ಕೌತಾಳಂ ಜಗದ್ಗುರುಗಳ ಆಶೀರ್ವಾದ ಪಡೆದ ಕೆ.ಎಂ.ಸಯ್ಯದ್.

ಕೊಪ್ಪಳ,ಜೂ,೨೮ – ಪಕ್ಕದ ಆಂದ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ಆದೋನಿ ತಾಲೂಕಿನ ಐತಿಹಾಸಿಕ ಕೌತಾಳಂ ದರ್ಗಾದ ಜಗದ್ಗುರು ಶ್ರೀಖಾದರಲಿಂಗಾ ಬಾಬಾ ಸಾಹೇಬರು ಕೊಪ್ಪಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ರವಿವಾರ ಇಲ್ಲಿನ ಪ್ರವಾಸಿ ಮಂದಿರಕ್ಕೆ ಸಯ್ಯದ್ ಫೌಂಡೇಶನ್ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಕೆ.ಎಂ.ಸಯ್ಯದ್ ರವರು ಭೇಟಿಮಾಡಿ ಅವರಿಂದ ಆಶೀರ್ವಾದ ಪಡೆದರು.ನಂತರ ಮಾತನಾಡಿ ಜುಲೈ ೫ರಂದು ಸಯ್ಯದ್ ಫೌಂಡೇಶನ್ ವತಿಯಿಂದ ನೂತನವಾಗಿ ಸ್ಥಾಪಿಸಲಾದ ಅಬ್ದುಲ್ ಕಲಾಂ ಪತ್ತಿನ ಸೌಹಾರ್ಧ ಸಹಕಾರಿ ಸಂಘ ನೂತನ ಬ್ಯಾಂಕಿನ ಉದ್ಘಾಟನಾ ಸಮಾರಂಭ ಜರುಗಲಿದ್ದು ಇದರ ಉದ್ಘಾಟನೆಗೆ ಆಗಮಿಸುವಂತೆ ಈ ಸಂದರ್ಭದಲ್ಲಿ  ಜಗದ್ಗುರುಗಳನ್ನು ಕೆ.ಎಂ.ಸಯ್ಯದ್ ರವರು ಆಹ್ವಾನಿಸಿದರು.ಈ ಸಂದರ್ಭದಲ್ಲಿ ನಗರಸಭೆಯ ಸದಸ್ಯರಾದ ಸಲೀಂಸಾಬ, ಖಾಜಾವಲಿ ಬನ್ನಿಕೊಪ್ಪ, ಅಂಜುಮನ್ ಕಮೀಟಿಯ ಅಧ್ಯಕ್ಷ ಎಂ.ಪಾಷಾ ಕಾಟನ್, ಖಾಜಾವಲಿ ಮನಿಯಾರ್, ಅಬ್ದುಲ್ ಅಜೀಜ ಮಾನವಿಕರ್, ಸಿರಾಜ್ ಮನಿಯಾರ್, ಫಕೃದ್ದಿನ್ ಚುಕ್ಕನ್‌ಕಲ್, ಸಯ್ಯದ್ ಇಮಾಮ ಹುಸೇನ್ ಸಿಂದೋಗಿ, ಸಯ್ಯದ್ ಗೌಸ್‌ಸಾಬ್, ಜೀಲಾನ್‌ಸಾಬ್ ಸೇರಿದಂತೆ ಕಾರ್ಯಕರ್ತರು ಮತ್ತು ಅಭಿಮಾನಿಗಳು ಪಾಲ್ಗೊಂಡಿದ್ದರು.

Please follow and like us:
error