ಕ್ಯಾಬಿನೇಟ್ ಇಲ್ಲದ ಮೋದಿ ಸರ್ಕಾರ- ನಂಜನಯ್ಯನಮಠ

 ಕೊಪ್ಪಳ,ಫೆ:೦೯ ನಗರದ ಜಿಲ್ಲಾ ಕಾಂಗ್ರೇಸ್ ಕಾರ್ಯಲಯದಲ್ಲಿ ಬೆಳೆಗ್ಗೆ ೧೧.೩೦ ಕ್ಕೆ ಕಾಂಗ್ರೇಸ್ ಪಕ್ಷದ ಚುನಾಯಿತ ಪ್ರತಿನಿಧಿಗಳ ಸಭೆಯಲ್ಲಿ ಭಾಗವಹಿಸಿ ಪಕ್ಷದ ಸದಸ್ಯತ್ವ ಅಭಿಯಾನದ ಕಾರ್ಯಕ್ರಮದ ಬಗ್ಗೆ ವಿವರಿಸುತ್ತಾ ಮಾತನಾಡಿದ ಹೌಸಿಂಗ್ ಬೋರ್ಡ ನಿಗಮದ ಅಧ್ಯಕ್ಷರಾದ ನಂಜನಯ್ಯನಮಠ ಕೇಂದ್ರದ ಮೋದಿ ಸರ್ಕಾರವು ಕ್ಯಾಬಿನೇಟ್ ಇಲ್ಲದ ಸರ್ಕಾರವಾಗಿದೆ. ಯಾವುದೆ ಸಚಿವರು ಕಾರ್ಯಪ್ರವೃತ್ತಿಯಾಗಿಲ್ಲ ಕೇವಲ ಮೋದಿಯೇ ಸರ್ವಾದಿಕಾರಿಯಾಗಿ ಮೇರೆಯುತ್ತಿದ್ದಾರೆ ಒಂದು ಕಡೆ ಪ್ರದಾನಿ ನರೇಂದ್ರ ಮೋದಿ ಇನ್ನೊಂದು ಕಡೆ ಅಮೀತ್ ಶಾ ಇದು  ಮೇಕ್ ಇನ್ ಇಂಡಿಯಾದ ಪ್ರತಿರೂಪವಾಗಿದೆ. ದೇಶಕ್ಕೆ ಕಪ್ಪುಹಣ ತಂದು ಜನ್ ದನ್ ಯೋಜನೆಯ ಖಾತೆದಾರರಿಗೆ ೧೫.೦೦ ಲಕ್ಷ ಜಮಾಮಾಡುತ್ತೆನೆಂದು ಹೇಳಿದ ಪ್ರದಾನಿ ಇನ್ನು ಮೌನಿಯಾಗಿದ್ದಾರೆ.  ಒಂದು ಚುನಾವಣೆ ಸೋತಿದ್ದಕ್ಕೆ ಪಕ್ಷದ ಯಾವೊಬ್ಬ ಕಾರ್ಯಕರ್ತನು ಎದೆಗುಂದಬಾರದು ಪ್ರತಿಯೊಬ್ಬ ಕಾರ್ಯಕರ್ತನು ಪುಟಿದೆದ್ದು ಪಕ್ಷ ಸಂಘಟನೆಯಲ್ಲಿ ಸರ್ಕೀಯವಾಗಿ ಪಾಲ್ಗೋಳ್ಳಬೇಕು ಇದಕ್ಕೆ ರಾಷ್ಠ್ರ ಹಾಗೂ ರಾಜ್ಯ ನಾಯಕರು ನಿಮ್ಮೊಂದಿಗೆ ಬೇನ್ನೆಲಬಾಗಿ ನಿಲ್ಲಲ್ಲಿದ್ದಾರೆ. ಪಕ್ಷ ನಿಷ್ಠೆ ಇದ್ದರೆ ಪಕ್ಷ ನಿಮ್ಮನ್ನು ಎಂದೂ ಕೈ ಬಿಡುವದಿಲ್ಲ ಎಂದು ಹೇಳಿದರು.  
ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಶಾಂತಣ್ಣ ಮುದಗಲ್, ಅಂದಣ್ಣ ಅಗಡಿ, ಕೆ.ಪಿ.ಸಿ.ಸಿ. ಸದಸ್ಯರಾದ ಜುಲ್ಲು ಖಾದರಿ, ಮಾಜಿ ಜಿ.ಪಂ. ಉಪಾದ್ಯಕ್ಷರಾದ ಯಂಕಣ್ಣ ಯಾರಾಸಿ, ಕೆ.ಪಿ.ಸಿ.ಸಿ. ವೀಕ್ಷಕರಾದ ಬಸವರಾಜ ಅರಸಿಕೇರಿ, ಕೆ.ಎಮ್. ಸಯ್ಯದ್, ಕೆ.ಎನ್.ಪಾಟೀಲ, ಡಾಗಿ ರುದ್ರೇಶ, ಗಾಳೆಪ್ಪ ಪೂಜಾರ, ಮುತ್ತುರಾಜ ಕುಷ್ಟಗಿ, ಮೌಲಾಹುಸ್ಸೇನಿ ಜಮೇದಾರ, ಬಾಳಪ್ಪ ಬಾರಕೇರ, ಅನಿಕೇತ ಅಗಡಿ, ಶ್ರೀಮತಿ ಇಂದಿರಾಭಾವಿಕಟ್ಟಿ, ವಾಹೀದ್ ಸೂಂಪೂರು, ಕೋಟೇಶ ತಳವಾರ, ಇನ್ನೂ ಅನೇಕ ತಾಲೂಕು ಪಂಚಾಯತ ಸದಸ್ಯರು ಪಕ್ಷದ ವಕ್ತಾರ ಅಕ್ಬರಪಾಷಾಪಲ್ಟನ  ಹಾಗೂ ಪಕ್ಷದ ಮುಖಂಡರು ಉಪಸ್ಥಿತರಿದ್ದರು.
Please follow and like us:
error