ಸ್ವಯಂ ಉದ್ಯೋಗಿ ಇಟ್ಟಂಗಿ ತಯಾರಿಕರಿಗೆ ಭದ್ರತಾವಲಯ ಘೋಷಿಸಲು ಒತ್ತಾಯಿಸಿ ರ್‍ಯಾಲಿ.

ಪ್ರಗತಿಪರ ಸ್ವಯಂ ಉದ್ಯೋಗಿ ಇಟ್ಟಂಗಿ ತಯಾರಕರ ಸಂಘದ ಸುಮಾರು ೨೦೦ ಜನ ಕಾರ್ಯಕರ್ತರು ಶ್ರೀ ಕೃಷ್ಣದೇವರಾಯ ವೃತ್ತದಿಂದ ತಹಸೀಲ್ ಕಛೇರಿಯವರಿಗೆ ರ್‍ಯಾಲಿ ನಡೆಸಿ, ವೆಂಕಟಗಿರಿ ಸರ್ವೆ ನಂ.೭೭ ರಲ್ಲಿರುವ ೨೮೮ ಎಕರೆ ಸರಕಾರಿ ಭೂಮಿಯನ್ನು ಇಟ್ಟಂಗಿ ಭಟ್ಟಿಗಳಿಗೆ ಭದ್ರತಾವಲಯವೆಂದು ಘೋಷಿಸಿ ಸರಕಾರಿ ಭೂಮಿಯನ್ನು  ಭಟ್ಟಿಗಳಿಗೆ ಮಂಜೂರು ಮಾಡಬೇಕೆಂದು ಒತ್ತಾಯಿಸಿ ತಹಸೀಲ್ದಾರರ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಮನವಿ ಕಳುಹಿಸಲಾಯಿತು. ಎಐಸಿಸಿಟಿಯು ಅಂಗ ಸಂಘಟನೆಯಾದ ಪ್ರಗತಿಪರ ಸ್ವಯಂ ಉದ್ಯೋಗಿ ಇಟ್ಟಂಗಿ ತಯಾರಕರ ಸಂಘದ ರ್‍ಯಾಲಿಯ ನೇತೃತ್ವ ಭಾರಧ್ವಾಜ್ ರಾಜ್ಯ ಕಾರ್ಯದರ್ಶಿ ವಹಿಸಿದ್ದರು. ಎಂ.ವಿರುಪಾಕ್ಷಪ್ಪ ಜಿಲ್ಲಾಧ್ಯಕ್ಷ ಎಐಸಿಸಿಟಿಯು ಲಿಂಗಪ್ಪ ಕಂಬಳಿ, ದ್ಯಾವಪ್ಪ, ಮಾಬುಸಾಬ್, ಸಣ್ಣ ಹನುಮಂತ ಎಐಸಿಸಿಟಿಯು. ಪಾಲ್ಗೊಂಡು ತಹಸೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.

Related posts

Leave a Comment