ಸೋಮಪ್ಪ ಫಕೀರಪ್ಪ ಪೂಜಾರ ನಿಧನ.

ಗದಗ-  ಹಾತಲಗೇರಿ ಗ್ರಾಮದ ಸೋಮಪ್ಪ ಫಕೀರಪ್ಪ ಪೂಜಾರ (೭೦) ಇವರು ಬುಧವಾರ ದಿ. ೯-೯-೨೦೧೨೫ ರಂದು ನಿಧನರಾದರು.  ಮೃತರು ೬ ಜನ ಪುತ್ರರು, ೩ ಜನ ಪುತ್ರಿಯರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ವಾಲ್ಮೀಕಿ ಸಮಾಜದ ಹಿರಿಯರಾದ ಇವರು ಸುಮಾರು ವರ್ಷಗಳಿಂದ ಶೈಕ್ಷಣಿಕ, ಸಾಮಾಜಿಕ ಸೇವೆಯಲ್ಲಿ ತೊಡಗಿದ್ದರು. ಗ್ರಾಮದ ಮಕ್ಕಳ ಶಿಕ್ಷಣದ ಅಭಿವೃದ್ಧಿ ದೃಷ್ಟಿಯಿಂದ ತಮ್ಮ ಸ್ವಂತ ಹಣದಿಂದ ಶಾಲಾ ಕಟ್ಟಡಗಳನ್ನು ಕಟ್ಟಿಸಿ ಶಿಕ್ಷಣಕ್ಕೆ ಅನುಕೂಲ ಕಲ್ಪಿಸಿದ್ದಾರೆ. ಬಡವರ, ದೀನದಲಿತರ ಆಶಾಕಿರಣ.  ದಾನ-ಧರ್ಮಗಳಲ್ಲಿ ಹೆಚ್ಚಿನ ರೀತಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.  ಇವರ ಅಗಲಿಕೆಯು ವಾಲ್ಮೀಕಿ ಸಮಾಜಕ್ಕೆ ಹಾಗೂ ಹಾತಲಗೇರಿ ಗ್ರಾಮಕ್ಕೆ ತುಂಬಾ ನೋವನ್ನುಂಟು ಮಾಡಿದೆ. ಮೃತರ ಅಂತ್ಯಕ್ರಿಯೆಯು ಗುರುವಾರ ದಿ. ೧೦-೯-೨೦೧೫ ರಂದು ಬೆಳಿಗ್ಗೆ ೧೦ ಗಂಟೆಗೆ ಹಾತಲಗೇರಿ ಗ್ರಾಮದಲ್ಲಿ ಜರುಗುವುದು.

Please follow and like us:
error