ಜಿಲ್ಲಾ ಮಟ್ಟದ ಗ್ರೂಪ್ ಡಿ ನೌಕರರ ಸಂಘದ ಸಮಾವೇಶ : ನಿವೃತ್ತಿ ಹೊಂದಿದವರಿಗೆ ಸನ್ಮಾನ

ಕೊಪ್ಪಳ ತಾಲೂಕಾ ಪಂಚಾಯತ್ ಸಭಾಂಗಣದಲ್ಲಿ ಇತ್ತೀಚಿಗೆ ವಯೋ ನಿವೃತ್ತಿ ಹೊಂದಿದ ಗ್ರೂಪ್ ಡಿ ನೌಕರರ ಸಂಘದ ಸದಸ್ಯರಿಗೆ ಸನ್ಮಾನ ಸಮಾರಂಭ ಹಾಗೂ ಜಿಲ್ಲಾ ಮಟ್ಟದ ಸಮಾವೇಶವನ್ನು ಏರ್ಪಡಿಸಲಾಯಿತು.

ಅಧ್ಯಕ್ಷತೆಯನ್ನು ಹನುಮಂತಪ್ಪ ವೆಂಕಟಾಪೂರ ವಹಿಸಿದ್ದರು. ಉದ್ಘಾಟನೆಯನ್ನು ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನಾಗರಾಜ ಆರ್. ಜುಮ್ಮಣ್ಣನವರ ನೆರವೇರಿಸಿದರು. ಸಮಾರಂಭದಲ್ಲಿ ನೌಕರರಾದ ಎಸ್.ಕೆ.ರಾಮದುರ್ಗಾ, ಎಮ್.ಎಸ್.ಕಳ್ಳಿಮನಿ, ಬಿ.ಮಾರೆಣ್ಣ ಮೊದಲಾದವರು ಹಾಜರಿದ್ದರು.
ಕಾರ್ಯಕ್ರಮದಲ್ಲಿ ತಾಯಮ್ಮ ಪ್ರಾರ್ಥನೆ ಗೀತೆ ಹಾಡಿದರು. ಮಂಗಳೆಪ್ಪ ನಿವೃತ್ತಿ ಬಿ.ಸಿ.ಎಂ.ಇಲಾಖೆ ಇವರು ನಿರೂಪಿಸಿದರು. ಆರೋಗ್ಯ ಇಲಾಖೆಯ ಗುರುಬಸನಗೌಡ ವಂದನಾರ್ಪಣೆ ಮಾಡಿದರು. ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲಾ ಗ್ರೂಪ್ ಡಿ ನೌಕರರ ಸಂಘದ ಪದಾಧಿಕಾರಿಗಳು  ಹಾಗೂ ಸರ್ವ ಸದಸ್ಯರು ಹಾಜರಿದ್ದರು.

Leave a Reply