪ್ಪ ಅಂಡಗಿ ಚಿಲವಾಡಗಿ ಮಾತನಾಡಿ,ಸರಕಾರವು ಸರಕಾರಿ ಎಲ್ಲಾ ಶಾಲೆಯ ಮಕ್ಕಳಿಗೆ ಮದ್ಯಾಹ್ನದ ಬಿಸಿಯೂಟ ಯೋಜನೆಯನ್ನು ಜಾರಿ ತಂದಿದ್ದು,ಇದರನ್ವ ಪ್ರತಿ ಶನಿವಾರ ಎಲ್ಲಾ ಮಕ್ಕಳಿಗೆ ಉಪ್ಪಿಟ್ಟು ನೀಡಲಾಗುತ್ತಿದೆ.ಆದರೆ ಹೂವಿನಾಳ ರಸ್ತೆಯ ಶಾಲೆಯಲ್ಲಿ ಉಪ್ಪಿಟ್ಟಿನ ಬದಲಾಗಿ ಇಡ್ಲಿ-ಸಾಂಬರ್ ನೀಡುತ್ತಿರುವುದು ಉತ್ತಮ ಕಾರ್ಯವಾಗಿದೆ.ಅಲ್ಲದೇ  ಮಕ್ಕಳನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಶಾಲೆಯ ಕಡೆಯಲ್ಲಿ ಸೆಳೆಯಬಹುದಾಗಿದೆ ಎಂದು ಹೇಳಿದರು.
ಈ ಸಮಯದಲ್ಲಿ ಶಾಲೆಯ ಮುಖ್ಯೋಪಾದ್ಯಾಯರಾದ ಬಾಲನಾಗಮ್ಮ,ಶಿಕ್ಷಕಿಯರಾದ ಪೂರ್ಣಿಮಾ ಪೂಜಾರ,ಸುಜಾತ ಹೊಸಳ್ಳಿ,ಉಮಾ ಅಂಗಡಿ,ಮೋಹಿನ್‌ಪಾಷಾಭೀ,ಅಡುಗೆಯ ಸಿಬ್ಬಂದಿಗಳಾದ ರಶೀದಾಬಾನು ಹಾಗೂ ಸುಶೀಲಮ್ಮ ಮುಂತಾದವರು ಹಾಜರಿದ್ದರು.
Please follow and like us:
error