ಯಲಬುರ್ಗಾ ಶಾಸಕರಿಗೆ ಮಂತ್ರಿಸ್ಥಾನ ಸೂಕ್ತ- ಎಂ.ಬಿ. ಅಳವಂಡಿ.

ಕೊಪ್ಪಳ-05- ಯಲಬುರ್ಗಾ ತಾಲೂಕ ಶಾಸಕ ಬಸವರಾಜ ರಾಯರಡ್ಡಿ ಯವರು ಸುಮಾರು ೪ -೫ ಸಲ ಶಾಸಕರು, ವಸತಿ ಸಚಿವರಾಗಿ ಇದು ಅಲ್ಲದೇ ಲೋಕಸಭಾ ಸದಸ್ಯರಾಗಿ ದೆಹಲಿ ಪ್ರತಿನಿಧಿಯಾಗಿ, ಇನ್ನೂ ಶಾಸನಸಭೆಯ ಅನೇಕ ಸಮಿತಿಯ ಸದಸ್ಯರಾಗಿ ಕೆಲಸ ಮಾಡಿ ಅನುಭವವಿದೆ. ಸಂಘಟನಾ ಚತುರರು, ಒಳ್ಳೆಯ ಬಾಷಣ ಕಾರರು, ಸರಕಾರದ ಯೋಜನೆಗಳ ಸಂಪೂರ್ಣ ಮಾಹಿತಿಯಿದೆ. ಕಪ್ಪು ಚುಕ್ಕೆ ಇಲ್ಲ, ಯಾವುದೇ ಕೆಲಸ ಮಾಡಬೇಕೆಂದು ಇಚ್ಛೆ ಬಂದರೆ ಜಿಗಳೆತರ ಅಂಟಿಕೊಂಡು ಕೆಲಸಮಾಡುತ್ತಾರೆ. ಜ್ಞಾಪಕ ಶಕ್ತಿ, ಬುದ್ದಿವಂತಿಕೆ, ಕಂಪ್ಯೂಟರ್ ತರಹ ಇನ್ನೊಂದು ವಿಶೇಷಗುಣ ಸಂಬಂಧಿಕರು ಯಾರಿಗೂ ತಾಲೂಕ ಪಂಚಾಯತಿ ಜಿಲ್ಲಾ ಪಂಚಾಯತ ಸದಸ್ಯರು ಇಲ್ಲ. ಇದು ಅಲ್ಲದೆ ರಾಜ್ಯ ಮಟ್ಟದ, ಜಿಲ್ಲಾ ಮಟ್ಟದ, ತಾಲೂಕ ಮಟ್ಟದ ಯಾವುದೇ ಸಮಿತಿಗೆ ಸದಸ್ಯರನ್ನು ಮಾಡಿಲ್ಲ ಅವರೂ ಕೂಡಾ ಭಾಗವಹಿಸಿರುವದಿಲ್ಲ. ರಾಜಕೀಯ ಸ್ನೇಹಿತರು, ಅಪಾರ, ಹಿಂದೂಳಿದ ಜಿಲ್ಲೆ, ತಾಲೂಕಾ, ಇವುಗಳ ಅಭಿವೃದ್ಧಿಗಾಗಿ ಅತೀ ಜರೂರ ಮಂತ್ರಿ ಸ್ಥಾನ ಕೂಡುವದು ಸೂಕ್ತ ಎಂದು ಜರೂರ ಮಂತ್ರಿಸ್ಥಾನ ಕೊಡುವದು ಸೂಕ್ತ ಎಂದು ದಲಿತ ಕಾಂಗ್ರೇಸ ಮುಖಂಡರಾದ ಎಂ.ಬ. ಅಳವಂಡಿಯವರ ಮುಖ್ಯಮಂತ್ರಿಗಳು ಸ್ಪಂದಿಸಲು ಒತ್ತಾಯಿಸಿದ್ದಾರೆ. 

   

Please follow and like us:
error