ಕುಣಿಕೇರಿ ಶಾಲೆ ಖೋ ಖೋ ದಲ್ಲಿ ಪ್ರಥಮ.

ಕೊಪ್ಪಳ-೦೮ ರಂದು ನಡೆದ ಜಿಲ್ಲಾ ಕ್ರಿಂಡಾಂಗಣದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿಭಾಗದ ಜಿಲ್ಲಾ ಮಟ್ಟದ ಕ್ರೀಡಾ ಕೂಟ ಆಯೋಜಿಸಲಾಗಿತ್ತು.
    ಈ ಸ್ಪರ್ದೇಯಲ್ಲಿ ತಾಲುಕಿನ ಕುಣಿಕೇರಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿಯರು ಖೋ ಖೋ ಸ್ಪರ್ದೇಯಲ್ಲಿ ಪ್ರಥಮ ಸ್ಥಾನ ಗಳಿಸಿ ವಿಭಾಗ ಮಟ್ಟಕ್ಕೆ ಆಯ್ಕೆ (ಕಲಬುರಗಿ) ಯಾಗಿದ್ದಾರೆ.
ವಿದ್ಯಾರ್ಥಿನಿಯರ ಈ ಸಾಧನೆಗೆ ಶಾಲಾ ಮೂಖ್ಯೋಪಾದ್ಯಾಯರು ಒಳಗೊಂಡು, ಊರಿನ ಯುವ ಮಿತ್ರರು ಹಾಗೂ ತಂಡದ ಮ್ಯಾನೇಜರ್ ಸಾವಕ್ಕ ಹುಬ್ಬಳ್ಳಿ ಹಾಗೂ ತಂಡದ ತರಬೇತಿದಾರರಾದ ಯುವಕ ಮಹೇಶ ವಾಲಿಕಾರ, ಹಾಗೂ ಈಶಪ್ಪ ಸೊಂಪೂರ ಮತ್ತು ಶಾಲಾ ಭೂಧಾನಿಗಳಾದ ಶ್ರೀಮತಿ ಹುಚ್ಚಮ್ಮ ಚೌದ್ರಿ ಅಭಿನಂದನೆ ಸಲ್ಲಿಸಿದ್ದಾರೆ.
Please follow and like us:
error