ಚುನಾವಣೆಗೆ ನಾಳೆಯಿಂದ ಅಧಿಸೂಚನೆ

ಗ್ರಾಮ
ಪಂಚಾಯತಿ

ಚುನಾವಣೆಗೆ ನಾಳೆಯಿಂದ ಅಧಿಸೂಚನೆ ಹೊರಡಿಸಲಾಗುತ್ತಿದೆ. ನಾಳೆ ದಿ.
15-5-2015ರಿಂದ ನಾಮಪತ್ರಗಳನ್ನು ಆಯಾ ಗ್ರಾಮ ಪಂಚಾಯತ್ ಕಾರ್ಯಾಲಯದಲ್ಲಿ  ಸಲ್ಲಿಸಬೇಕು.ಎಂದು ಕೊಪ್ಪಳ ಜಿಲ್ಲಾಧಿಕಾರಿ ಆರ್.ಆರ್. ಜನ್ನು ಹೇಳಿದ್ದಾರೆ.

           ನಾಮಪತ್ರಗಳನ್ನು ಸಲ್ಲಿಸಲು ಇದೇ ತಿಂಗಳ 22 ಕೊನೆಯ ದಿನಾಂಕವಾಗಿದ್ದು
ನಾಮಪತ್ರಗಳನ್ನು  23ರಂದು
ಪರಿಶೀಲಿಸಲಾಗುತ್ತದೆ. ನಾಮಪತ್ರಗಳನ್ನು ವಾಪಸ್ ಪಡೆಯಲು ಕೊನೆಯ ದಿನಾಂಕ
25-5-2015.  ಜಿಲ್ಲೆಯಾದ್ಯಂತ ದಿ.
2-6-2015ರಂದು ಚುನಾವಣೆ ನಡೆಯಲಿದೆ. ಜಿಲ್ಲೆಯ  148 ಗ್ರಾಮ ಪಂಚಾಯತಿಗಳಿಗೆ ಮತದಾನ ನಡೆಯಲಿದ್ದು
ಮತದಾರರ ಸಂಖ್ಯೆ  689849. ಇದರಲ್ಲಿ ಪುರುಷರು 3,47,672 ಮತ್ತು ಮಹಿಳೆಯರು
3,42,177. ಚುನಾಯಿಸಬೇಕಾದ ಸದಸ್ಯರ ಸಂಖ್ಯೆ 2677 ಇದ್ದು
ಒಟ್ಟು 1003 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಇದರಲ್ಲಿ 183 ಸೂಕ್ಷ್ಮ ಮತ್ತು 73 ಅತೀ
ಸೂಕ್ಷ್ಮ ಮತಗಟ್ಟೆಗಳಿವೆ   ಗ್ರಾಮ ಪಂಚಾಯತಿ ಚುನಾವಣೆ ಕುರಿತಂತೆ ಮಾಹಿತಿ ನೀಡಿದ ಅವರು ಚುನಾವಣೆಗಳು ಮುಕ್ತ ಮತ್ತು
ನ್ಯಾಯಸಮ್ಮತವಾಗಿ ನಡೆಯುವಲ್ಲಿ ಸಾರ್ವಜನಿಕರು ಸಹಕರಿಸಬೇಕೆಂದು ಕೋರಿದ್ದಾರೆ.  ಚುನಾವಣೆಯಲ್ಲಿ ಮತ ನೀಡುವುದು ಕಡ್ಡಾಯವಾಗಿದ್ದು
ಎಲ್ಲರೂ ಮತ ನೀಡಬೇಕು ನೋಟಾ ನಮೂದಿಸುವ ಬಗ್ಗೆ ಚುನಾವಣಾ  ಆಯೋಗದಿಂದ ನಿರ್ದೇಶನಗಳನ್ನು ನಿರೀಕ್ಷಿಸಲಾಗಿದೆ.
 ಮತಗಳ ಎಣಿಕೆಯು ಆಯಾ ತಾಲೂಕ ಕೇಂದ್ರಗಳಲ್ಲಿ
ದಿ. 5-6-2015ರಂದು ನಡೆಯಲಿದೆ ಎಂದು ಹೇಳಿದರು. 
Please follow and like us:
error