ಬೀರಪ್ಪ ಅಂಡಗಿ ಚಿಲವಾಡಗಿಗೆ ಅರಸೀಕೆರೆಯಲ್ಲಿ ಸನ್ಮಾನ

ಕೊಪ್ಪಳ: ನಗರದ ಸಿ.ಪಿ.ಎಸ್.ಶಾಲೆಯ ಶಿಕ್ಷಕರು ಹಾಗೂ ಸರ್ಕಾರಿ ಅಂಗವಿಕಲ ನೌಕರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿಗಳಾದ ಬೀರಪ್ಪ ಅಂಡಗಿ ಚಿಲವಾಡಗಿಯವರನ್ನು ಭಾನುವಾರ ಅರಸೀಕೆರೆಯಲ್ಲಿ ಜರುಗಿದ ಹಾಸನ ಜಿಲ್ಲಾ ಸರ್ಕಾರಿ ಅಂಗವಿಕಲ ನೌಕರರ ಸಂಘದ ದ್ವಿತೀಯ ಸಮ್ಮೇಳನದಲ್ಲಿ ರಾಜ್ಯ ತುಂಬ ಸಂಚರಿಸಿ ಸಂಘವನ್ನು ಬಲಪಡಿಸಿದ್ದಕ್ಕಾಗಿ ಉತ್ತಮ ಸಂಘಟನಾ ಕಾರ್ಯನೆಂದು ಜಿಲ್ಲಾ ಘಟಕದ ವತಿಯಿಂದ ಸನ್ಮಾನಿಸಲಾಯಿತು.
  ಈ ಸಂದರ್ಭದಲ್ಲಿ ಅರಸೀಕೆರೆಯ ವಿಧಾನಸಭೆಯ ಶಾಸಕರಾದ ಕೆ.ಎಂ.ಶಿವಲಿಂಗೇಗೌಡರು,ಸರ್ಕಾರಿ ಅಂಗವಿಕಲ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಎಸ್.ರೇಣುಕಾರಾಧ್ಯ,ಪ್ರಧಾನ ಕಾರ್ಯದರ್ಶಿ ಟಿ.ಟಿ.ಗಿರಿಯಪ್ಪ,ಹಾಸನದ ಜಿಲ್ಲಾಧ್ಯಕ್ಷರಾದ ಎಸ್.ಜೆ.ರಾಮಕೃಷ್ಣ,ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿಗಳಾದ ಮಲ್ಲೇಶ,ಅರಸೀಕೆರೆ ತಾ.ಪಂ.ಕಾರ್ಯನಿರ್ವಾಹಕರಾದ ಎಚ್.ಎಸ್.ಚಂದ್ರಶೇಖರ,ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಸ್.ಪಿ.ನಟರಾಜು,ಆರಕ್ಷಕ ಉಪ ನಿರಿಕ್ಷಕರಾದ ಗಂಗಾಧರಪ್ಪ,ಅರಸೀಕೆರೆ ಸರ್ಕಾರಿ ನೌಕರರ ಸಂಘದ ತಾಲೂಕ ಅಧ್ಯಕ್ಷರಾದ ಸೋಮಶೇಖರ,ಕೊಪ್ಪಳ ತಾಲೂಕ ಅಧ್ಯಕ್ಷರಾದ ಅಂದಪ್ಪ ಬೋಳರೆಡ್ಡಿ ಮುಂತಾದವರು ಹಾಜರಿದ್ದರು.

Leave a Reply