ಸುಂದರ ಭಾರತ ನಿರ್ಮಾಣ ಗಾಂಧೀಜಿಯವರ ಕನಸು ನನಸು ಮಾಡೋಣ- ಸುರೇಶ ದೇಸಾಯಿ

ನಗರದ ಸರಸ್ವತಿ ವಿದ್ಯಾಮಂದಿರ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ೬೮ನೇ ಸ್ವಾತಂತ್ರ್ಯ ದಿನಾಚರಣೆಯ ಕಾರ‍್ಯಕ್ರಮಕ್ಕೆ ಆಗಮಿಸಿದ್ದ ಮಾಜಿ ನಗರಸಭಾ ಅಧ್ಯಕ್ಷರಾದ ಸುರೇಶ ದೇಸಾಯಿರವರು  ಧ್ವಜಾರೋಹಣ ಕಾರ‍್ಯಕ್ರಮ ನೆರವೇರಿಸಿ ಮಾತನಾಡಿದ ಅವರು – ಮಹಾತ್ಮಾ ಗಾಂದೀಜಿಯವರ ೧೫೦ನೇ ಜನ್ಮದಿನಾಚರಣೆಯ ಅಂಗವಾಗಿ  ಸ್ವಚ್ಛ ಭಾರತ ನಿರ್ಮಾಣದ ಕನಸು ನಾವು ನೀವೆಲ್ಲರೂ ಸೇರಿ  ಸುಂದರ ಭಾರತ ನಿರ್ಮಾಣ ಮಾಡಲು ಪಣ ತೊಡಬೇಕು. ಇಂದಿನ ಮಕ್ಕಳು ಮುಂದಿನ ನಾಗರೀಕರು ಹೀಗಾಗಿ ಮಕ್ಕಳು ನೀವೆಲ್ಲಾ ಉತ್ತಮ ಗುಣಮಟ್ಟದ ಅಭ್ಯಾಸ ಮಾಡಿ ನಮ್ಮ ದೇಶದ ಸತ್ಪ್ರಜೆಗಳಾಗಿ ಬಾಳಿ  ನಮ್ಮ ದೇಶದ ಅಭಿವೃದ್ದಿಗಾಗಿ ಶ್ರಮಿಸೋಣ ಎಂದು ಕರೆನೀಡಿದರು.

ಕಾರ‍್ಯಕ್ರಮದ ಮೊದಲಿಗೆ ಮಹಾತ್ಮಾ ಗಾಂಧೀಜಿಯವರ ಭಾವಚಿತ್ರಕ್ಕೆ ಕಾಂಗ್ರೆಸ್ ಮುಖಂಡರಾದ ಹುಸೇನ್ ಪೀರಾರವರು ಪೂಜೆ ನೆರವೇರಿಸಿದರು. ಕಾರ‍್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಪ್ರದಾನ ಕಾರ್ಯದರ್ಶಿ ಆರ್.ಎಚ್.ಅತ್ತನೂರ ವಹಿಸಿದ್ದರು. ಸುರೇಶ ದೇಸಾಯಿಯವರಿಗೆ ಸಂಸ್ಥೆಯವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು. ಈ ಕಾರ‍್ಯಕ್ರಮದಲ್ಲಿ ಮುಖ್ಯೋಪಾಧ್ಯಯಾರಾದ ರೇಣುಕಾ ಅತ್ತನೂರ, ಪಾಲಕರಾದ ಶಂಕರಪ್ಪ ಕುರಿ,ಸರೀತಾ ಪಾಟೀಲ್ ಸೇರಿದಂತೆ ಎಲ್ಲ ಶಿಕ್ಷಕರು , ಮಕ್ಕಳು ಹಾಗೂ ಇತರರು ಉಪಸ್ಥಿತರಿದ್ದರು. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ‍್ಯಕ್ರಮಗಳು ನಡೆದವು. 
Please follow and like us:
error